• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Doddaballapura: ಶನಿಮಹಾತ್ಮ ದೇಗುಲಕ್ಕೆ ಹೂವಿನ ಹಾರ ಎಂದು ಮಾಂಸ ತಂದುಕೊಟ್ಟ ದುಷ್ಕರ್ಮಿಗಳು!

Doddaballapura: ಶನಿಮಹಾತ್ಮ ದೇಗುಲಕ್ಕೆ ಹೂವಿನ ಹಾರ ಎಂದು ಮಾಂಸ ತಂದುಕೊಟ್ಟ ದುಷ್ಕರ್ಮಿಗಳು!

ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನ

ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನ

ದೇವಾಲಯಕ್ಕೆ ಬಂದ ಕಿಡಿಗೇಡಿಗಳು, ದೇವರಿಗೆ ಪ್ಲಾಸ್ಟಿಕ್ ಪೇಪರ್ ಒಳಗೊಂಡ ಹಾರದಲ್ಲಿ ಮಾಂಸದ ತುಂಡು ಇಟ್ಟು ಸಿಬ್ಬಂದಿಗೆ ನೀಡಿದ್ದಾರೆ. ಇಬ್ಬರು ಅನಾಮಿಕರು ಈ ಕುಕೃತ್ಯ ಎಸಗಿದ್ದು, ಅವರ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ದೇವರಿಗೆ ಹೂ, ಹಣ್ಣುಗಳನ್ನು(Flowers and Fruits) ಅರ್ಪಿಸುವುದು ಸಾಮಾನ್ಯ ಆದರೆ ಇಲ್ಲಿ ಕೆಲ ಕಿಡಿಗೇಡಿಗಳು ಹೂಬಿನೊಂದಿಗೆ ಮಾಂಸದ ತುಂಡುಗಳನ್ನಿಟ್ಟು ದೇಗುಲದ ಸಿಬ್ಬಂದಿಗೆ ನೀಡಿರುವ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (Dofddaballapur) ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದಲ್ಲಿ (Shani Mahatma Temple) ಈ ಘಟನೆ ನಡೆದಿದ್ದು, ದೇವಾಲಯಕ್ಕೆ ಬಂದ ಕಿಡಿಗೇಡಿಗಳು, ದೇವರಿಗೆ ಪ್ಲಾಸ್ಟಿಕ್ ಪೇಪರ್ ಒಳಗೊಂಡ ಹಾರದಲ್ಲಿ ಮಾಂಸದ ತುಂಡು (Meat Pieces)ಇಟ್ಟು ಸಿಬ್ಬಂದಿಗೆ ನೀಡಿದ್ದಾರೆ. ಇಬ್ಬರು ಅನಾಮಿಕರು ಈ ಕುಕೃತ್ಯ ಎಸಗಿದ್ದು, ಅವರ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


15 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನಕ್ಕೆ ಇಬ್ಬರು ಯುವಕರು ಬಂದಿದ್ದಾರೆ. ದೇವರಿಗೆ ಹಾಕಿ ಎಂದು ಹೂವಿನ ಹಾರದ ಮಧ್ಯೆ ಬರುವ ಪ್ಲಾಸ್ಟಿಕ್ ಪೇಪರ್ ಒಳಗಡೆ ಮಾಂಸವಿಟ್ಟು ದೇವಸ್ಥಾನದ ಸಿಬ್ಬಂದಿಗೆ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ದೇವಸ್ಥಾನ ಮಂಡಳಿ ತಿಳಿಸಿಕದೆ. ಈ ಸಂಬಂಧ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ಇದನ್ನೂ ಓದಿ: Mahalingeshwara Temple: ಮಹಾಲಿಂಗೇಶ್ವರ ದೇವರಿಗೆ ಕ್ರೈಸ್ತರ ಸೇವೆ! ಇದು ಪುಟ್ಟ ಊರಿನ ಪುಣ್ಯಕ್ಷೇತ್ರ!


ದೇವಾಲಯದ ಧರ್ಮದರ್ಶಿ ಪ್ರಕಾಶ್ ಘಟನೆ ಬಗ್ಗೆ ಮಾಹಿತಿ ನೀಡುತ್ತಾ ‘ಇಬ್ಬರು ಯುವಕರು ದೇವರ ದರ್ಶನಕ್ಕೆ ಆಗಮಿಸಿದ್ದರು. ದೇವಸ್ಥಾನದ ಆವರಣದಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ, ಈ ವೇಳೆ ಸಿಬ್ಬಂದಿ ಪ್ಲಾಸ್ಟಿಕ್ ಕವರ್ ದೇವಾಲಯದ ಒಳಗೆ ತೆಗೆದುಕೊಂಡು ಹೋಗದಂತೆ ತಡೆದಿದ್ದಾರೆ. ನಂತರ ಯುವಕರು ದೇವರಿಗೆ ಹಾಕಿ ಎಂದು ಒಳಗಡೆ ಹೂವಿನ ಹಾರದ ಮಧ್ಯೆ ಮಾಂಸ ಇಟ್ಟಿದ್ದ ಪ್ಲಾಸ್ಟಿಕ್ ಪೇಪರ್ ಕವರ್ ಅನ್ನು ದೇವಸ್ಥಾನದ ಸಿಬ್ಬಂದಿಗೆ ನೀಡಿ ಹೊರಟು ಹೋಗಿದ್ದಾರೆ’ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ


‘ಸಿಬ್ಬಂದಿ ಪ್ಲಾಸ್ಟಿಕ್ ಕವರ್‌ ತೆರೆಯಲು ಮುಂದಾಗುತ್ತಿದ್ದಂತೆ ಮಾಂಸದ ತುಂಡುಗಳು ಹಾರದಿಂದ ಕೆಳಗೆ ಬಿದ್ದಿವೆ. ಕೂಡಲೇ ಸಿಬ್ಬಂದಿ ಕವರ್ ಹೊರಗೆ ಎಸೆದಿದ್ದಾರೆ. ಈ ಕೃತ್ಯ ಎಸಗಿದ ಕಿಡಿಗೇಡಿಗಳು ದೇವಸ್ಥಾನಕ್ಕೆ ಬಂದು ಹೋಗುವ ದೃಶ್ಯಗಳು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.


ಈ ಕುರಿತು ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

Published by:Precilla Olivia Dias
First published: