ಕೊಡಗು, ಕೇರಳದ ನೋವು, ವಿಷಾದ, ಹತಾಶೆ, ಚುಚ್ಚುಮಾತುಗಳ ನಡುವೆ ಮನಸ್ಸು ಪ್ರಫುಲ್ಲಗೊಳಿಸುವ ಎರಡು ಘಟನೆ...

news18
Updated:August 21, 2018, 6:02 PM IST
ಕೊಡಗು, ಕೇರಳದ ನೋವು, ವಿಷಾದ, ಹತಾಶೆ, ಚುಚ್ಚುಮಾತುಗಳ ನಡುವೆ ಮನಸ್ಸು ಪ್ರಫುಲ್ಲಗೊಳಿಸುವ ಎರಡು ಘಟನೆ...
news18
Updated: August 21, 2018, 6:02 PM IST
- ಚಂದ್ರಶೇಖರ್ ಮಂಡೆಕೋಲು, ನ್ಯೂಸ್ 18 ಕನ್ನಡ 

ಬೆಂಗಳೂರು ( ಆಗಸ್ಟ್ 21) :  ಈ ಬಾರಿ ಬಕ್ರಿದ್ ಹಬ್ಬಕ್ಕೆ ಹೊಸ ಉಡುಪು ಕೊಳ್ಳಲು ತನ್ನ ತಂದೆಯಿಂದ ಪಡೆದು ಸಂಗ್ರಹಿಸಿಟ್ಟಿದ್ದ 1 ಸಾವಿರ ರೂಪಾಯಿಯನ್ನು ಬಾಲಕನೊಬ್ಬ ಕೊಡಗಿನ ನೆರೆ ಪಿಡಿತರಿಗೆ ನೀಡಿ ಮಾನವಿಯತೆ ಮರೆದಿದ್ದಾನೆ. 

ಈ ಬಾಲಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಪುನಗರ ನದೀಮ್  ಎಂಬುವವರ ಪುತ್ರ ಝಿಯಾನ್ ಅಹ್ಮದ್. ಇತ ಬೆತನಿ ಶಾಲೆಯಲ್ಲಿ ಎಲ್ ಕೆಜಿ ಕಲಿಯುತ್ತಿದ್ದಾನೆ. 

ಪೀಸ್ ಆ್ಯಂಡ್  ಅವೇರ್​ ನೆಸ್ ಟ್ರಸ್ಟ್ ಅಧ್ಯಕ್ಷ  ಬಿಳಗುಳ ಅವರಿಗೆ ಹಸ್ತಾಂತರಿಸಿದ್ದಾನೆ. ಮಹಾಮಳೆಗೆ ಕೊಡಗು ಜಿಲ್ಲೆ ತತ್ತರಿಸಿದೆ. ಇಂತಹ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ  ಬಕ್ರೀದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸದಿರಲು ಮುಸ್ಲಿಮ್ ಸಮುದಾಯದವರು ನಿರ್ಧರಿಸಿದ್ದಾರೆ. 

ಈ ವಿಚಾರವನ್ನು ತನ್ನ ಪೋಷಕರಿಂದ ತಿಳಿದ ಬಾಲಕ, ನಾನು ಈ ಬಾರಿಯು ಬಕ್ರೀದ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವುದಿಲ್ಲ. ಹಳೆ ಬಟ್ಟೆಯಲ್ಲಿ ಹಬ್ಬವನ್ನು ಆಚರಿಸುತ್ತೇನೆ. ಹೊಸ ಬಟ್ಟೆಯನ್ನು ಖರೀದಿಸಲು ಇಟ್ಟಿದ್ದ ಹಣವನ್ನು ನಿರಾಶ್ರಿತರ ನೇರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿ ಕೊಡಿ ಎಂದು ಹೇಳಿ ಹಣವನ್ನು ಹಸ್ತಾಂತರಿಸಿದ್ದಾನೆ.  

ಇದೇ ರೀತಿ ಕೇರಳದಲ್ಲಿ ಆಗಸ್ಟ್​ 14ರಂದು ನಡೆದ ಘಟನೆ.

ಕೊಚ್ಚಿಯ ಸಿದ್ದೀಕ್​ ಮಲಶ್ಶೇರಿ-ಫಾತಿಮಾ ದಂಪತಿಯ ಹರೂನ್​ ಮತ್ತು ದಿಯಾ ಎಂಬಿಬ್ಬರು ಮಕ್ಕಳು. 2 ವರ್ಷಗಳಿಂದ ಒಂದು ಸ್ಟಡಿ ಟೇಬಲ್​ ಕೊಳ್ಳಲೆಂದು ಹಣ ಕೂಡಿಡುತ್ತ ಬಂದಿದ್ದರು. ಆ ದುಡ್ಡನ್ನು ಯಾರು ಕೇಳಿದರೂ ಕೊಡುತ್ತಲೇ ಇರಲಿಲ್ಲ.. ಎಷ್ಟೆಂದರೆ ಒಮ್ಮೊಮ್ಮೆ ಮೀನು ಕೊಳ್ಳಲು ದುಡ್ಡು ಕಡಿಮೆಯಾದಾಗ ಚಿಲ್ಲರೆ ಕೊಡು ಮಗಾ ಎಂದರೂ ಅವರು ಕೊಡುತ್ತಿರಲಿಲ್ಲ.

ಆದರೆ ಕೇರಳದ ನೆರೆ ಕಂಡು ಆ ಮಕ್ಕಳೇ ಖುದ್ದಾಗಿ ಅಮ್ಮನಲ್ಲಿ ಆ ಎಲ್ಲಾ ದುಡ್ಡು ಕೊಟ್ಟಿದ್ರು. ಆ 2210 ರೂಪಾಯಿಯನ್ನೂ ಸಿದ್ದೀಕ್​ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳಿಸಿಕೊಟ್ಟಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ನೆರೆಯ ಬಗ್ಗೆ ಏನೇನೋ ಹುಚ್ಚಾಟದ ಕಮೆಂಟ್​ ನೋಡಿದರೆ, ನೆರೆಯಂತೆ ಅವರವರ ಮನದ ಕೊಳೆಯೇ ಕಾಣಿಸುತ್ತಿದೆ. ಅದಕ್ಕೇ ಕವಿಯೊಬ್ಬ ಹೀಗೆ ಕವಿತೆ ಬರೆದ.

ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ. ಗುಣವಿರುವ ಮನುಜರೆಲ್ಲ ಮಕ್ಕಳಂತೆ. ಮಕ್ಕಳಿಗು ದೇವರಿಗೂ ಬೇಧವಿಲ್ಲ ಇಬ್ಬರ ಮನದಲು ಕಪಟವಿಲ್ಲ.
First published:August 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ