Chikkodi: ಹಿಂದೂಗಳ ವಿರುದ್ಧ ಪ್ರತೀಕಾರದ ಷಡ್ಯಂತ್ರ! ಕೋಮು ಪ್ರಚೋದಿಸುತ್ತಿದ್ದ ಇಬ್ಬರು ಪೊಲೀಸರ ವಶಕ್ಕೆ

ಹಿಂದೂಗಳು ಹಾಗೂ ಹಿಂದು ಸಂಘಟನೆಗಳ ವಿರುದ್ಧ ಪ್ರತೀಕಾರದ ಷಡ್ಯಂತ್ರ, ಕೋಮು ಪ್ರಚೋದಿಸುತ್ತಿದ್ದ ಇಬ್ಬರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ವಾಟ್ಸಪ್ ಗ್ರೂಪ್ ತಯಾರಿಸಿ ಬಾಂಬ್ ತಯಾರಿಯಂತಹ ತರಬೇತಿಗೆ ಉತ್ತೇಜಿಸಲಾಗುತ್ತಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ಆ.02): ಭಾರತದಲ್ಲಿ ಮುಸ್ಲಿಮರಿಗೆ (Muslims) ಅನ್ಯಾಯ ಆಗುತ್ತಿದೆ‌ ಎಂದು ಸಾಮಾಜಿಕ ಜಾಲತಾಣ (Social Media), ಹಳ್ಳಿಹಳ್ಳಿಗೂ ಭೇಟಿ ನೀಡಿ ಮುಸ್ಲಿಂ ಸಮುದಾಯವನ್ನು (Muslim Community) ಉದ್ರೇಕಗೊಳಿಸುತ್ತಿದ್ದ, ಹಿಂದೂಗಳ ಸಂಘಟನೆಗಳ (Hindu Associations) ವಿರುದ್ಧ ಕೋಮು‌ ಪ್ರಚೋದನೆ  (Provoking) ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಗವಾಡ ಪೊಲೀಸರು  (Police) ಬಂಧಿಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಇಂದಿರಾನಗರ ನಿವಾಸಿ ತೌಸಿಫ್ ದೊಂಡಿ ರಾಯಬಾಗಿ (21), ಹಾಗೂ ದೆಹಲಿ ಮೂಲದ  ರೇಹಾನ್ ಅಹ್ಮದ್ ಸಿದ್ಧಿಕಿ ಬಂಧಿತ ಆರೋಪಿಗಳು.

ಬಂಧಿತರ ಪೈಕಿ ತೌಸಿಫ್ ದೊಂಡಿ ರಾಯಬಾಗಿ, ಜಿಲ್ಲೆಯ ವಿವಿಧ ಗ್ರಾಮಗಳು, ಸುತ್ತಮುತ್ತಲು ಹಳ್ಳಿಗಳಲ್ಲೂ ಓಡಾಟ ನಡೆಸಿ ಭಾರತದಲ್ಲಿ ಮುಸ್ಲಿಂರ ವಿರುದ್ಧ ಅನ್ಯಾಯವಾಗುತ್ತಿದೆ. ನಮ್ಮ ಬಾಬರಿ ಮಸೀದಿ ದ್ವಂಸ ಮಾಡಿದ್ದಾರೆ.

ಜನರನ್ನು ಉದ್ರೇಕಿಸುತ್ತಿದ್ದ

ನೂಪುರ್ ಶರ್ಮಾರಂತವರು ಹಾಗೂ ಹಿಂದೂ ಸಂಘಟನೆಯ ಮುಖಂಡರ ಹೇಳಿಕೆ ಮತ್ತು ರಾಜ್ಯದಲ್ಲಿ, ಹಿಜಾಬ್ ಧರಿಸುವ ವಿಷಯವಾಗಿ ಮುಸ್ಲಿಂರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು  ಮುಸ್ಲಿಂ ಕೋಮಿನ ಜನರಿಗೆ ಉದ್ರೇಕಗೊಳಿಸುತ್ತಿದ್ದ ಎಂದು ಎಪ್.ಐ.ಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಸಿಗ್ನಲ್‌ ಆ್ಯಪ್ ಗ್ರೂಪ್ ಕೂಡಾ ಸಕ್ರಿಯ

ಅಷ್ಟೇ ಅಲ್ಲದೇ  ಮುಸ್ಲಿಂ ಜನರ ಮನಸ್ಸಿನಲ್ಲಿ ಕೋಮು ಪ್ರಚೋದನೆ, ಗಲಾಟೆ ಉಂಟುಮಾಡುವಂತಹ ಚಟುವಟಿಕೆಗಳನ್ನು ಮಾಡುತ್ತಿದ್ದನು. ಇನ್ನೂ ಈತನ ಪೋಸ್ಟ್ ಗಳನ್ನು ನೋಡಿದ ದೆಹಲಿ ಮೂಲದ ರೇಹಾನ್ ಅಹ್ಮದ್ ಸಿದ್ಧಿಕಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದಿಸುತ್ತಿದ್ದ. ಇದಲ್ಲದೇ ರೇಹಾನ್ ಅಹ್ಮದ್ ಸಿದ್ಧಿಕಿ ಸಿಗ್ನಲ್‌ ಆ್ಯಪ್ ಮೂಲಕ One Ummah ಎಂಬ ಹೆಸರಿನ ಗ್ರುಪದಲ್ಲಿ ಸೇರಿಸಿದ್ದಾನೆ. ಹಿಂದೂಗಳ ವಿರುದ್ಧ ಪ್ರತಿಕಾರಕ್ಕಾಗಿ ತಯಾರು ಇರುವಂತೆ ಪೋಸ್ಟ್‌ ಹಾಕುತ್ತಾ ಬಂದಿದ್ದಾನೆ‌.

ಬಾಂಬ್ ತಯಾರಿಕೆ ಹಾಗೂ ಇತರೆ ಆಯುಧಗಳನ್ನ ತಯಾರಿಯ ಟ್ರೈನಿಂಗ್

ಇದರ ಜೊತೆಗೆ ತೌಸೀಫ್ ಗೆ ಮತ್ತೊಬ್ಬ ಆರೋಪಿ ರೇಹಾನ್ ತನ್ನ ಮೊಬೈಲ್ ನಂಬರ್ ( 7838483767 ) ನಿಂದ ವ್ಯಾಟ್ಸಪ್ ಗ್ರುಪ್ ರಚಿಸಿಕೊಟ್ಟಿದ್ದಾನೆ. ಆ ಗ್ರುಪ್ ನಲ್ಲಿ ಎಲ್ಲರೂ ಬಲಾಡ್ಯರಾಗಬೇಕು. ಅಂತರಜಾಲವನ್ನು ನೋಡಿ ಬಾಂಬ್ ತಯಾರಿಕೆ ಹಾಗೂ ಇತರೆ ಆಯುಧಗಳನ್ನ ತಯಾರಿಸುವದನ್ನು ಕಲಿತುಕೊಳ್ಳಬೇಕು. ಒಂದು ಗುಂಪುನ್ನು ರಚಿಸಿ ರೆಡಿಯಾಗಿ ನಾನು ನಿಮ್ಮನ್ನು ಬೇರೊಂದು ಸ್ಥಳಕ್ಕೆ ಕರೆಯಿಸಿಕೊಳ್ಳುತ್ತೇನೆ ಅಂತಾ ಆರೋಪಿ ತೌಸೀಫ್ ಮತ್ತು ಮೊಬೈಲ್ ಮತ್ತು ಗೋಗಲ್‌ ಮೀಟ್ ಸಭೆಯಲ್ಲಿ ಹೇಳಿದ್ದಾನೆ.

ಇದನ್ನೂ ಓದಿ: Uttara Kannada: ಉತ್ತರ ಕನ್ನಡದಲ್ಲಿ ಲೋಕ ಅದಾಲತ್; ನಿಮ್ಮ ಕಾನೂನು ಸಮಸ್ಯೆಯನ್ನು ಹೀಗೆ ಪರಿಹರಿಸಿಕೊಳ್ಳಿ

ಜನರ ಎತ್ತಿಕಟ್ಟುತ್ತಿದ್ದ

ಇತ್ತ ಆರೋಪಿ ರೇಹಾನ್ ಅಹ್ಮದ್ ಮಾತುಗಳಿಂದ ಪ್ರಭಾವಿತಗೊಂಡಿದ್ದ ತೌಸೀಪ್, ಹಿಂದೂ ಸಂಘಟನೆಗಳಾದ ವಿಎಚ್ ಪಿ , ಭಜರಂಗದಳ, ಶ್ರೀರಾಮ ಸೇನೆ ಮುಂತಾದ ಸಂಘಟನೆಗಳ ವಿರುದ್ಧ ದ್ವೇಷ ಬೆಳೆಸಿಕೊಂಡು ಹಿಂದೂ ಸಂಘಟನೆಗಳ ವಿರುದ್ಧ ಒಂದಾಗಿ ಹೋರಾಡಲು ಮುಸ್ಲಿಂ ಸಮಾಜದ ಜನರಿಗೆ ಎತ್ತಿಕಟ್ಟುತ್ತಿದ್ದ.

ಇದನ್ನೂ ಓದಿ:  Rain Alert: 20 ಜಿಲ್ಲೆಗಳಿಗೆ ಹವಾಮಾನ ಇಲಾಖೆಯ ಸಂದೇಶ; ಮನೆ ಮೇಲೆ ಕುಸಿದ ಗುಡ್ಡ, ನಾಲ್ವರು ಸಾವು

ಕೋಮು ಪ್ರಚೋದಕ ಹೇಳಿಕೆ ಮತ್ತು ಪೋಸ್ಟ್ ಗಳನ್ನು ಹಾಕುತ್ತಾ ಹಿಂದೂ ಮುಸ್ಲಿಂ ಗಲಾಟೆ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಬಗ್ಗೆ ಸಂಚುರೂಪಿಸುತ್ತಿದ್ದನು. ಹೀಗಾಗಿ ಕಳೆದ ಹಲವು ದಿನಗಳಿಂದ ಈತನ ಚಲನವಲನಗಳನ್ನ ಗಮನಿಸುತ್ತಿದ್ದ‌ ಪೊಲೀಸರು ತೌಸೀಪ್ ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದಿದೆ. ಸದ್ಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
Published by:Divya D
First published: