HOME » NEWS » State » TWO GOVERNMENT OFFICERS IN THE SAME POST IN RAICHUR MAK

ವರ್ಗಾವಣೆಯಾದರೂ ಕುರ್ಚಿ ಬಿಡದ ಅಧಿಕಾರಿ, ರಾಯಚೂರಿನಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು..!

ದಾವಲ್ ಸಾಬ್ ಮಾನ್ವಿಯಿಂದ ಜನವರಿ 21 ರಂದು ಬಿಡುಗಡೆ ಹೊಂದಿದ್ದು, ಇದೀಗ ಸಿಂಧನೂರು ಕಚೇರಿಗೆ ಆಗಮಿಸಿದ್ದಾರೆ. ಆದರೆ, ವರ್ಗಾವಣೆಗೊಂಡಿರುವ ಅಧಿಕಾರಿ ದೇಸಾಯಿ ತಮ್ಮ ಅಧಿಕಾರವನ್ನು ಬಿಟ್ಟುಕೊಡುತ್ತಿಲ್ಲ. ಹೀಗಾಗಿ  ಚಂದ್ರಶೇಖರ್ ದೇಸಾಯಿ ಮತ್ತು  ದಾವಲ್ ಸಾಬ್ ಒಂದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.

news18-kannada
Updated:January 23, 2020, 8:58 PM IST
ವರ್ಗಾವಣೆಯಾದರೂ ಕುರ್ಚಿ ಬಿಡದ ಅಧಿಕಾರಿ, ರಾಯಚೂರಿನಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು..!
ದಾವಲ್ ಸಾಬ್ ಮತ್ತು ಚಂದ್ರಶೇಖರ ದೇಸಾಯಿ.
  • Share this:
ರಾಯಚೂರು : ವರ್ಗಾವಣೆ ಆಗಿದ್ರೂ ಕುರ್ಚಿ ಬಿಟ್ಟು ಹೋಗದ ಅಧಿಕಾರಿಯಿಂದಾಗಿ ಒಂದೇ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ‌ ಜೆಸ್ಕಾಂ ಕಚೇರಿಯಲ್ಲಿ ನಡೆದಿದೆ.

ವರ್ಗಾವಣೆ ಆಗಿ 2 ತಿಂಗಳು ಕಳೆದರೂ ಚಂದ್ರಶೇಖರ ದೇಸಾಯಿ ಎಂಬ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್  ಕುರ್ಚಿ ಬಿಡುತ್ತಿಲ್ಲ. ಕಳೆದ ನವೆಂಬರ್ 29ರಂದು ಇವರನ್ನು ಮಾನ್ವಿ ತಾಲೂಕಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಚಂದ್ರಶೇಖರ್ ದೇಸಾಯಿ ಜಾಗಕ್ಕೆ ‌ಮಾನವಿ ಎಇಇ  ದಾವಲ್ ಸಾಬ್ ರನ್ನು  ನಿಯೋಜಿಸಲಾಗಿದೆ. ನಿಗಮದ ಹಿತದೃಷ್ಟಿಯಿಂದ ಇಬ್ಬರಿಗೂ ವರ್ಗಾವಣೆ ಮಾಡಲಾಗಿದೆ.

ಈ‌ ಮಧ್ಯೆ ದಾವಲ್ ಸಾಬ್ ಮಾನ್ವಿಯಿಂದ ಜನವರಿ 21 ರಂದು ಬಿಡುಗಡೆ ಹೊಂದಿದ್ದು, ಇದೀಗ ಸಿಂಧನೂರು ಕಚೇರಿಗೆ ಆಗಮಿಸಿದ್ದಾರೆ. ಆದರೆ, ವರ್ಗಾವಣೆಗೊಂಡಿರುವ ಅಧಿಕಾರಿ ದೇಸಾಯಿ ತಮ್ಮ ಅಧಿಕಾರವನ್ನು ಬಿಟ್ಟುಕೊಡುತ್ತಿಲ್ಲ. ಹೀಗಾಗಿ  ಚಂದ್ರಶೇಖರ್ ದೇಸಾಯಿ ಮತ್ತು  ದಾವಲ್ ಸಾಬ್ ಒಂದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.

ಚಂದ್ರಶೇಖರ ದೇಸಾಯಿ ಸಿಂಧನೂರಿನಲ್ಲಿ 11 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಸರ್ಕಾರ ಇರಲಿ. ಯಾರೇ ಶಾಸಕರಾಗಲಿ ಇವರು ಮಾತ್ರ ಬದಲಾವಣೆ ಆಗಿಲ್ಲ. ನಾಲ್ಕಾರು ಬಾರಿ ವರ್ಗಾವಣೆ ಆದೇಶವಾಗಿದ್ದರೂ ಈ ವರ್ಗಾವಣೆಯನ್ನು ರದ್ದುಪಡಿಸಿಕೊಂಡು ಮತ್ತೆ ಇಲ್ಲಿಗೆ ಬಂದಿದ್ದಾರೆ. ಈ ಮಧ್ಯೆ ನವಂಬರ್ 26 ರಂದು ನಿಗಮದಿಂದ ಮಾನ್ವಿ ತಾಲೂಕಿಗೆ ವರ್ಗಾವಣೆ ಆದೇಶ ಕಳುಹಿಸಿದ್ದರೂ ಈ ಆದೇಶಕ್ಕೂ ದೇಸಾಯಿ ಡೋಂಟ್​ ಕೇರ್ ಎನ್ನುತ್ತಿದ್ದಾರೆ.

ಈ ವರ್ಗಾವಣೆ ವಿಚಾರವನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಲು ಕಚೇರಿಗೆ ತೆರಳಿದರೆ, ಮಾಧ್ಯಮದವರು ಆಗಮಿಸುತ್ತಿದ್ದಂತೆ ಕಚೇರಿಯನ್ನು ಬಿಟ್ಟು ಪರಾರಿಯಾಗುತ್ತಾರೆ. ಕ್ಯಾಮರಾ ನೋಡಿದ ತಕ್ಷಣವೇ ಕಚೇರಿಗೆ ಬೀಗ ಹಾಕಿಕೊಂಡು ಕಾರ್ ನಲ್ಲಿ ಪರಾರಿಯಾಗಿದ್ದಾರೆ. ಹೀಗಾಗಿ ಹೊಸದಾಗಿ ವರ್ಗಾವಣೆ ಆಗಿ ಬಂದಿರುವ ದಾವಲ್ ಸಾಬ್ ಗೆ ಚಾರ್ಚ್ ನೀಡಲು ವಿಳಂಭವಾಗುತ್ತಿದೆ. ಈ ಬಗ್ಗೆ ಜೆಸ್ಕಾಂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನೂ ಓದಿ : FACT CHECK: ಪ್ರಧಾನಿ ಮೋದಿ ಹೆಂಡತಿ ಜಶೋಧ ಬೆನ್ ನಿಜಕ್ಕೂ ಸಿಎಎ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ರಾ?
First published: January 23, 2020, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading