ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ಯೂರ್; ಸರಣಿ ಅಪಘಾತ – ಇಬ್ಬರು ಸಾವು; 10ಕ್ಕೂ ಹೆಚ್ಚು ಮಂದಿಗೆ ಗಾಯ

ಕೊಟ್ಟಿಗೆ ಪಾಳ್ಯ ಜಂಕ್ಷನ್ ಬಳಿಯ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿದ್ದ ಬಸ್ಸು ಬ್ರೇಕ್ ವಿಫಲಗೊಂಡಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್​ಗಳು, ಆಟೋ ಮೊದಲಾದ ಹಲವು ವಾಹನಗಳಿಗೆ ಗುದ್ದಿ ಈ ದುರಂತ ಸಂಭವಿಸಿದೆ.

ಸೋಮವಾರ ಅಪಘಾತಗೊಂಡ ಬಿಎಂಟಿಸಿ

ಸೋಮವಾರ ಅಪಘಾತಗೊಂಡ ಬಿಎಂಟಿಸಿ

  • News18
  • Last Updated :
  • Share this:
ಬೆಂಗಳೂರು(ಜ. 06): ನಗರ ಮಾಗಡಿ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ಸಮೀಪ ಇಂದು ಭೀಕರ್ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ  ಸಾವನ್ನಪ್ಪಿದ್ದಾರೆ. ಸುಂಕದಕಟ್ಟೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್​ನ ಬ್ರೇಕ್ ವಿಫಲಗೊಂಡ ಹಿನ್ನೆಲೆಯಲ್ಲಿ ಸರಣಿ ಅಪಘಾತವಾಗಿ ಈ ದುರಂತ ಸಂಭವಿಸಿರುವುದು ತಿಳಿದುಬಂದಿದೆ.

ಕೊಟ್ಟಿಗೆ ಪಾಳ್ಯ ಜಂಕ್ಷನ್ ಬಳಿಯ ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿದ್ದ ಬಸ್ಸು ಬ್ರೇಕ್ ವಿಫಲಗೊಂಡಿದ್ದರಿಂದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಬೈಕ್​ಗಳು, ಆಟೋ ಮೊದಲಾದ ಹಲವು ವಾಹನಗಳಿಗೆ ಗುದ್ದಿದೆ. ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ತಕ್ಕೂ ಹೆಚ್ಚು ಜನರು ಈ ಸರಣಿ ಅಪಘಾತದಲ್ಲಿ ಗಾಯಗೊಂಡಿದ್ಧಾರೆ. ಹತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಇದನ್ನೂ ಓದಿ: ಮೈಸೂರು ಕೆಆರ್​ಎಸ್​ ಡ್ಯಾಮ್​ ಸುತ್ತಮುತ್ತ ಗಣಿಗಾರಿಕೆ ನಿಲ್ಲಿಸಲು ಸಿಎಂ ಬಿಎಸ್​ವೈ ಆದೇಶ

ಗಾಯಗೊಂಡವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಅಪಘಾತವಾದ ಬಳಿಕ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಜನರು ಜಮಾಯಿಸಿದ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ ಬಳಿ ಭಾರೀ ಟ್ರಾಫಿಕ್ ಜಾಮ್ ನಿರ್ಮಾಣವಾಯಿತು. ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಟ್ರಾಫಿಕ್ ಕ್ಲಿಯರ್ ಮಾಡಿಸುತ್ತಿದ್ದಾರೆ.

(ಇನ್ನಷ್ಟು ವಿವರ ನಿರೀಕ್ಷಿಸಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by:Vijayasarthy SN
First published: