ಕೊಪ್ಪಳ: ಹಣದ ವ್ಯವಹಾರ (Money) ಅಂದ್ರೆ ಅಲ್ಲಿ ಕೊಂಚ ಏರಿಳಿತ ಉಂಟಾಗುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಹಣ ಹಿಂದಿರುಗಿಸುವ ಸಮಯದಲ್ಲಿಯೂ ಹೆಚ್ಚು ಕಡಿಮೆ ಆಗುತ್ತದೆ. ಆದ್ರೆ ಸಾಲ (Loan) ಕೊಡೋದು ತಡವಾಯ್ತು ಅಂತ ಸಾಲಗಾರರ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಬಾಲಕನನ್ನು ಅರಳಿ ಮರಕ್ಕೆ ಕಟ್ಟಿ ಕತ್ತು, ಕೈ-ಕಾಲುಗಳಿಗೆ ಹೊಡೆದಿದ್ದಾರೆ. ಬಾಲಕನ (boy) ಖಾಸಗಿ ಅಂಗಕ್ಕೂ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೊಪ್ಪಳದಲ್ಲಿ ತಂದೆ ಮಾಡಿದ ಸಾಲಕ್ಕೆ ಮಗನ ಮೇಲೆ ಹಲ್ಲೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ (Kushtagai, Koppal) ಕೆ ಹೂಸೂರಿನಲ್ಲಿ ಘಟನೆ ನಡೆದಿದ್ದು. 14 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.
ಕನಕರಾಯಪ್ಪ, ರಾಜೇಶ್ವರಿ ಸೇರಿ 6 ಜನರ ವಿರುದ್ಧ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. 14 ವರ್ಷದ ಬಾಲಕನನ್ನು ಗಿಡಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ.
40 ಸಾವಿರ ರೂಪಾಯಿ ಸಾಲ
ಕನಕರಾಯಪ್ಪ, ರಾಜೇಶ್ವರಿ ಎಂಬರು ಬಾಲಕನ ತಂದೆಗೆ 40 ಸಾವಿರ ರೂಪಾಯಿ ಸಾಲ ಕೊಟ್ಟಿದ್ದರು. 30 ಸಾವಿರ ರೂಪಾಯಿ ಸಾಲ ಮರುಪಾವತಿಸಿದ್ದಾರೆ. 10 ಸಾವಿರ ರೂಪಾಯಿ ಅಸಲು ಮತ್ತು 4 ಸಾವಿರ ರೂಪಾಯಿ ಬಡ್ಡಿಯನ್ನು ಬಾಕಿ ಉಳಿಸಿಕೊಂಡಿದ್ದರು. ಸಾಲ ಮರುಪಾವತಿಸಲು ತಡ ಮಾಡಿದ್ದಕ್ಕೆ ಮಗನ ಮೇಲೆ ಹಲ್ಲೆ ನಡೆಸಲಾಗಿದೆ. 14 ಸಾವಿರ ರೂಪಾಯಿ ಕೊಡುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.
ಬಾಲಕನ ತಾಯಿಯಿಂದ ದೂರು ದಾಖಲು
ಈ ಸಂಬಂಧ ಕೊಪ್ಪಳ ಎಸ್ಪಿ ಅವರಿಗೆ ಆರು ಜನರ ವಿರುದ್ಧ ದೂರು ಸಹ ಸಲ್ಲಿಕೆ ಮಾಡಿದ್ದಾರೆ. ಅರಳಿ ಮರಕ್ಕೆ ಮಗನನ್ನು ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೆಜ್ಜೇನು ದಾಳಿಗೆ ಕೋಟಿ ಬೆಲೆಯ 2 ಕುದುರೆ ಸಾವು
ತುಮಕೂರು: ಜಿಲ್ಲೆಯ ಕುಣಿಗಲ್ನಲ್ಲಿ ಹೆಜ್ಜೇನು ದಾಳಿಗೆ 2 ಗಂಡು ಕುದುರೆಗಳು ಸಾವನ್ನಪ್ಪಿವೆ. ಕುಣಿಗಲ್ ಸ್ಟಡ್ ಫಾರಂನಲ್ಲಿ ಕುದುರೆಗಳನ್ನು ಮೇಯಲು ಬಿಟ್ಟಿದ್ದಾಗ ಹೆಜ್ಜೇನು ದಾಳಿ ಮಾಡಿದೆ.
ಎರಡು ಕುದುರೆಗಳಿಗೆ ಚಿಕಿತ್ಸೆ ನೀಡಿದ್ರೂ ಫಲಕಾರಿಯಾಗದೇ ಸಾವನ್ನಪ್ಪಿವೆ. ಒಂದು ಕುದುರೆಯನ್ನು ಅಮೆರಿಕದಿಂದ ಹಾಗೂ ಇನ್ನೊಂದನ್ನು ಐರ್ಲೆಂಡ್ನಿಂದ 6 ವರ್ಷದ ಹಿಂದೆ ತರಲಾಗಿತ್ತು. ಒಂದೊಂದು ಕುದುರೆಯನ್ನ 1 ಕೋಟಿಗೆ 6 ವರ್ಷದ ಹಿಂದೆ ಖರೀದಿಸಲಾಗಿತ್ತು.
ಪಿಲ್ಲರ್ ಬಿದ್ದು ಸಾವು
ಬೆಂಗಳೂರು: ಬೆಂಗಳೂರಿನ ಆನೇಕಲ್ ಬಳಿ ಮನೆಯ ಪಿಲ್ಲರ್ ಬಿದ್ದು ವ್ಯಕ್ತಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಒರಿಸ್ಸಾ ಮೂಲದ ಗೌರಿನ್ ಶಿಯೋಲ್ ಮೃತ ದುರ್ದೈವಿ. ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಆಗಿದ್ದ ಶಿಯೋಲ್ ಮನೆ ಪಕ್ಕ ದೊಡ್ಡ ಮನೆ ನಿರ್ಮಾಣ ಆಗ್ತಿತ್ತು.
ಈ ವೇಳೆ ಪಕ್ಕದ ಮನೆಯ ಕಾಂಕ್ರಿಟ್ ಪಿಲ್ಲರ್, ಶಿಯೋಲ್ಗೆ ಬಾಡಿಗೆಗೆ ಇದ್ದ ಶೀಟ್ ಮನೆ ಮೇಲೆ ಬಿದ್ದಿದೆ. ಶೀಟ್ ಪುಡಿ ಪುಡಿಯಾಗಿ ಒಳಗೆ ಮನೆಯಲ್ಲಿ ಮಲಗಿದ್ದ ಶಿಯೋಲ್ ಮೇಲೆ ಪಿಲ್ಲರ್ ಬಿದ್ದಿದೆ. ತಲೆಗೆ ಬಲವಾಗಿ ಪೆಟ್ಟು ಬಿದ್ದು ಶಿಯೋಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ನೆರೆ ಮನೆಯವರ ನಿರ್ಲಕ್ಷ್ಯಕ್ಕೆ ಶಿಯೋಲ್ ಬಲಿಯಾಗಿದ್ದಾನೆ.
1.28 ಕೋಟಿ ನಕಲಿ ನೋಟು ವಶಕ್ಕೆ
ಬೆಂಗಳೂರಲ್ಲಿ ಸಿಸಿಬಿ ಆರ್ಥಿಕ ಅಪರಾಧ ದಳ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಕಲಿ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 1 ಕೋಟಿ 28 ಲಕ್ಷ ಬೆಲೆಯ ನಕಲಿ ನೋಟುಗಳನ್ನ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: KGF Babu: ನಮ್ಮ ಪಕ್ಷಕ್ಕೆ ಬನ್ನಿ; ಕಾಂಗ್ರೆಸ್ನಿಂದ ಅಮಾನತ್ತಾದ ಕೆಜಿಎಫ್ ಬಾಬು ಸೆಳೆಯಲು ಪ್ರಯತ್ನ
ಬೆಂಗಳೂರಲ್ಲಿ ಸಿಸಿಬಿ ಆರ್ಥಿಕ ಅಪರಾಧ ದಳ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಕಲಿ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಲಾಗಿದೆ.
ತಮಿಳುನಾಡು ಮೂಲದ ಪಿಚ್ಚಿಮುತ್ತು, ಮಣಿಯನ್ ಸೇರಿದಂತೆ ಮೂವರು, ನಕಲಿ ನೋಟುಗಳನ್ನು ಕೊಟ್ಟು ಅಸಲಿ ನೋಟುಗಳನ್ನು ಪಡೆಯಲು ಬೆಂಗಳೂರಿಗೆ ಬಂದಿದ್ರು. ಸದ್ಯ 1 ಕೋಟಿ 28 ಲಕ್ಷ ಬೆಲೆಯ ನಕಲಿ ನೋಟುಗಳನ್ನ ಜಪ್ತಿ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ