ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಚ್​​ ಗಳು ಪರಸ್ಪರ ಡಿಕ್ಕಿ; ಪ್ರಾಣಾಪಾಯದಿಂದ ಪಾರಾದ ಜನರು

ಎರಡು ಲಾಂಚ್ ಗಳಲ್ಲಿ 400 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾಂಚ್ ನ ಟಿಕೆಟ್ ನಿರ್ವಾಹಕರು, ಮತ್ತು ಸಿಬ್ಬಂದಿಗಳು  ಲಾಂಚ್ ಚಾಲನೆ  ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

G Hareeshkumar | news18
Updated:September 11, 2019, 1:49 PM IST
ಶರಾವತಿ ಹಿನ್ನೀರಿನಲ್ಲಿ ಎರಡು ಲಾಂಚ್​​ ಗಳು ಪರಸ್ಪರ ಡಿಕ್ಕಿ; ಪ್ರಾಣಾಪಾಯದಿಂದ ಪಾರಾದ ಜನರು
ಲಾಂಚ್​​
  • News18
  • Last Updated: September 11, 2019, 1:49 PM IST
  • Share this:
ಶಿವಮೊಗ್ಗ(ಸೆ.11): ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಎರಡು ಲಾಂಚ್ ಗಳು ಪರಸ್ಪರ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಬಳಿ ನಡೆದಿದೆ.

ಹೊಳೆ ಬಾಗಿಲು ಹಾಗೂ ಸಿಗಂದೂರು ನಡುವೆ ಸಂಚರಿಸುವ ಲಾಂಚ್ ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಲಾಂಚ್  ಹಿನ್ನೀರಿನ ದಡದ ಸಮೀಪ ಇದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಡಿಕ್ಕಿಯಾದ ರಬಸಕ್ಕೆ ಲಾಂಚ್ ನ ಡೈವರ್ ಭಾಗದ ಮೇಲ್ಚಾವಣಿ ಹಾನಿಯಾಗಿದೆ.

ಎರಡು ಲಾಂಚ್ ಗಳಲ್ಲಿ 400 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾಂಚ್ ನ ಟಿಕೆಟ್ ನಿರ್ವಾಹಕರು, ಮತ್ತು ಸಿಬ್ಬಂದಿಗಳು  ಲಾಂಚ್ ಚಾಲನೆ  ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ವಾಗಿದೆ ಈ ಬಗ್ಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸೆಲ್ಫಿ ಗೀಳಿಗೆ ಇಬ್ಬರು ಯುವಕರು ಬಲಿ; ತುಂಗಭದ್ರ ಡ್ಯಾಂ ಬಳಿ ಸೆಲ್ಪೀ ತೆಗೆದುಕೊಳ್ಳುವ ಮುನ್ನ ಎಚ್ಚರ....!

ಎರಡು ತಿಂಗಳು ಹಿಂದೆ ಲಾಂಚ್​ಗೆ ಹತ್ತುವ ಸಂದರ್ಭದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಬಸ್ ಶರಾವತಿ ಹಿನ್ನೀರಿಗೆ ಇಳಿದು ಭಾರಿ ಅನಾಹುತವೊಂದು ತಪ್ಪಿತ್ತು. ಸಿಗಂದೂರು ಕಡೆಯಿಂದ ಖಾಸಗಿ ಬಸ್ ಸಾಗರಕ್ಕೆ ಹೊರಟಿತ್ತು. ಬಸ್​ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ