ಹುಬ್ಬಳ್ಳಿ(ಜ.23): ಹುಬ್ಬಳ್ಳಿಯ ಕಿರೇಸೂರು ಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮೂವರಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಇನ್ನೋರ್ವ ಯುವಕ ಪತ್ತೆಯಾಗದೆ ಇಂದಿನ ಕಾರ್ಯಾಚರಣೆ ಮುಗಿದಿದೆ. ಮಲಪ್ರಭಾ ಕಾಲುವೆಯ ಬಳಿ ಫೋಟೋಶೂಟ್ ಮಾಡಲು ಹೋಗಿದ್ದ ಐವರ ಪೈಕಿ ಮೂರು ಜನ ಯುವಕರು ನೀರು ಪಾಲಾಗಿದ್ದರು. ಜೋಯಲ್ ಮತ್ತು ಗಜಾನನ ಎನ್ನುವವರ ಮೃತದೇಹಗಳು ಸಿಕ್ಕಿದ್ದು ಸನ್ನಿ ಎಂಬಾತ ಇದುವರೆಗೂ ಪತ್ತೆಯಾಗಿಲ್ಲ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಸಂಬಂಧಿಗಳಾದ ಐವರು ಕಿರೇಸೂರ ಬಳಿಯ ಮಲಪ್ರಭಾ ಕಾಲುವೆಯ ಬಳಿ ಸೆಲ್ಪಿ ಪೋಟೊಗಾಗಿ ತೆರಳಿದ್ದರು. ಈ ವೇಳೆ ಜೇನು ನೊಣಗಳು ದಾಳಿ ನಡೆಸಿದ್ದರಿಂದ, ಪಾರಾಗಲು ಕಾಲುವೆಗೆ ಹಾರಿದ್ದರು. ಕಾಲುವೆಯಲ್ಲಿ ನೀರಿನ ಸೆಳೆತ ತೀವ್ರವಾಗಿದ್ದರಿಂದ ಮೂವರು ಕೊಚ್ಚಿಕೊಂಡು ಹೋಗಿದ್ದರು.
ಆದರೆ ಕಾಲುವೆಯಲ್ಲಿ ಸಿಕ್ಕ ಪೈಪ್ ಹಿಡಿದು ಜೋತು ಬಿದ್ದಿದ್ದ ಯುವತಿಯ ಚೀರಾಟ ಕೇಳಿದ ಕುರಿಗಾಹಿಗಳು ಆಕೆಯನ್ನ ರಕ್ಷಿಸಿದ್ದರು. ಜೊತೆಗಿದ್ದ ಇನ್ನೊಬ್ಬ ಯುವಕ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದ್ದು ನಾಳೆ ಇನ್ನೋರ್ವನಿಗಾಗಿ ಹುಡುಕಾಟ ಮುಂದುವರಿಯಲಿದೆ.
ದೆಹಲಿ ರೈತರ ಹೋರಾಟ ಬೆಂಬಲಿಸಿ ಜ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ
ಹುಬ್ಬಳ್ಳಿಯಲ್ಲಿ ಪಿಡಿಓಗಳ ರಾಜ್ಯ ಮಟ್ಟದ ಸಮಾವೇಶ
ಹುಬ್ಬಳ್ಳಿಯಲ್ಲಿ ಪಿಡಿಓಗಳ ರಾಜ್ಯ ಮಟ್ಟದ ಸಮಾವೇಶ ನಡೆಯಿತು. ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಸಮಾವೇಶವನ್ನು ಆಯೋಜಿಸಲಾಗಿತ್ತು. ಹುಬ್ಬಳ್ಳಿಯ ಗೋಕುಲ ಗಾರ್ಡನ್‌ನಲ್ಲಿ ಪಂಚಾಯತ್ ಸಬಲೀಕರಣದಲ್ಲಿ ಪಿಡಿಓಗಳ ಪಾತ್ರ ಹಾಗೂ ಸವಾಲುಗಳ ಕುರಿತು ಸಂವಾದ ನಡೆಯಿತು. ಸಮಾವೇಶದಲ್ಲಿ ಪಿಡಿಓ ಹುದ್ದೆಯನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಶಾಸಕಿ ಕುಸುಮಾ ಶಿವಳ್ಳಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿವಿಯ ಕುಲಪತಿ ಪ್ರೊ. ವಿಷ್ಣುಕಾಂತ್ ಚಟಪಲ್ಲಿ, ಸಂಘದ ರಾಜ್ಯಾಧ್ಯಕ್ಷ ಬೋರಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ