Kannada: ವಿದೇಶಿ ಪ್ರಜೆಗಳ ಕನ್ನಡ ಕಲಿಯುವ ಪ್ರಯತ್ನ; ವೈರಲ್ ಆಗ್ತಿದೆ ಸುಂದರ ವಿಡಿಯೋ

ವಿದೇಶಿ ಪ್ರಜೆಗಳು ಕನ್ನಡ ಮಾತನಾಡೋದನ್ನು ಕಂಡು ಹೋಟೆಲ್ ಸಿಬ್ಬಂದಿ ಸಹ ಸಂತೋಷ ವ್ಯಕ್ತಪಡಿಸೋದನ್ನು ವಿಡಿಯೋದಲ್ಲಿ ಕಾಣಬಹುದು.

ವಿದೇಶಿ ಪ್ರಜೆಗಳು

ವಿದೇಶಿ ಪ್ರಜೆಗಳು

  • Share this:
ಕನ್ನಡಿಗರಿಗೆ ಕನ್ನಡ (Kannada) ಅಂದ್ರೆ ಪಂಚಪ್ರಾಣ. ಕನ್ನಡ ಭಾಷೆ ಕರುನಾಡಿನ (Kannada People) ಜನತೆಗೆ ಜೀವ. ಕನ್ನಡಿಗರೂ (Kannadigas) ಎಲ್ಲೇ ಹೋದರೂ ಕನ್ನಡಕ್ಕೆ ಗೌರವ ನೀಡುವದನ್ನು ಮರೆಯಲ್ಲ. ಕನ್ನಡದ ಸ್ಥಾನಮಾನಕ್ಕೆ ಧಕ್ಕೆ  ಆದಾಗಲೂ ಕೈ ಕಟ್ಟಿ ಕುಳಿತುಕೊಳ್ಳಲ್ಲ. ಇಂದು ಕನ್ನಡದ ಪರಿಮಳ ವಿಶ್ವದ (World) ಮೂಲೆ ಮೂಲೆಯಲ್ಲೂ ಪಸರಿಸಿದೆ. ಇನ್ನೂ ಯಾರೇ ಆಗಲಿ ಕನ್ನಡಕ್ಕೆ ಗೌರವ ನೀಡಿದ್ರೆ, ಕರುನಾಡಿನ ಜನತೆ ಅವರನ್ನ ತಮ್ಮ ಮನೆಯ ಸದಸ್ಯರಂತೆಯೇ ನೋಡುತ್ತಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಿವಿಧ ರಾಜ್ಯ, ದೇಶಗಳ ಜನರು ನೆಲೆಸಿದ್ದಾರೆ. ಬೇರೆ ಭಾಷಿಕರು, ವಿದೇಶಿಗರು ಅಂತ ನೋಡದೇ ಬೆಂಗಳೂರು ಎಂಬ ಆಲದ ಮರ ಎಲ್ಲರಿಗೂ ತನ್ನ ಆಶ್ರಯ ನೀಡಿದೆ. ಬೇರೆ ಪ್ರದೇಶಗಳಿಂದ ಬಂದಂತಹ ಜನರು ಕನ್ನಡ ಕಲಿಯಲು (Kannda Learning) ಪ್ರಯತ್ನಿಸುತ್ತಾರೆ.  ಈ ರೀತಿ ಕನ್ನಡ ಕಲಿಯಲು ಪ್ರಯತ್ನಿಸುವ ಜನರು ಕನ್ನಡಿಗರಿಗೆ ಸಹಜವಾಗಿಯೇ ಹತ್ತಿರವಾಗುತ್ತಾರೆ.

ಕನ್ನಡ ಜೊತೆಗೆ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಭಾಷೆ ಬಲ್ಲವರು ಸಹ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ಎಲ್ಲಾ ಕಡೆಯೂ ಎಲ್ಲಾ ಭಾಷೆ ಬಲ್ಲವರು ಸಿಗಲ್ಲ. ಆದ್ರಿಂದ ಬೆಂಗಳೂರಿನಲ್ಲಿ ಕನ್ನಡ ಮಾತಾಡಿದ್ರೆ ಯಾವುದೇ ಅಡೆತಡೆಗಳಿಲ್ಲದೇ ನಿಮ್ಮ ಕೆಲಸಗಳು ನಡೆಯುತ್ತವೆ.

Two foreigner order food in kannada video viral mrq
ಹೋಟೆಲ್ ಸಿಬ್ಬಂದಿ ಜೊತೆ ಕನ್ನಡದಲ್ಲಿ ಸಂಭಾಷಣೆ


ಕನ್ನಡ ಬಂದ್ರೆ ನಿಮ್ಮ ವ್ಯವಹಾರ ಸುಲಭ

ಮಾರುಕಟ್ಟೆ, ಆಟೋ, ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಮಗೆ ಕನ್ನಡ ಮಾತನಾಡಿದ್ರೆ ನಿಮ್ಮ ವ್ಯವಹಾರ ಸರಳವಾಗಲಿದೆ. ಇಂದು ಬೆಂಗಳೂರಿನಲ್ಲಿ ನೆಲೆಸಿರುವ ಬೇರೆ ಭಾಷೆಯ ಬಹುತೇಕರು ಕನ್ನಡ ಮಾತನಾಡಲು ಪ್ರಯತ್ನಿಸುತ್ತಾರೆ. ವಿದೇಶಿ ಪ್ರಜೆಗಳು ಹೋಟೆಲ್​ನಲ್ಲಿ ಕನ್ನಡದಲ್ಲಿ ತಮಗೆ ಏನು ಬೇಕು ಅಂತ ಹೇಳುವ ಸುಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:  Supreme Court: ಬಳ್ಳಾರಿಯ ಬಾಲಕಿಗೆ 53 ಲಕ್ಷ ಪರಿಹಾರ; ಸುಪ್ರೀಂ ಆದೇಶ

Two foreigner order food in kannada video viral mrq
ಹೋಟೆಲ್ ಸಿಬ್ಬಂದಿ ಜೊತೆ ಕನ್ನಡದಲ್ಲಿ ಸಂಭಾಷಣೆ


ವೈರಲ್ ಆಗ್ತಿದೆ ವಿದೇಶಿ ಪ್ರಜೆಗಳ ವಿಡಿಯೋ

ಜರ್ಮನ್ ಕಾನ್ಸುಲೇಟ್ ಜನರಲ್ ಆಗಿರುವ ಆಚಿಮ್ ಬರ್ಕರ್ಟ್ (Achim Burkart German Consul in Bengaluru (for Karnataka/Kerala) lawyer) ಎಂಬವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ನನ್ನ ಸಹೋದ್ಯೋಗಿಗಳು ಹೋಟೆಲ್​ಗೆ ತೆರಳಿ ಕನ್ನಡದಲ್ಲಿ ತಮಗೆ ಏನು ಬೇಕು ಎಂಬುದನ್ನು ಆರ್ಡರ್ ಮಾಡಿದ್ದಾರೆ. ಅವರು ಹೇಗೆ ಆರ್ಡರ್ ಮಾಡಿದ್ದಾರೆ ಅನ್ನೋದನ್ನು ನೋಡಿ ಎಂದು ಟ್ವಿಟರ್​ನಲ್ಲಿ ಬರ್ಕರ್ ಬರೆದುಕೊಂಡಿದ್ದಾರೆ.

Two foreigner order food in kannada video viral mrq
ಹೋಟೆಲ್ ಸಿಬ್ಬಂದಿ ಜೊತೆ ಕನ್ನಡದಲ್ಲಿ ಸಂಭಾಷಣೆ


ವಿಡಿಯೋದಲ್ಲಿ ಏನಿದೆ?

ಜರ್ಮನಿ ಅಧಿಕಾರಿಗಳು ಮಾವಳ್ಳಿ ಟಿಫಿನ್ ರೂಮ್ಸ್ ಗೆ ತೆರಳಿದ್ದಾರೆ. ಅಲ್ಲಿ ಆರ್ಡರ್ ತೆಗೆದುಕೊಳ್ಳಲು ಸಿಬ್ಬಂದಿ ಬರುತ್ತಿದ್ದಂತೆ ನಮಸ್ಕಾರ ಎಂಟಿಆರ್ ಸ್ಪೆಷಲ್ ಏನು? ಎಂದು ಕೇಳುತ್ತಾರೆ. ಸರ್ ರವಾ ಇಡ್ಲಿ ಮತ್ತು ಮಸಾಲೆ ದೋಸೆ ಎಂದು ಹೇಳುತ್ತಾರೆ. ಅದಕ್ಕೆ ಜರ್ಮನಿ ಪ್ರಜೆ, ನನಗೆ ಒಂದು ಮಸಾಲೆ ದೋಸೆ ಕೊಡಿ. ಹಾಗೆ ಒಂದು ನೀರಿನ ಬಾಟೆಲ್ ಕೊಡಿ ಎಂದು ಹೇಳುತ್ತಾರೆ.ಇಷ್ಟು ಹೇಳಿದ ಕೂಡಲೇ ಇಬ್ಬರಲ್ಲಿ ಓರ್ವ, ನಮಗೆ ಗೊತ್ತಿರುವ ಕನ್ನಡ ಇಷ್ಟು ಎಂದು ಹೇಳಿ ನಗುತ್ತಾರೆ. ನಂತರ ಗರಿಗರಿಯಾಗಿರುವ ದೋಸೆ ಸವಿದು ಸಖತ್ ಆಗಿದೆ ಎಂದು ಹೇಳಿದ್ದಾರೆ.ವಿದೇಶಿ ಪ್ರಜೆಗಳು ಕನ್ನಡ ಮಾತನಾಡೋದನ್ನು ಕಂಡು ಹೋಟೆಲ್ ಸಿಬ್ಬಂದಿ ಸಹ ಸಂತೋಷ ವ್ಯಕ್ತಪಡಿಸೋದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:  Tomato Fever: ಎಚ್ಚರ, ಕಟ್ಟೆಚ್ಚರ! ಕರ್ನಾಟಕಕ್ಕೆ ಟೊಮೆಟೊ ಜ್ವರದ ಎಚ್ಚರಿಕೆ ನೀಡಿದ ಪ್ರಮುಖ ಮೆಡಿಕಲ್ ಜರ್ನಲ್1.3 ಲಕ್ಷಕ್ಕೂ ಅಧಿಕ ವ್ಯೂವ್

ಈ ವಿಡಿಯೋ 1.3 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 1292 ಬಾರಿ ರೀಟ್ವೀಟ್​ ಮತ್ತು ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಇನ್ನೂ ವಿಡಿಯೋಗೆ ಕಮೆಂಟ್ ಮಾಡಿರುವ ಕನ್ನಡಿಗರು ಇಬ್ಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Mahmadrafik K
First published: