ಪ್ರವಾಸಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಮುಳುಗಿ ಸಾವು

45 ವಿದ್ಯಾರ್ಥಿಗಳು, ನಾಲ್ವರು ಉಪನ್ಯಾಸಕರು ತಲಕಾಡು ನಿಸರ್ಗಧಾಮಕ್ಕೆ ಶೈಕ್ಷಣಿಕ ಪ್ರವಾಸ ಬಂದಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮೈಸೂರು(ಡಿ.10): ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಈಜಾಡುವಾಗ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ

  ಮೃತರನ್ನು ಆಲ್ಫ್ರೆಡ್ ವಿಜಯ್ (16), ಹೇಮಂತ್ (17) ಎಂದು ಗುರುತಿಸಲಾಗಿದೆ. ಹೆಬ್ಬಾಳ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ .

  ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ, ಆದ್ರೆ ಮತ್ತೆ ಡಿಸಿಎಂ ಹುದ್ದೆ ಯಾರಿಗೂ ಇಲ್ಲ; ಸಚಿವ ಆರ್​.ಅಶೋಕ್​

  45 ವಿದ್ಯಾರ್ಥಿಗಳು, ನಾಲ್ವರು ಉಪನ್ಯಾಸಕರು ತಲಕಾಡು ನಿಸರ್ಗಧಾಮಕ್ಕೆ ಶೈಕ್ಷಣಿಕ ಪ್ರವಾಸ ಬಂದಿದ್ದರು. ಈ ವೇಳೆ ಐವರು ವಿದ್ಯಾರ್ಥಿಗಳು ಸ್ನಾನ ಮಾಡಲು ಕಾವೇರಿ ನದಿಗೆ ಇಳಿದಿದ್ದರು. ದುರಾದೃಷ್ಟವಶಾತ್​ ಐವರಲ್ಲಿ ಇಬ್ಬರು ವಿದ್ಯಾರ್ಥಿಗಳು ಮುಳುಗಿ ನೀರುಪಾಲಾಗಿದ್ದಾರೆ.

  ಅಂಬಿಗರ ನೆರವಿನಿಂದ ಮೂವರು ವಿದ್ಯಾರ್ಥಿಗಳ ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  ಆಡಿದ ಮಾತನ್ನು ಮಾಡಿ ತೋರಿಸಿದ ಡಿಸಿಎಂ ಲಕ್ಷ್ಮಣ ಸವದಿ
  First published: