ನಾಗಮಂಗಲದ ಮುಳುಕಟ್ಟಮ್ಮ ದೇವಸ್ಥಾನದ ಪೂಜಾರಿಗಳ ಕಿತ್ತಾಟ; ಪ್ರಕರಣಕ್ಕೆ ಮಂಡ್ಯ ರಾಜಕಾರಣದ ತಿರುವು

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮುಳುಕಟ್ಟಮ್ಮ ದೇವಸ್ಥಾನದಲ್ಲಿ ಪೂಜೆ ವಿಚಾರವಾಗಿ ಎರಡು ಕುಟುಂಬದ ಬಣಗಳಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆ ಸಂಬಂಧ 13 ಜನರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಮೂಲಕ ಗ್ರಾಮದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು ಮುಳುಕಟ್ಟೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

news18
Updated:June 6, 2019, 9:07 PM IST
ನಾಗಮಂಗಲದ ಮುಳುಕಟ್ಟಮ್ಮ ದೇವಸ್ಥಾನದ ಪೂಜಾರಿಗಳ ಕಿತ್ತಾಟ; ಪ್ರಕರಣಕ್ಕೆ ಮಂಡ್ಯ ರಾಜಕಾರಣದ ತಿರುವು
ಮುಳುಕಟ್ಟಮ್ಮ ದೇವಸ್ಥಾನದ ಒಳಾಂಗಣ
news18
Updated: June 6, 2019, 9:07 PM IST
ಮಂಡ್ಯ(ಜೂ. 06): ನಾಗಮಂಗಲ ತಾಲೂಕಿನಲ್ಲಿರುವ ಮುಳುಕಟ್ಟೆ ಗ್ರಾಮದ ಶ್ರೀ ಮುಳುಕಟ್ಟಮ್ಮ ದೇವಾಲಯದಲ್ಲಿ ಪೂಜೆ ಮಾಡುವ ವಿಚಾರವಾಗಿ ದಲಿತ ವರ್ಗದ ಎರಡು ಬಣಗಳ ಮಾರಾಮರಿ ನಡೆದಿದೆ. ತಲಾ ತಲಾಂತರಗಳಿಂದ  ಪೂಜೆ ಮಾಡ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಎರಡು ದಲಿತ ಬಣಗಳು ಕಚ್ಚಾಡಿಕೊಂಡಿವೆ.‌

ಸದ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸ್ತಿರೋ ಪೂಜಾರಿ ಕರಿ ಬಸವಯ್ಯ ಕುಟುಂಬ ಮತ್ತು ಪೂಜಾರಿ ನಿಂಗಯ್ಯ ಕುಟುಂಬದರ ಮೇಲೆ ಶಿವಮ್ಮ ಕುಟುಂಬದವರು ನಿನ್ನೆ ಹಲ್ಲೆ ನಡೆಸಿದ್ದಾರೆ. ಪೂಜೆ ಸಲ್ಲಿಸಲು ತಮಗೂ ಅವಕಾಶ ಮಾಡಿಕೊಡುವಂತೆ ಶಿವಮ್ಮನ ಕುಟುಂಬದವರು ಈ ದಾಂಧಲೆ ಎಸಗಿದ್ದಾರೆನ್ನಲಾಗಿದೆ. ನಿನ್ನೆ ದೇವಾಲಯಕ್ಕೆ ನುಗ್ಗಿ ಬೀಗ ಜಡಿದು, ಪುಜೆ ಸಲ್ಲಿಸುತ್ತಿದ್ದ ಅರ್ಚಕ ಕುಟುಂಬದವರ  ಮೇಲೆ ಹಲ್ಲೆ ನಡೆಸಿ  ದೇವಾಲಯದ ಸಿ.ಸಿ ಕ್ಯಾಮೆರಾ ಕಿತ್ತುಹಾಕಿ ಗಲಾಟೆ ಮಾಡಿದ್ದಾರೆ. ಈ ಘಟನೆ ನಂತರ ಒಂದೆಡೆ ಭಕ್ತರು ಆತಂಕಗೊಂಡಿದ್ದರೆ, ಪೂಜೆ ಸಲ್ಲಿಸುತ್ತಿದ್ದ ಅರ್ಚಕ ಕುಟುಂಬ ರಕ್ಷಣೆ ಕೋರಿ ಪೊಲೀಸ್ ಮೊರೆ ಹೋಗಿದೆ.

ಇದನ್ನೂ ಓದಿ: ಕುಮಾರಸ್ವಾಮಿ 2006ರಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಹುಬ್ಬಳ್ಳಿಯ ನಾವಳ್ಳಿ ಊರಿನ ಸ್ಥಿತಿ ಈಗ ಹೇಗಿದೆ?

ರಾಜಕೀಯ ತಿರುವು:
ಇನ್ನು, ದೇವಾಲಯದಲ್ಲಿ  ದಾಂಧಲೆ , ಮಾರಾಮಾರಿ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಾಗಮಂಗಲ ತಹಶೀಲ್ದಾರ್ ರೂಪಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಸ್ಥಳದಲ್ಲಿ ಪೊಲೀಸರನ್ನು ಭದ್ರತೆಗಾಗಿ ‌ನಿಯೋಜಿಸಿದ್ದಾರೆ. ಜೊತೆಗೆ ದೇವಾಲಯದಲ್ಲಿ ದಾಂಧಲೆ ನಡೆಸಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಾಗಿರುವ ಕಡೆಯವರು ಆ ದೇವಾಲಯದ ಮೂಲ ಅರ್ಚಕರಾಗಿದ್ದು, ಇವರಿಗೂ ಈ ದೇವಾಲಯದ ಪೂಜೆಯ ಹಕ್ಕು ಇದ್ದು,ಇದು ಕೋರ್ಟಿನಲ್ಲಿ ತೀರ್ಮಾನವಾಗಿತ್ತು. ಕೋರ್ಟಿನ ಆದೇಶ ಪ್ರತಿಯೊಂದಿಗೆ‌ ನಿನ್ನೆ ತಮಗೂ ಪೂಜೆ ಹಕ್ಕು ಇದೆ ಎಂದು ಶಿವಮ್ಮ ಅವರು ದೇವಾಲಯಕ್ಕೆ ಹೋದಾಗ ಪೂಜೆಯ ವಿಚಾರದಲ್ಲಿ ಮಾರಾಮಾರಿ ನಡೆದಿದೆ. ‌ಘಟನೆಯಲ್ಲಿ ಎರಡು ಬಣದ  ಹಲವರಿಗೆ ಗಾಯವಾಗಿ ನಾಗಮಂಗಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Loading...

ಆದ್ರೆ ಈ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ದಾಂಧಲೆ ನಡೆಸಿದವರೆಂದು ಹೇಳಲಾಗ್ತಿರೋ ಎಲ್ಲರೂ ಕೂಡ ಕಾಂಗ್ರೆಸ್​ನ ಮಾಜಿ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರೆಂದು ಹೇಳಲಾಗ್ತಿದೆ. ನ್ಯಾಯಾಲಯದ ಆದೇಶ ಪಾಲಿಸದೆ ದೇವಸ್ಥಾನದ ಪೂಜೆಯ ಹಕ್ಕು ವಿಚಾರದಲ್ಲಿ ಸದ್ಯ ಪೂಜೆ ಸಲ್ಲಿಸ್ತಿರೋ ಅರ್ಚಕ ಕುಟುಂಬದವರು ಜೆಡಿಎಸ್ ಶಾಸಕ ಸುರೇಶ್ ಗೌಡ ಬೆಂಬಲಿಗರಾಗಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ‘ಆನೆ ಗುಂಪಿನಲ್ಲಿದ್ದರೆ ಏನೂ ಮಾಡಲ್ಲ, ಒಂಟಿ ಸಲಗವೇ ಅಪಾಯ’; ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ ಗೊತ್ತಾ?

ಇದೇ ಕಾರಣಕ್ಕೆ ಈಗಿನ ಅರ್ಚಕ ಕುಟುಂಬದವರು‌ ಪೊಲೀಸರಿಗೆ ದೂರು ನೀಡಿ ಶಾಸಕರ ಮೂಲಕ ಒತ್ತಡ ತಂದು 13 ಜನರನ್ನು ಬಂಧಿಸಿರೋದಾಗಿ ಸ್ಥಳೀಯರು ಹೇಳುತ್ತಾರೆ. ಇನ್ನು, ಮಾಜಿ ಶಾಸಕ ಚಲುವರಾಯಸ್ವಾಮಿ ತಮ್ಮ ಬಣದವರ ಬಂಧನಕ್ಕೆ ಗರಂ ಆಗಿದ್ದಾರೆ. ನ್ಯಾಯಾಲಯದ ಆದೇಶ ಪಾಲಿಸದೆ ಸ್ಥಳೀಯ ಪೊಲೀಸ್ ಇಲಾಖೆಯವರು ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಶಾಸಕ ಸುರೇಶ್ ಗೌಡ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಆದರೆ ಜನರೇ ಬುದ್ದಿ ಕಲಿಸಬೇಕಾಗುತ್ತೆ ಎಂದು ಚಲುವರಾಯಸ್ವಾಮಿ ಅವರ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, ಮಂಡ್ಯದ ನಾಗಮಂಗಲ ತಾಲೂಕಿನ  ಮುಳುಕಟ್ಟಮ್ಮ ದೇವಾಲಯದಲ್ಲಿ ಪೂಜೆ ವಿಚಾರಕ್ಕೆ ಎರಡು ಬಣಗಳ ಕಿತ್ತಾಟ  ವಿಚಾರ  ಇದೀಗ ರಾಜಕೀಯಕ್ಕೆ ತಿರುಗಿದ್ದು ಮುಳಕಟ್ಟಮ್ಮನ ಭಕ್ತರು ಮಾತ್ರ ಹೈರಾಣಾಗಿದ್ದಾರೆ. ರಾಜಕೀಯ ತಿರುವು ಪಡೆದುಕೊಂಡಿರುವ ಈ ಪ್ರಕರಣ ಎಲ್ಲಿ ಹೋಗಿ ನಿಲ್ಲುತ್ತೋ ಕಾದು ನೋಡಬೇಕಾಗಿದೆ.‌

(ವರದಿ: ರಾಘವೇಂದ್ರ ಗಂಜಾಮ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...