ಬೆಂಗಳೂರಲ್ಲಿ ಮ್ಯಾನ್ ಹೋಲ್​ಗೆ ಇಬ್ಬರು ಕಾರ್ಮಿಕರು ಬಲಿ


Updated:February 13, 2018, 9:11 PM IST
ಬೆಂಗಳೂರಲ್ಲಿ ಮ್ಯಾನ್ ಹೋಲ್​ಗೆ ಇಬ್ಬರು ಕಾರ್ಮಿಕರು ಬಲಿ

Updated: February 13, 2018, 9:11 PM IST
ಬೆಂಗಳೂರು(ಫೆ.13): ಬೆಂಗಳೂರಿನಲ್ಲಿ ಮತ್ತೆ ಮ್ಯಾನ್ ಹೋಲ್​ಗೆ ಇಬ್ಬರು ಕೂಲಿ ಕಾರ್ಮಿಕರು ಬಲಿಯಾಗಿದ್ದಾರೆ. ರಾಯಚೂರು ಮೂಲದ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದು, ಮೃತರನ್ನ ರಾಮು(೩೫) ಮತ್ತು ರವಿ(೨೮) ಎಂದು ಗುರ್ತಿಸಲಾಗಿದೆ. ದುರ್ದೈವಿಗಳು

ಇಂದು ಸಂಜೆ‌ 4 ಗಂಟೆ‌ ಸುಮಾರಿಗೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಲೇಔಟ್​ನಲ್ಲಿರುವ ವಾಣಿಜ್ಯ ಮಳಿಗೆಯ ಡ್ರೇನೇಜ್  ನೀರನ್ನ ಕ್ಲೀನ್ ಮಾಡಲು ಕಾರ್ಮಿಕರು ಬಂದಿದ್ದರು. ಡ್ರೇನೇಜ್ ಒಳಗೆ ಇಳಿದು ಕ್ಲೀನ್ ಮಾಡುತ್ತಿದ್ದ ರಾಮು ಉಸಿರು ಕಟ್ಟಿ ಕೂಗಾಡಿದ್ದಾನೆ. ಈ ಸಂದರ್ಭ, ರಾಮುವನ್ನ ರಕ್ಷಣೆ ಮಾಡಲು‌ ಹೋದ ರವಿ ಕೂಡ ಡ್ರೇನೇಜ್ ಒಳಗೆ ನುಗ್ಗಿದ್ದಾನೆ. ಈ ಸಂದರ್ಭ ರವಿ ಕೂಡ‌ ಡ್ರೇನೇಜ್ ಗುಂಡಿಯಲ್ಲಿ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಅಗ್ನಿಶಾಮಕ ದಳ ಆಗಮಿಸುವ ಹೊತ್ತಿಗೆ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದ್ದವು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಪಡೆ ಹರಸಹಾಸ ಪಟ್ಟು ಶವಗಳನ್ನ ಹೊರತೆಗೆದಿದ್ದಾರೆ. ಇಬ್ಬರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ನಗರದ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ