ಕೋರ್ಟ್​ನಿಂದ ಸ್ಟೇ ತಂದಿದ್ದು ಏನು ಇಲ್ಲ ಸರ್, ಅದರ ಬಗ್ಗೆ ಚರ್ಚೆ ಯಾಕೆ?: ಸಿದ್ದರಾಮಯ್ಯ ಬಳಿ ಸಚಿವರಿಬ್ಬರ ಮನವಿ!

ಇಂದು ಸದನದಲ್ಲಿ ಇದೇ ವಿಷಯವಾಗಿ ಸಿದ್ದರಾಮಯ್ಯ ಅವರು ನಿಲುವಳಿ ಪ್ರಸ್ತಾಪ ಮಾಡುದ್ದು, ಮಧ್ಯಾಹ್ನದ ಬಳಿಕ ಸದನದಲ್ಲಿ ವಿಷಯ ಪ್ರಸ್ತಾಪ ಮಾಡಲಿದ್ದಾರೆ. ಹೀಗಾಗಿ ಸಚಿವರು ಸಿದ್ದರಾಮಯ್ಯ ಅವರ ಬಳಿ ಬಂದು ವಿಷಯ ಪ್ರಸ್ತಾಪಿಸದಂತೆ ಮನವಿ ಮಾಡಲಿದ್ದಾರೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

 • Share this:
  ಬೆಂಗಳೂರು: ಸಿಡಿ ವಿಷಯವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಿಲುವಳಿ ಪ್ರಸ್ತಾಪ ಆಗುತ್ತಿದ್ದಂತೆ ಸಚಿವರಲ್ಲಿ ಕಳವಳ ಸೃಷ್ಟಿಸಿದೆ. ಆ ಬಳಿಕ ಭೋಜನಕ್ಕೆ ತೆರಳುವಾಗ ವಿಧಾನಸಭಾ ಸಭಾಂಗಣದಲ್ಲಿ ಕೆಲ ಸಚಿವರು ಸಿದ್ದರಾಮಯ್ಯ ಎದುರಿಗೆ ಬಂದು ಮಾತುಕತೆ ನಡೆಸಿದ ಪ್ರಸಂಗ ಇಂದು ನಡೆದಿದೆ.

  ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಬಿಸಿ ಪಾಟೀಲ್ ಅವರು ಸಭಾಂಗಣದ ಆವರಣದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಸಿಡಿ ವಿಷಯವಾಗಿ ತಾವು ಸ್ಟೇ ತಂದ ವಿಚಾರವಾಗಿ ಮಾತುಕತೆ ನಡೆಸಿದರು.

  ನಾವು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದು ಏನು ಇಲ್ಲ ಸರ್. ಸುಮ್ಮನೆ ಯಾಕೆ ಅದರ‌ ಬಗ್ಗೆ ಚರ್ಚೆ ಮಾಡ್ತೀರಿ ಎಂದು ಸಚಿವರಿಬ್ಬರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. ಅದಕ್ಕೆ ಅವರು, ಮಾಡ್ಬೇಕಲ್ರಪ್ಪ, ಅದರ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಬೇಕು ಅಲ್ವಾ ಎಂದ ಸಿದ್ದರಾಮಯ್ಯ ಹೇಳಿದರು. ಅದಕ್ಕೆ ಸಚಿವರು, ಆಯ್ತು ಸರ್, ಅದರ ಬಗ್ಗೆ ಚರ್ಚಿಸಿ, ನಿಮ್ಮ ಗೌರವ ಹೆಚ್ಚುತ್ತೆ ಅಂದರೆ ಚರ್ಚೆ ಮಾಡಿ ಎಂದ ತಿಳಿಸಿದಾಗ, ಸಿದ್ದರಾಮಯ್ಯ ಅವರು, ನಮ್ದಲ್ರಪ್ಪ, ನಿಮ್ಮ ಗೌರವ ಹೆಚ್ಚಾಗಬೇಕು ಅಲ್ವಾ. ಅದಕ್ಕೆ ಚರ್ಚೆ ಮಾಡ್ತಿರೋದು ಎಂದು ನಗುತ್ತಲೇ ‌ಸಚಿವರ ಕಾಲೆಳೆದರು.

  ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಬಹಿರಂಗವಾಗುತ್ತಲೇ ಸಿಎಂ ಬಿಎಸ್​ವೈ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಯಾವುದೇ ಮಾನಹಾನಕಾರಿ ಸುದ್ದಿಯನ್ನು ಪ್ರಸಾರ ಮಾಡದಂತೆ ಆರು ಮಂದಿ ಸಚಿವರು ಕೋರ್ಟ್​ನಿಂದ ಸ್ಟೇ ತಂದಿದ್ದಾರೆ. ಸಚಿವರು ಹೀಗೆ ಏಕಾಏಕಿ ಕೋರ್ಟ್​ನಿಂದ ಸ್ಟೇ ತಂದ ವಿಚಾರವಾಗಿ ಸ್ವತಃ ಬಿಜೆಪಿ ಹೈಕಮಾಂಡ್ ಇವರ ವಿರುದ್ಧ ಗರಂ ಆಗಿತ್ತು. ಹೀಗೆ ಮಾಡುವುದರಿಂದ ತಮ್ಮ ತಪ್ಪನ್ನು ತಾವೇ ತೋರಿಸಿದಂತೆ ಆಗುವುದಿಲ್ಲವೇ. ಇದರಿಂದ ಜನರಿಗೆ ಯಾವ ಸಂದೇಶ ರವಾನೆಯಾಗಲಿದೆ ಎಂದು ಸಚಿವರ ವಿರುದ್ಧ ಬಿಜೆಪಿಗರೇ ಅಸಮಾಧಾನ ವ್ಯಕ್ತಪಡಿಸಿದ್ದರು.

  ಇದನ್ನು ಓದಿ: ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ; ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅನುದಾನ: ಸಚಿವ ಸಂಪುಟದಿಂದ ಕೈಗೊಂಡ ನಿರ್ಣಯಗಳು ಇವು

  ಇನ್ನು ಈ ವಿಷಯವಾಗಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಉಗ್ರವಾಗಿ ಟೀಕಿಸಿದ್ದರು. ಅಲ್ಲದೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಈ ವಿಷಯವಾಗಿ ಸಚಿವರನ್ನು ಟೀಕೆ ಮಾಡಿದ್ದರು. ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದ ಸ್ಟೇ ತಂದ ಸಚಿವರು, ನಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ನಮ್ಮನ್ನು ರಾಜಕೀಯವಾಗಿ ಕೊನೆಗಾಣಿಸಲು ಸಕಲ ಕಸರತ್ತು ನಡೆಯುತ್ತಿವೆ. ಹೀಗಾಗಿ ನಮ್ಮ ವಿರುದ್ಧ ಯಾವುದೇ ರೀತಿಯ ತಿರುಚಿದ ಸುಳ್ಳುಸುದ್ದಿ ಬಹಿರಂಗವಾಗಬಹುದು. ಆದ್ದರಿಂದ ಮುನ್ನೆಚ್ಚರಿಗಾಗಿ ನಾವು ನಮ್ಮ ವಿರುದ್ಧ ಮಾನಹಾನಿ ಮಾಡುವಂತಹ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಕೋರ್ಟ್​ನಿಂದ ಸ್ಟೇ ತಂದಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದರು.

  ಇಂದು ಸದನದಲ್ಲಿ ಇದೇ ವಿಷಯವಾಗಿ ಸಿದ್ದರಾಮಯ್ಯ ಅವರು ನಿಲುವಳಿ ಪ್ರಸ್ತಾಪ ಮಾಡುದ್ದು, ಮಧ್ಯಾಹ್ನದ ಬಳಿಕ ಸದನದಲ್ಲಿ ವಿಷಯ ಪ್ರಸ್ತಾಪ ಮಾಡಲಿದ್ದಾರೆ. ಹೀಗಾಗಿ ಸಚಿವರು ಸಿದ್ದರಾಮಯ್ಯ ಅವರ ಬಳಿ ಬಂದು ವಿಷಯ ಪ್ರಸ್ತಾಪಿಸದಂತೆ ಮನವಿ ಮಾಡಲಿದ್ದಾರೆ.
  Published by:HR Ramesh
  First published: