ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ (Kadaba, Dakshina Kannada) ಬಳ್ಪದ ಕೇನ್ಯದ ಕಣ್ಕಲ್ ಕುಮಾರಧಾರ ನದಿಯ (Kumaradhara River) ಪೆಲತಗುಂಡಿಯ ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಹಂಸಿಕಾ (15), ಆವಂತಿಕಾ (11) ಸಾವನ್ನಪ್ಪಿದ ಮಕ್ಕಳು. ಮೃತ ಮಕ್ಕಳ ತಂದೆ ಸತೀಶ್ ಅಮ್ಮಣ್ಣಾಯ ಬೆಂಗಳೂರಿನಲ್ಲಿ (Bengaluru) ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕದಳದ ಸಿಬ್ಬಂದಿ ಮಕ್ಕಳ ಮೃತದೇಹವನ್ನು ನೀರಿನಿಂದ ಹೊರಗೆ ತೆಗೆದಿದ್ದಾರೆ. ಸತೀಶ್ ಅಮ್ಮಣ್ಣಾಯ ಬೆಂಗಳೂರಿನಲ್ಲಿಯೇ ವಾಸವಾಗಿದ್ದು, ಶಾಲೆಗೆ ರಜೆ ಹಿನ್ನೆಲೆ ಹಂಸಿಕಾ ಮತ್ತು ಆವಂತಿಕಾ ಸೋಮವಾರ ಚಿಕ್ಕಪ್ಪ ಉದಯ್ ಅಮ್ಮಣ್ಣಾಯ ನಿವಾಸಕ್ಕೆ ಬಂದಿದ್ದರು.
ಮನೆಯ ಸಮೀಪದಲ್ಲಿರುವ ಕುಟುಂಬಸ್ಥರ ಜೊತೆಗೆ ಮಕ್ಕಳು ಕುಮಾರಧಾರ ನದಿಗೆ ತೆರಳಿದ್ದರು. ಈ ವೇಳೆ ಮಕ್ಕಳು ನೀರು ಪಾಲಾಗಿದ್ದಾರೆ. ಮೊದಲಿಗೆ ಕುಟುಂಬಸ್ಥರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಸ್ಥಳೀಯ ಈಜುಗಾರರ ಮೂಲಕ ಮಕ್ಕಳ ಹುಡುಕಾಟ ನಡೆಸಿದ್ದಾರೆ.
ಮಕ್ಕಳು ಪತ್ತೆಯಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮಕ್ಕಳ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಮಕ್ಕಳು ನದಿಯ ಆಳಕ್ಕೆ ತಿಳಿಯದೇ ಇಳಿದಿದ್ದರಿಂದ ಇಬ್ಬರ ಸಾವು ಆಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮಕ್ಕಳ ಸಾವಿನ ಬಗ್ಗೆ ಬೆಂಗಳೂರಿನಲ್ಲಿರುವ ಪೋಷಕರಿಗೂ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Cyclone Mocha: ಆಕಾಶದ ತುಂಬೆಲ್ಲ ಕಾರ್ಮೋಡ, ಭರ್ಜರಿ ಮಳೆ
ಇನ್ನು ಮಕ್ಕಳ ಪೋಷಕರ ಆಕ್ರಂದನ ಮುಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರ ವಶಕ್ಕೆ ನೀಡಲಾಗಿದೆ. ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ