ಕೇರಳದಲ್ಲಿ ಅಪಘಾತ: ಚಿತ್ರದುರ್ಗ ಹಿರಿಯೂರು ಮೂಲದ ಇಬ್ಬರು ಸಾವು

ಮಂಗಳವಾರ(ನಿನ್ನೆ) ರಾತ್ರಿ ಈ ಅಪಘಾತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆಯ ಜೆಡಿಎಸ್ ಸದಸ್ಯ ಪಾಂಡುರಂಗ (35) ಮತ್ತು ಐಮಂಗಲದ ಮತ್ತೋರ್ವ ಪ್ರಭಾಕರ್ ಎಂಬುವವರು ಮೃತರು ಎಂದು ಗುರುತಿಸಲಾಗಿದೆ.

news18-kannada
Updated:January 15, 2020, 9:50 AM IST
ಕೇರಳದಲ್ಲಿ ಅಪಘಾತ: ಚಿತ್ರದುರ್ಗ ಹಿರಿಯೂರು ಮೂಲದ ಇಬ್ಬರು ಸಾವು
ಕಾರು ಅಪಘಾತದ ದೃಶ್ಯ
  • Share this:
ನವದೆಹಲಿ(ಜ.15): ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ಇಬ್ಬರು ಮೃತಪಟ್ಟಿರುವ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ. ಕೇರಳ ಪ್ರವಾಸಕ್ಕೆಂದು ತೆರಳಿದ್ದ ಚಿತ್ರದುರ್ಗದ ಇಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೇ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸ್​​​ ಮೂಲಗಳು ತಿಳಿಸಿವೆ.

ಮಂಗಳವಾರ(ನಿನ್ನೆ) ರಾತ್ರಿ ಈ ಅಪಘಾತ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆಯ ಜೆಡಿಎಸ್ ಸದಸ್ಯ ಪಾಂಡುರಂಗ (35) ಮತ್ತು ಐಮಂಗಲದ ಮತ್ತೋರ್ವ ಪ್ರಭಾಕರ್ ಎಂಬುವವರು ಮೃತರು ಎಂದು ಗುರುತಿಸಲಾಗಿದೆ.

ಪ್ರವಾಸಿಗರ ಕಾರು ಮತ್ತು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಇಬ್ಬರು ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ. ಈ ವಿಚಾರವನ್ನು ಮೃತ ಕುಟುಂಬಗಳಿಗೆ ತಿಳಿಸಿದ್ದೇವೆ ಎಂದು ಸ್ಥಳೀಯ ಪೊಲೀಸ್​​ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಮುಂದುವರಿದ ಕಸರತ್ತು: ಸೋನಿಯಾ ಬೆನ್ನಲ್ಲೇ ಸಿದ್ದರಾಮಯ್ಯ ರಾಹುಲ್​ ಜತೆ ಚರ್ಚೆ

ಇನ್ನು ಹಿರಿಯೂರು ನಗರಸಭೆ ಚುನಾವಣೆಗೆ ಪಾಂಡುರಂಗ ಅವಿರೋಧವಾಗಿ ಆಯ್ಕೆಯಾಗಿದ್ದರು ಎನ್ನಲಾಗಿದೆ. ಕಳೆದ ವರ್ಷ ಮೇ 29ರಂದು ನಡೆದ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಪಾಂಡುರಂಗ ಎದುರು ಪಕ್ಷೇತರ ಅಭ್ಯರ್ಥಿ ಈರಲಿಂಗೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬಳಿಕ ಚುನಾವಣೆಗೂ ಮುನ್ನವೇ ಪಕ್ಷೇತರ ಅಭ್ಯರ್ಥಿ ನಾಮಪತ್ರ ಹಿಂಪಡೆದ ಕಾರಣ ಪಾಂಡುರಂಗ ಅವಿರೋಧ ಆಯ್ಕೆಯಾಗಿದ್ದರು.
First published: January 15, 2020, 9:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading