ಬೆಂಗಳೂರು ಗ್ರಾಮಾಂತರ: ಶನಿ ಮಹಾತ್ಮನ ದೇವಸ್ಥಾನಕ್ಕೆ (Shani Temple) ಕಿಡಿಗೇಡಿಗಳು ಮಾಂಸಾಹಾರ (Meat) ತಂದಿರುವ ಘಟನೆ ದೊಡ್ದಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಚಿಕ್ಕ ಮಧುರೆ (Chikka Madhure, Doddaballapura) ದೇವಾಲಯದಲ್ಲಿ ನಡೆದಿದೆ. ಈ ಹಿಂದೆಯೂ ಕಿಡಿಗೇಡಿಗಳು ಮಾಂಸಾಹಾರ ತಂದಿಟ್ಟು ದೇವಸ್ಥಾನವನ್ನು ಅಶುದ್ಧಿಗೊಳಿಸಲು ಮುಂದಾಗಿದ್ದರು. ಇದೀಗ ಮಾಂಸಾಹಾರ ಇರಿಸಿ ಎಸ್ಕೇಪ್ ಆಗಲು ಮುಂದಾಗಿದ್ದ ಕಿಡಿಗೇಡಿಯನ್ನು ದೇವಾಲಯದ ಸಿಬ್ಬಂದಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೋಸಕೋಟೆ (Hosakote) ಸಮೀಪದ ಕಂಬಲಹಳ್ಳಿಯ ರಾಜು, ವೈಟ್ ಫೀಲ್ಡ್ (Whitefield) ಮೂಲದ ಆಟೋ ಚಾಲಕ ಸೋಮಶೇಖರ್ ಎಂಬವರು ಈ ಕೃತ್ಯ ಎಸಗಿದ್ದಾರೆ.
ರಾಜು ಮತ್ತು ಸೋಮಶೇಖರ್ ಇಬ್ಬರು ಜೊತೆಯಾಗಿ ಗುಲಾಬಿ ಹಾರದಲ್ಲಿ ಮಾಂಸದ ತುಂಡುಗಳನ್ನು ತಂದಿರಿಸಿದ್ದರು. ಈ ಹಿಂದೆ ಕೂಡ ಇದೆ ರೀತಿ ಕೃತ್ಯ ಎಸಗಿದ್ದರು.
ಮೂರು ಸಾವಿರ ರೂಪಾಯಿಗಾಗಿ ಕೃತ್ಯ
ದೇವಾಲಯದ ಒಳಗೆ ಮಾಂಸಾಹಾರ ಇಟ್ಟು ಬಂದರೆ ಮೂರು ಸಾವಿರ ಹಣ ನೀಡುತ್ತೇವೆ ಎಂದು ಇಬ್ಬರನ್ನು ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಆದ್ರೆ ಇಬ್ಬರನ್ನು ಯಾರು ಕಳುಹಿಸಿದ್ದರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ಸದ್ಯ ಇಬ್ಬರನ್ನು ದೇವಾಲಯದ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಿದ್ದಾರೆ. ದೊಡ್ಡ ಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪತ್ನಿಯನ್ನ ಕೊಂದ ಗಂಡ?
ಚಿತ್ರದುರ್ಗದ ಬೊಗಳೇರಹಟ್ಟಿಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರೋ ಆರೋಪ ಕೇಳಿಬಂದಿದೆ. ಪತಿ ಚಂದ್ರಶೇಖರ್, ತನ್ನ ಪತ್ನಿ ಗೌತಮಿಯನ್ನು ಹತ್ಯೆಗೈದು, ನೇಣಿ ಬಿಗಿದು ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ ಮಾಡಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನೊಂದೆಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ ತೋರಿದ್ದಾರಂತೆ. ಆದ್ರಿಂದ ಚಿತ್ರದುರ್ಗ ಎಸ್ಪಿ ಕಚೇರಿ ಎದುರು ಸಂಬಂಧಿಕರ ಧರಣಿ ಮಾಡಿದ್ದಾರೆ.
ಬಾಲಕಿಗೆ ಡಿಕ್ಕಿ ಹೊಡೆದ ಬಸ್
ಖಾಸಗಿ ಎಕ್ಸ್‌ಪ್ರೆಸ್ ಬಸ್ ಡಿಕ್ಕಿ ಹೊಡೆದು ಬಾಲಕಿ ಗಂಭೀರಗೊಂಡಿರೋ ಘಟನೆ ಉಡುಪಿ ಜಿಲ್ಲೆಯ ಕಾಪು ಮಂದಾರ ಹೋಟೆಲ್ ಮುಂಭಾಗ ನಡೆದಿದೆ.
ಇದನ್ನೂ ಓದಿ: Vijayapura: ಶ್ರೀಶೈಲ ಭಕ್ತರ ಸೇವೆಯಲ್ಲೇ ಇವರಿಗೆ ಸಿಗುತ್ತೆ ಮಲ್ಲಿಕಾರ್ಜುನನ ಕೃಪೆ!
13 ವರ್ಷದ ವರ್ಷಿತಾ ಶೇರ್ವೆಗಾರ ಗಾಯಾಳು. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ