ಬೀದರ್: ಜಿಲ್ಲೆಯ ಹುಮನಾಬಾದ್ (Humanabad, Bidar) ಹೊರವಲಯದಲ್ಲಿರುವ ಬಸವತೀರ್ಥ ಮಠದ (Basavateertha Mutt) ಸಿದ್ದಲಿಂಗ ಸ್ವಾಮಿ (Siddalinga Swamy) ವಿರುದ್ಧ ಅತ್ಯಾಚಾರಕ್ಕೆ ಯತ್ನ ಸಹಿತ ಎರಡು ಪ್ರಕರಣ ದಾಖಲಾಗಿದೆ. ಹುಮನಾಬಾದ್ ಮತ್ತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಸಿದ್ದಲಿಂಗ ಸ್ವಾಮಿ ಅವರು ಶುಕ್ರವಾರ ಹುಮನಾಬಾದ್-ಬೀದರ್ ರಸ್ತೆಯಲ್ಲಿಯ ಬಾಲ್ಕಿ ಕ್ರಾಸ್ ಬಳಿ ತಮ್ಮ ನಾಲ್ವರು ಅನುಯಾಯಿಗಳ ಜೊತೆ ಗಾಳಿಯಲ್ಲಿ ಗುಂಡು (Gun Firing) ಹಾರಿಸಿದ್ದರು. ಆದರೆ ಸ್ವಾಮಿ ಮತ್ತು ಅವರ ಅನುಯಾಯಿಗಳು ತಾವು ಗುಂಡು ಹಾರಿಸಿದ್ದನ್ನು ಯಾರು ಗಮನಿಸಿಲ್ಲ ಎಂದು ತಿಳಿದಿದ್ದರು. ಸಿದ್ದಲಿಂಗ ಸ್ವಾಮಿ ಗುಂಡು ಹಾರಿಸುವಾಗ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ್ ಕಲ್ಲೂರ್ ಎಂಬವರು ಇದನ್ನು ಗಮನಿಸಿದ್ದರು.
ಈ ಸಂಬಂಧ ಹುಮನಾಬಾದ್ ಪೊಲೀಸ್ ಠಾಣೆಗೆ ತೆರಳಿದ್ದ ನಾಗೇಶ್ ಕಲ್ಲೂರ್ ದೂರು ದಾಖಲಿಸಿದ್ದರು. ಸಿದ್ದಲಿಂಗ ಸ್ವಾಮಿ ಬಾಲ್ಕಿ ಕ್ರಾಸ್ನಲ್ಲಿ ಗುಂಡು ಹಾರಿಸಿರೋದನ್ನು ನಾನು ನೋಡಿದ್ದೇನೆ. ಕಾನೂನಿನ ಅರಿವು ಇರೋ ಸ್ವಾಮಿಗಳು ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ನಾಗೇಶ್ ಕಲ್ಲೂರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ದಾಖಲಾದ ಬಳಿಕ ರಾಯಚೂರಿನ ಚೌಕಿಮಠದಲ್ಲಿ ಹುಮನಾಬಾದ್ ಸಬ್ ಇನ್ಸ್ಪೆಕ್ಟರ್ ಮಂಜುನಗೌಡ ಪಾಟೀಲ್ ಅವರು ಸಿದ್ದಲಿಂಗ ಸ್ವಾಮಿಯಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.
ಸಿದ್ದಲಿಂಗ ಸ್ವಾಮಿ ವಿರುದ್ಧ ಮತ್ತೊಂದು ದೂರು
ಸಿದ್ದಲಿಂಗ ಸ್ವಾಮಿ ವಿರುದ್ಧ ಶನಿವಾರ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿದ್ದಲಿಂಗ ಸ್ವಾಮಿ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಅತಿಕ್ರಮಣ ತಡೆಯಲು ಹೋದಾಗ ನನ್ನ ಪತ್ನಿಯ ಮಾನಭಂಗಕ್ಕೆ ಸಿದ್ದಲಿಂಗ ಸ್ವಾಮಿ ಪ್ರಯತ್ನಿಸಿದ್ದಾರೆ ಎಂದು ಕಲ್ಲೂರ ತಾಂಡಾದ ನಿವಾಸಿ ಸೋಮನಾಥ್ ಲಕ್ಷ್ಮಣ್ ಪವಾರ್ ಎಂಬವರು ದೂರು ದಾಖಲಿಸಿದ್ದಾರೆ. ಸೋಮನಾಥ್ ನೀಡಿದ ದೂರಿನ ಅನ್ವಯ ಸಬ್ ಇನ್ಸ್ಪೆಕ್ಟರ್ ಮಹೇಂದ್ರಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮರಳು ಗಣಿಗಾರಿಕೆ ಎಫೆಕ್ಟ್
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಹ ಸ್ಥಿತಿಯಲ್ಲಿದ್ದಾರೆ ಹಾವೇರಿ ರೈತರು. ಅಧಿಕಾರಿಗಳ ಎಡವಟ್ಟು ಕೆಲಸಕ್ಕೆ ಕಂಗಾಲಾಗಿದ್ದಾರೆ ನೂರಾರು ಅನ್ನದಾತರು. ಫಲವತ್ತಾದ ಭೂಮಿ ಉಳಿಸಿಕೊಳ್ಳಲು ರೈತರ ಪರದಾಡುವಂತಾಗಿದೆ.
ಬೆಲೆ ಬಾಳುವ ಜಮೀನುಗಳ ಮೇಲೆ ಅಕ್ರಮ ಮರಳುಕೋರರ ಕಣ್ಣು ಬಿದ್ದಿದೆ. ಹಾವೇರಿ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಿದ್ದಾರೆ. ಈಗಾಗಲೇ ಇಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾಗಲ್ಲ ಎಂದು ಅಧಿಕಾರಿಗಳು NOC ನೀಡಿದ್ದಾರೆ.
ಇದು ಹಾವೇರಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಯ ದಗಲ್ಬಾಜಿ ಕೆಲಸ ಎಂದು ರೈತರು ಕಿಡಿಕಾರಿದ್ದಾರೆ. ಐದಾರು ರೈತರ ಮನವೊಲಿಸಿ ಲೀಜ್ ಗೆ ಪಡೆದುಕೊಂಡಿರುವ ರಮೇಶ್ ಭಜಂತ್ರಿ ಎಂಬ ಗುತ್ತಿಗೆದಾರ. ಲೀಜ್ ಗೆ ಪಡೆದಿರುವ 10 ಎಕರೆಯ ಜಮೀನಿನಲ್ಲಿ ಮರಳು ತೆಗೆಯುವ ಪರವಾನಗಿ ಪಡೆದಿದ್ದಾರೆ. ಪರವಾನಗಿ ನೀಡಿರುವ ಜಮೀನುಗಳು ಸುತ್ತ 150 ಎಕರೆಯ ಜಮೀನು ಇರುವ ರೈತರಿಗೆ ಮಾಹಿತಿ ಕೂಡಾ ಕೊಟ್ಟಿಲ್ಲ. ಇದರಿಂದ 150 ಎಕರೆಗೂ ಅಧಿಕ ಭೂಮಿ ವರದಾ ನದಿಗೆ ಕೊಚ್ಚಿಕೊಂಡು ಹೋಗುತ್ತದೆ ಎನ್ನುವ ಭಯ ಕಾಡ್ತಿದೆ.
ಮರಳು ಅಗೆಯುವ ಸಲುವಾಗಿ ಗುಂಡಿ ತೋಡಿದರೆ, ಪಕ್ಕದ ಪಲವತ್ತಾದ ಭೂಮಿ ಜವಳು ಹಿಡಿಯುತ್ತದೆ ಎಂದು ರೈತರು ಆತಂಕದಲ್ಲಿದ್ದಾರೆ. ಮರಳುಗಾರಿಕೆ ನಿಲ್ಲದಿದ್ರೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ