• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Accident: ಹೊಸಕೋಟೆಯಲ್ಲಿ ಮತ್ತೆ ಸರಣಿ ಅಪಘಾತ, ಪತ್ರಿಕೆ ವಿತರಕನ ಸೈಕಲ್​ಗೆ ಬಸ್ ಡಿಕ್ಕಿ, ಹೊತ್ತಿ ಉರಿದ ಕಾರ್

Accident: ಹೊಸಕೋಟೆಯಲ್ಲಿ ಮತ್ತೆ ಸರಣಿ ಅಪಘಾತ, ಪತ್ರಿಕೆ ವಿತರಕನ ಸೈಕಲ್​ಗೆ ಬಸ್ ಡಿಕ್ಕಿ, ಹೊತ್ತಿ ಉರಿದ ಕಾರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಕಾರ್ (Car) ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದಿದೆ. ಅಡ್ಡ ಬಂದ ಆಟೋ ತಪ್ಪಿಸಲು ಹೋಗಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.

  • Share this:

ಇಂದು ಬೆಳಗ್ಗೆ ರಾಜ್ಯದಲ್ಲಿ ಅಪಘಾತ ಪ್ರಕರಣಗಳು (Accident Case) ವರದಿ ಆಗಿವೆ. ಬೆಂಗಳೂರು ಹೊರವಲಯ ಹೊಸಕೋಟೆ (Hosakote), ಚಿತ್ರದುರ್ಗ (Chitradurga), ಹುಬ್ಬಳ್ಳಿಯಲ್ಲಿ (Hubballi) ಅಪಘಾತ ನಡೆದಿದೆ. ಇಂದು ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕಿಲೋ ಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿತ್ತು ಧಿಡೀರ್ ಎಂದು ಕಾರ್ ಚಾಲಕ ಬ್ರೇಕ್ ಹಾಕಿದ ಪರಿಣಾಮ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಕಾರ್ ಗಳು ಜಖಂ ಆಗಿದ್ದು, ಅದೃಷ್ಟಾವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹೊಸಕೋಟೆ ಪೊಲೀಸರು (Hosakote Police) ಟ್ರಾಫಿಕ್ ಕ್ಲಿಯರ್ ಮಾಡಿ, ಅಪಘಾತಕ್ಕೊಳಗಾದ ವಾಹನಗಳನ್ನು ತೆರವು ಮಾಡಿದ್ದಾರೆ. ಕಳೆದ ವಾರವಷ್ಟೇ ಇದೇ ಮಾರ್ಗದಲ್ಲಿ ಸರಣಿ ಅಪಘಾತ ಸಂಭವಿಸಿತ್ತು.


ಶಿವಮೊಗ್ಗದಲ್ಲಿ ಅಪಘಾತ


ಪತ್ರಿಕಾ ವಿತಕರನ ಸೈಕಲ್ ಗೆ KSRTC ಬಸ್ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ನಡೆದಿದೆ. ವೇಗವಾಗಿ ಬರುತ್ತಿದ್ದ ಬಸ್ ಡಿಕ್ಕಿಯಾದ ಪರಿಣಾಮ ಪತ್ರಿಕಾ ವಿತರಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಳಲಮಕ್ಕಿಯ ಗಣೇಶ್ (25) ಮೃತಪಟ್ಟ ಪತ್ರಿಕಾ ವಿತರಕ. ಸಾಗರದ ಪ್ರವಾಸಿ ಮಂದಿರದ ಬಳಿ ಅಪಘಾತ ಸಂಭವಿಸಿದೆ. ಸೈಕಲ್ ಸಹ ಸವಾರ ರಾಹುಲ್ ಎಂಬವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದನ್ನೂ ಓದಿ:  Government School: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ


KSRTC ಬಸ್ ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರ ಹೋಗುತ್ತಿತ್ತು. ಗಣೇಶ್ ಬೆಳಗ್ಗೆ ಪತ್ರಿಕೆ ವಿತರಣೆ ಮಾಡಲು ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.


ಚಿತ್ರದುರ್ಗ ಅಪಘಾತ


ಚಿತ್ರದುರ್ಗದ ಬಹದ್ದೂರ್ ಘಟ್ಟ ಗ್ರಾಮದ ಸಮೀಪ ಶಾಲಾ ಬಸ್ ಮತ್ತ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರದೀಪ್ (35) ಬಹದ್ದೂರ್ ಘಟ್ಟ ಗ್ರಾಮದ ಶಾಲಾ ಶಿಕ್ಷಕ. ಭರಮಸಾಗರದಿಂದ ಭಹದ್ದೂರ್ ಘಟ್ಟಗೆ ಪ್ರದೀಪ್ ಅವರು ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಹೊತ್ತಿ ಉರಿದ ನಾಲ್ವರು ಪ್ರಯಾಣಿಸುತ್ತಿದ್ದ ಕಾರ್


ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಕಾರ್ (Car) ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿ ಉರಿದಿದೆ. ಅಡ್ಡ ಬಂದ ಆಟೋ ತಪ್ಪಿಸಲು ಹೋಗಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.


ಅಪಘಾತಕ್ಕೊಳಗಾದ ಕಾರ್ ಹುಬ್ಬಳ್ಳಿ ನಗರದಿಂದ ರಾಯಚೂರು ಜಿಲ್ಲೆಯ ಸಿಂಧನೂರಿಗೆ ತೆರಳುತ್ತಿತ್ತು. ಕಾರ್ ಪಲ್ಟಿಯಾಗುತ್ತಿದ್ದಂತೆ ಪ್ರಯಾಣಿಸುತ್ತಿದ್ದ ನಾಲ್ವರು ಹೊರ ಬಂದಿದ್ದಾರೆ. ನಾಲ್ವರಿಗೂ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. ಗಾಯಾಳುಗಳನ್ನು ಅಣ್ಣಿಗೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:  Old House: 7 ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದ ಈ ಮನೆಗೆ 987 ವರ್ಷ! ಈಗಲೂ ಎಷ್ಟು ಗಟ್ಟಿಯಾಗಿದೆ ನೋಡಿ


Accident: ಕ್ರೂಸರ್ ಪಲ್ಟಿ ಹೊಡೆದು ಭೀಕರ ಅಪಘಾತ, ಸ್ಥಳದಲ್ಲೇ 7 ಮಂದಿ ದುರ್ಮರಣ


ಬೆಳಗಾವಿ (Belagavi) ಜಿಲ್ಲೆಯ ಬೆಳಗಾವಿ – ಗೋಕಾಕ್ ರಸ್ತೆಯ (Belagavi-Gokak Road) ಕಲ್ಯಾಳ ಬ್ರಿಡ್ಜ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕೂಲಿ ಕಾರ್ಮಿಕರನ್ನು (Labor) ಕರೆದೊಯ್ಯುತ್ತಿದ್ದ ಕ್ರೂಸರ್ (Cruiser) ವಾಹನ ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನದಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದು, ಇನ್ನೂ 10 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

Published by:Mahmadrafik K
First published: