ಜೀರೋ ಟ್ರಾಫಿಕ್​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಎರಡು ತಿಂಗಳಿನ ಮಗು ರವಾನೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ನಿವಾಸಿ ಇಸ್ಮಾಯಿಲ್  ಮತ್ತು  ತಶ್ರತ್ ದಂಪತಿಗಳ ಎರಡನೇ ಮಗು ಇದಾಗಿದೆ

news18-kannada
Updated:March 31, 2020, 10:54 PM IST
ಜೀರೋ ಟ್ರಾಫಿಕ್​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಎರಡು ತಿಂಗಳಿನ ಮಗು ರವಾನೆ
ಪ್ರಾತಿನಿಧಿಕ ಚಿತ್ರ.
  • Share this:
ಶಿವಮೊಗ್ಗ(ಮಾ.31): ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಎರಡು ತಿಂಗಳ ಮಗುವೊಂದನ್ನು ಶಿವಮೊಗ್ಗ ನಗರದ  ಏಂಜಲ್ ಮ್ಯಾಕ್ಸ್ ಆಸ್ಪತ್ರೆಯಿಂದ ಜೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಗಿದೆ. 

ಹೃದಯ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಬೆಂಗಳೂರಿನಲ್ಲಿ ಈಗಾಗಲೇ ಮೂರು ಬಾರಿ ಶಸ್ತ್ರ  ಚಿಕಿತ್ಸೆ ನಡೆಸಲಾಗಿದೆ. ಕಳೆದ ವಾರದ ಹಿಂದೆಯಷ್ಟೆ ಬೆಂಗಳೂರಿನ ಎನ್ ಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಮಗುವಿನ ಹೃದಯದಲ್ಲಿ ರಂಧ್ರವಾಗಿದ್ದು, ರಕ್ತನಾಳ ಬ್ಲಾಕ್​​ ಆಗಿತ್ತು.

ಈ ಹಿನ್ನೆಲೆಯಲ್ಲಿ ಮಗುವನ್ನು ಸುಬ್ಬಯ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದರಿಂದ ನಿನ್ನೆ ಮಧ್ಯಾಹ್ನ ಏಂಜಲ್ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ಅಲ್ಲಿನ ವೈದ್ಯರು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ನಿವಾಸಿ ಇಸ್ಮಾಯಿಲ್  ಮತ್ತು  ತಶ್ರತ್ ದಂಪತಿಗಳ ಎರಡನೇ ಮಗು ಇದಾಗಿದೆ. ಚನ್ನಗಿರಿ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಆ್ಯಂಬ್ಯುಲೆನ್ಸ್ ನಲ್ಲಿ ತೆರಳಲು ಪೊಲೀಸರು ಅನುಮತಿ ನೀಡಿದ್ದರು.

ಇದನ್ನೂ ಓದಿ : ಮೇಕೆಗೂ ಹಾಕಿದ್ರು ಮಾಸ್ಕ್; ಮಾನಸಿಕ ಅಸ್ವಸ್ಥನ ಬಳಿಯೂ ಮಾಸ್ಕ್; ಜಾಗೃತಗೊಂಡ ಬೆಳಗಾವಿ ಜನ

ಫೆ.10 ರಂದು  ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಲೆಮಲ್ಲೂರು ಗ್ರಾಮದ ಸ್ವಾಮಿ ಹಾಗೂ ಸುಧಾ ದಂಪತಿಗಳ 7 ದಿನದ ಮಗುವಿನ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಜಯದೇವ ಆಸ್ಪತ್ರೆಗೆ ಕರೆತರಲಾಗಿತ್ತು.
First published:March 31, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading