ಚಿಕ್ಕಮಗಳೂರಿನಲ್ಲಿ ಮತ್ತೆ ಇಬ್ಬರಿಗೆ ಮಂಗನ ಕಾಯಿಲೆ ಸೋಂಕು; ಹೆಚ್ಚಿದ ಭೀತಿ

ಕೆಎಫ್​ಡಿ (ಕಯಾಸನೂರು ಫಾರೆಸ್ಟ್​ ಕಾಯಿಲೆ) ವೈರಸ್​ ಹರಡುತ್ತಿದ್ದು,  ಈ ವೈರಾಣು ಅಸ್ಸಾಂನ ಕೂಲಿ ಕಾರ್ಮಿಕರಲ್ಲಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢೀಕರಿಸಿದೆ.  ಎನ್. ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಲ್ಲಿ ಈ ಸೋಂಕು ಕಂಡು ಬಂದಿದೆ. 

news18-kannada
Updated:February 14, 2020, 11:03 AM IST
ಚಿಕ್ಕಮಗಳೂರಿನಲ್ಲಿ ಮತ್ತೆ ಇಬ್ಬರಿಗೆ ಮಂಗನ ಕಾಯಿಲೆ ಸೋಂಕು; ಹೆಚ್ಚಿದ ಭೀತಿ
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು (ಫೆ.14): ಜಿಲ್ಲೆಯಲ್ಲಿ ಆವರಿಸಿರುವ ಮಂಗನ ಕಾಯಿಲೆ ಸೋಂಕಿಗೆ ಮತ್ತೆ ಇಬ್ಬರು ತುತ್ತಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳ ಹಿಂದೆ ಅಸ್ಸಾಂ, ಮಧ್ಯಪ್ರದೇಶದ ಮೂವರು ಕಾರ್ಮಿಕರಲ್ಲಿ ಮಂಗನ ಕಾಯಿಲೆ ಸೋಂಕು ಕಾಣಿಸಿಕೊಂಡಿತು. ಈಗ ಈ ಸಂಖ್ಯೆ ಐದು ಜನಕ್ಕೆ ಏರಿಕೆಯಾಗಿದೆ. 

ಜಿಲ್ಲೆಯಲ್ಲಿ ಕೆಎಫ್​ಡಿ (ಕಯಾಸನೂರು ಫಾರೆಸ್ಟ್​ ಕಾಯಿಲೆ) ವೈರಸ್​ ಹರಡುತ್ತಿದ್ದು,  ಈ ವೈರಾಣು ಅಸ್ಸಾಂನ ಕೂಲಿ ಕಾರ್ಮಿಕರಲ್ಲಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢೀಕರಿಸಿದೆ.  ಎನ್. ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಲ್ಲಿ ಈ ಸೋಂಕು ಕಂಡು ಬಂದಿದೆ.

ಸೋಂಕು ಹರಡುವ ಹಿನ್ನೆಲೆ ಜಿಲ್ಲಾ ಸರ್ವೇಕ್ಷಣಾ ಘಟಕ ಮುನ್ನೆಚ್ಚರಿಕ ಕ್ರಮಗಳನ್ನ ಕೈಗೊಂಡಿದ್ದು, ಜನರಿಗೆ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗುತ್ತಿದೆ.   ಅಷ್ಟೇ ಅಲ್ಲದೇ ಮಡಬೂರು ಸುತ್ತಮುತ್ತಲಿನ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರೋಗ ನಿರೋಧಕ ಔಷಧಿಯನ್ನ ಸಿಂಪಡಿಸುವ ಮೂಲಕ ರೋಗ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನು ಓದಿ: ನೆರೆ ಇಳಿದು ತಿಂಗಳುಗಳೇ ಕಳೆದರೂ ಇನ್ನೂ ಇಲ್ಲ ಪರಿಹಾರ; ಸಂತ್ರಸ್ತರ ಗೋಳು ಮರೆತಿತಾ ಸರ್ಕಾರ?

ಸೋಂಕು ಹೆಚ್ಚುತ್ತಿರುವ ಹಿನ್ನೆಲೆ  ಎನ್.ಆರ್ ಪುರ ತಾಲೂಕು ಮಾತ್ರವಲ್ಲದೇ ಕೊಪ್ಪ, ಶೃಂಗೇರಿ, ಮೂಡಿಗೆರೆ ಭಾಗದಲ್ಲೂ ವೈದ್ಯರ ತಂಡ ಗ್ರಾಮೀಣ ಭಾಗಗಳಿಗೆ ಭೇಟಿ ನೀಡುತ್ತಿದ್ದು,  ಜನರು ಭಯ ಪಡದಂತೆ ರೋಗದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ