ಆಪರೇಷನ್ ಕಮಲಕ್ಕೆ ನೆರವಾಗಿದ್ದ ಮಹಾರಾಷ್ಟ್ರದ ಇಬ್ಬರು ಬಿಜೆಪಿ ನಾಯಕರು ಬೆಂಗಳೂರಲ್ಲಿ ಪ್ರತ್ಯಕ್ಷ

ಜತಿನ್ ಮತ್ತು ಮನೀಶ್ ಇಬ್ಬರೂ ಕೂಡ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಆಪ್ತರಷ್ಟೇ ಅಲ್ಲ ಪ್ರಭಾವೀ ಮುಖಂಡರೂ ಆಗಿದ್ಧಾರೆ.

news18-kannada
Updated:August 21, 2019, 3:06 PM IST
ಆಪರೇಷನ್ ಕಮಲಕ್ಕೆ ನೆರವಾಗಿದ್ದ ಮಹಾರಾಷ್ಟ್ರದ ಇಬ್ಬರು ಬಿಜೆಪಿ ನಾಯಕರು ಬೆಂಗಳೂರಲ್ಲಿ ಪ್ರತ್ಯಕ್ಷ
ಕರ್ನಾಟಕ ಬಿಜೆಪಿ ಮುಖಂಡರೊಂದಿಗೆ ಮಹಾರಾಷ್ಟ್ರದ ಜತಿನ್ ಮತ್ತು ಮನೀಶ್
news18-kannada
Updated: August 21, 2019, 3:06 PM IST
ಬೆಂಗಳೂರು(ಆ. 21): ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಆಪರೇಷನ್ ಕಮಲದ ಒಂದು ನೊಗವನ್ನು ಮುಂಬೈನಲ್ಲಿ ಹೊತ್ತಿದ್ದ ಇಬ್ಬರು ರಾಜಕಾರಣಿಗಳು ಏಕಾಏಕಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಜತಿನ್ ಮತ್ತು ಗ್ರಾಮೀಣ ಭಾಗದ ಯುವ ಮೋರ್ಚಾ ಅಧ್ಯಕ್ಷ ಮನೀಶ್ ಇಬ್ಬರೂ ನಿನ್ನೆ ಬೆಂಗಳೂರಿಗೆ ಬಂದಿದ್ದಾರೆ.

ಖುದ್ದು ಯಡಿಯೂರಪ್ಪ ಅವರ ಆಹ್ವಾನದ ಮೇರೆಗೆ ಇವರು ನಿನ್ನೆಯ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವರ ಎಕ್ಸ್​ಕ್ಲೂಸಿವ್ ಫೋಟೋಗಳು ನ್ಯೂಸ್18 ಕನ್ನಡಕ್ಕೆ ಸಿಕ್ಕಿವೆ.

ಇದನ್ನೂ ಓದಿ: ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಲು ವಿಶ್ವನಾಥ್ ಕಾರಣ: ಸಾ.ರಾ. ಮಹೇಶ್ ಆರೋಪ

ಜತಿನ್ ಮತ್ತು ಮನೀಶ್ ಇಬ್ಬರೂ ಕೂಡ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಆಪ್ತರಷ್ಟೇ ಅಲ್ಲ ಪ್ರಭಾವೀ ಮುಖಂಡರೂ ಆಗಿದ್ಧಾರೆ. ಕಾಂಗ್ರೆಸ್ ಮತ್ತು ಜೆಡಿಎಸ್​ನ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ ಅತೃಪ್ತರನ್ನು ಮುಂಬೈನಲ್ಲಿರಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದು ಈ ಇಬ್ಬರು ಮುಖಂಡರೇ. ಹೋಟೆಲ್ ವಾಸ್ತವ್ಯ, ರಕ್ಷಣೆ, ಅವರ ಯೋಗಕ್ಷೇಮ ಇತ್ಯಾದಿಗಳನ್ನು ಇವರು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ತಮ್ಮ ಸಂಪುಟ ವಿಸ್ತರಣೆಯ ಕಾರ್ಯಕ್ರಮಕ್ಕೆ ಇವರಿಬ್ಬರನ್ನೂ ಆಹ್ವಾನಿಸಿದ್ದರು. ನಿನ್ನೆ ಬಂದ ಜತಿನ್ ಮತ್ತು ಮನೀಶ್ ಇಬ್ಬರೂ ಕೂಡ ಯಡಿಯೂರಪ್ಪ, ಡಾ. ಅಶ್ವತ್ಥ ನಾರಾಯಣ್, ಆರ್. ಅಶೋಕ್ ಮತ್ತಿತರರ ಜೊತೆ ಒಂದಷ್ಟು ಹೊತ್ತು ಚರ್ಚೆ ನಡೆಸಿ ಫೋಟೋಗಳಿಗೂ ಪೋಸ್ ಕೊಟ್ಟರು. ಮೈತ್ರಿಪಾಳಯದ ಅತೃಪ್ತ ಶಾಸಕರನ್ನು ಮುಂಬೈನಲ್ಲಿರಿಸುವ ಕಾಯಕದಲ್ಲಿ ಆರ್. ಅಶೋಕ್ ಮತ್ತು ಅಶ್ವತ್ಥ್ ನಾರಾಯಣ್ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಇದೇ ಕಾರಣಕ್ಕೆ ಮನೀಶ್ ಮತ್ತು ಜತಿನ್ ಜೊತೆ ಇವರಿಬ್ಬರಿಗೆ ನಿಕಟ ಸಂಬಂಧ ಬೆಳೆದಿದೆ.

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
Loading...

First published:August 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...