ಹುಬ್ಬಳ್ಳಿ - ಹುಬ್ಬಳ್ಳಿಯ ಕಿಮ್ಸ್ (KIMS, Hubballi) ಉತ್ತರ ಕರ್ನಾಟಕದ (North Karnataka) ಬಡ ರೋಗಿಗಳ ಆಶಾ ಕಿರಣ. ಕೋವಿಡ್ (COVID 19 Pandemic) ಬಂದಾಗಲಂತೂ ಸಹಸ್ರಾರು ಜನರಿಗೆ ಚಿಕಿತ್ಸೆ (Treatment) ನೀಡಿ, ಜೀವದಾನ ಮಾಡಿತ್ತು. ಮೊನ್ನೆಯಷ್ಟೇ ಕಿಡ್ನಿ ಕಸಿ (Kidney Transplant) ಮಾಡೋ ಪ್ರಯೋಗದಲ್ಲಿಯೂ ಯಶಸ್ವಿಯಾಗಿ, ತಾಯಿಯ ಕಿಡ್ನಿಯನ್ನು ಮಗನಿಗೆ ಅಳವಡಿಸಿ ಸೈ ಎನಿಸಿಕೊಂಡಿತ್ತು. ಇದೀಗ ಇಬ್ಬರಿಗೆ ತೆರೆದ ಹೃದಯ ಚಿಕಿತ್ಸೆ (Open Heart Surgery) ನೆರವೇರಿಸಿ ಗಮನ ಸೆಳೆದಿದೆ. ಹೃದಯ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆ (Jayadeva Hospital) ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಎರಡು ತೆರೆದ ಹೃದಯ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಓಪನ್ ಹಾರ್ಟ್ ಸರ್ಜರಿ ಮೂಲಕ ಕಿಮ್ಸ್ ವೈದ್ಯರು ಎರಡು ಜೀವ ಉಳಿಸಿದ್ದಾರೆ. ಕಿಮ್ಸ್ ವೈದ್ಯರಿಂದ ಪ್ರಥಮ ಬಾರಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಇಬ್ಬರಿಗೆ ಓಪನ್ ಹಾರ್ಟ್ ಸರ್ಜರಿ
ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಪ್ರಥಮ ಬಾರಿಗೆ ನಡೆದ ತೆರೆದ ಹೃದಯ ಚಿಕಿತ್ಸೆ ಮಾಡಲಾಗಿದೆ. ಹುಬ್ಬಳ್ಳಿಯ 68 ವರ್ಷದ ಗಂಗಮ್ಮ ಶಿರೋಳ ಎಂಬವರಿಗೆ ತೆರೆದ ಹೃದಯ ಚಿಕಿತ್ಸೆ ನೆರವೇರಿಸಲಾಗಿದೆ.
ಇದನ್ನೂ ಓದಿ: MESCOM ಕೇಂದ್ರದಲ್ಲಿಯೇ ಮಸಾಲೆ ರುಬ್ಬಿಕೊಂಡು ಹೋಗುವ ವ್ಯಕ್ತಿ: ಯಾವ ಅಧಿಕಾರಿಯೂ ತುಟಿಕ್ ಪಿಟಕ್ ಅಂತಿಲ್ಲ
ಗಂಗಮ್ಮ ಅವರಿಗೆ ಎದೆನೋವು ಕಾಣಿಸಿಕೊಂಡು ಲಘು ಹೃದಯಾಘಾತ ಸಂಭವಿಸಿತ್ತು. ಬೆಂಗಳೂರಿನ ಜಯದೇವ ಹೃದ್ರೋಗ ಕೇಂದ್ರಕ್ಕೆ ರೆಫರ್ ಮಾಡಲಾಗಿತ್ತು. ಆದರೆ ಇದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡ ಕಿಮ್ಸ್ ವೈದ್ಯರು, ಡಾ.ಉಲ್ಲಾಸ್ ಮತ್ತು ತಂಡದಿಂದ ಓಪನ್ ಹಾರ್ಟ್ ಸರ್ಜರಿ ಮಾಡಿದೆ.
68 ವರ್ಷ ವಯಸ್ಸಿನಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸೋದು ರಿಸ್ಕ್ ಸಹ ಹೌದು. ಇಂತಹ ರಿಸ್ಕ್ ತೆಗೆದುಕೊಂಡರೂ ವೈದ್ಯರು ತೆರೆದ ಹೃದಯ ಚಿಕಿತ್ಸೆ ಯಶಸ್ವಿಯಾಗಿಸಿ, ಎರಡೇ ದಿನದಲ್ಲಿ ಗಂಗಮ್ಮಳ ಮೊಗದಲ್ಲಿ ನಗು ಬರುವಂತೆ ಮಾಡಿದ್ದಾರೆ.
ಹೃದಯದಲ್ಲಿ ಹೋಲ್ ಬಿದ್ದಾತನಿಗೂ ತೆರೆದ ಶಸ್ತ್ರಚಿಕಿತ್ಸೆ
ಇದೇ ವೇಳೆ ಹೃದಯದಲ್ಲಿ ಹೋಲ್ ಇದ್ದ ವ್ಯಕ್ತಿಗೂ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿದೆ. ಹುಬ್ಬಳ್ಳಿ ನಗರದ ನಾಗೇಶ್ ಮಾದರ ಎಂಬವರಿಗೆ ಸರ್ಜರಿ ಮಾಡಲಾಗಿದೆ. ಹುಟ್ಟಿದಾಗಲೇ ಹೃದಯದಲ್ಲಿ ಹೋಲ್ ಕಾಣಿಸಿಕೊಂಡಿತ್ತು.ಇತ್ತೀಚಿನ ದಿನಗಳಲ್ಲಿ ಅದು ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ತೆರೆದ ಹೃದಯ ಚಿಕಿತ್ಸೆ ಮಾಡಿದ ಕಿಮ್ಸ್ ವೈದ್ಯರು ರಂಧ್ರ ಮುಚ್ಚಿದ್ದಾರೆ. ಹೃದಯದಲ್ಲಿ ರಂಧ್ರದ ಕಾರಣದಿಂದಾಗಿ ಅತಿಯಾದ ಆಯಾಸ, ಉಸಿರಾಟದ ತೊಂದರೆ ಇತ್ಯಾದಿಗಳನ್ನು ಯುವಕ ಎದುರಿಸುತ್ತಿದ್ದನು.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಶ್ಲಾಘನೆ
ವೈದ್ಯರ ಕಾರ್ಯಕ್ಕೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಶ್ಲಾಘಿಸಿದ್ದಾರೆ. ಇದುವರೆಗೆ ಕಿಮ್ಸ್ ನಲ್ಲಿ ತೆರೆದ ಹೃದಯ ಚಿಕಿತ್ಸೆ ಮಾಡಿರಲಿಲ್ಲ. ಮೊದಲ ಪ್ರಯತ್ನದಲ್ಲಿಯೇ ನಮಗೆ ಯಶಸ್ಸು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡೋಕೆ ಸ್ಫೂರ್ತಿ ಸಿಕ್ಕಿದೆ. ಇದರಿಂದ ಉತ್ತರ ಕರ್ನಾಟಕದ ಹೃದಯ ರೋಗಿಗಳಿಗೆ ನೆರವಾಗಿದೆ ಎಂದ ಡಾ. ರಾಮಲಿಂಗಪ್ಪ ತಿಳಿಸಿದ್ದಾರೆ.
ಆರೋಗ್ಯದಿಂದ ಇರೋ ರೋಗಿಗಳು
ತೆರೆದ ಹೃದಯ ಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳು ಆರೋಗ್ಯದಿಂದ ಇದ್ದಾರೆ. ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ ತಂಡದಲ್ಲಿ ಕಿಮ್ಸ್ ನ ಹಾರ್ಟ್ ಸೆಂಟರ್ ಮೇಲ್ವಿಚಾರಕ ಡಾ.ಹೊಸಮನಿ ಹಾಗೂ ಡಾ.ನಾಗೇಂದ್ರ ಹಿರೇಗೌಡ್ರ, ಡಾ.ರಾಜಕುಮಾರ, ಡಾ.ಉಮೇಶ್ ಬೀಳಗಿ, ಡಾ.ಸುರೇಶ್, ಡಾ. ನಿತಿನ್ ಕಡಕೊಳ್ಳ, ಡಾ.ಬಳಿಗಾರ್, ಡಾ.ಪ್ರಶಾಂತ್ ಇದ್ದರು.
ಇದನ್ನೂ ಓದಿ: Belagavi Politics: ಲಖನ್ ಜಾರಕಿಹೊಳಿ ಬೆಂಬಲ ನಮಗೆ ಬೇಕಿಲ್ಲ; ಉಮೇಶ್ ಕತ್ತಿ ಖಡಕ್ ಮಾತು
ಶಸ್ತ್ರ ಚಿಕಿತ್ಸೆ ಮಾಡಿದ ಎರಡೇ ದಿನಕ್ಕೆ ಇಬ್ಬರು ರೋಗಿಗಳು ಚೇತರಿಸಿಕೊಂಡು ಆರಾಮವಾಗಿ ತಿರುಗಾಡುತ್ತಿದ್ದಾರೆ. ಹೃದಯ ಚಿಕಿತ್ಸೆಗಾಗಿ ಸಾಕಷ್ಟು ಜನ ಕಾದು ಕುಳಿತಿದ್ದು, ವಾರಕ್ಕೆ ನಾಲ್ಕೈದು ಶಸ್ತ್ರಚಿಕಿತ್ಸೆ ನೆರವೇರಿಸಲಾಗುವುದು ಎಂದು ವೈದ್ಯ ಡಾ. ಉಲ್ಲಾಸ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕಿಡ್ನಿ ಕಸಿ ಯಶಸ್ವಿಯಾಗಿ ನೆರವೇರಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ