ಪಿಎಸ್ಐ ನೇಮಕಾತಿ ವೇಳೆ ಹೆಚ್ಚು ಎತ್ತರ ತೋರಿಸಲು ಐನಾತಿ ಐಡಿಯಾ; ಅಭ್ಯರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು

ಸಬ್ ಇನ್ಸಪೆಕ್ಟರ್ ಹುದ್ದೆಯ ದೇಹ ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆ ನಡೆಯುತ್ತಿರುವ ವೇಳೆ ಇಬ್ಬರು ಯುವಕರು ಅಕ್ರಮ ಎಸಗಲು ಹೋಗಿ ಸಿಕ್ಕಿ ಬಿದ್ದು, ಜೈಲು ಪಾಲಾಗಿದ್ದಾರೆ

ಆರೋಪಿಗಳು ಮೋಸ ಮಾಡಲು ಬಳಸಿದ ವಸ್ತುಗಳು

ಆರೋಪಿಗಳು ಮೋಸ ಮಾಡಲು ಬಳಸಿದ ವಸ್ತುಗಳು

  • Share this:
ಬೆಳಗಾವಿ (ಆ. 13)- ಪೊಲೀಸ್ ನೇಮಕಾತಿ ಅಂದ್ರೆ ಅಲ್ಲಿ ಸಾಕಷ್ಟು ಎಚ್ಚರಿಕೆ, ಮುಂಜಾಗೃತಾ ಕ್ರಮವನ್ನು ವಹಿಸಲಾಗುತ್ತದೆ. ಪಿಎಸ್ಐ ಹುದ್ದೆಗೆ ಆಯ್ಕೆಯಾಗು ಲಿಖಿತ ಹಾಗೂ ದೈಹಿಕ ಸಾಮರ್ಥ ಸಹ ಅಷ್ಟೇ ಮುಖ್ಯವಾರುತ್ತದೆ. ಆದರೆ ಎತ್ತರ ಕಡಿಮೆ ಇದ್ದರೂ ಪಿಎಸ್ಐ ಆಗುವ ಆಸೆಯಿಂದ ಇಬ್ಬರು ಯುವಕರು ವಾಮವಾರ್ಗ ಅನುಸರಿಸಿದ್ದಾರೆ. ಪೊಲೀಸರಿಗೆ ಚಳ್ಳೆ ಹಣ್ಣು ತನ್ನಿಸಿ ಪೊಲೀಸ್ ಆಗಲು ಹೋದ ಇವರು ಸದ್ಯ ಜೈಲು ಪಾಲಾಗಿದ್ದಾರೆ. ಅಚ್ಚರಿ ಆದರೂ ಹೌದು ಇಂತಹದೊಂದು ಘಟನೆ ಬೆಳಗಾವಿ ನಗರದಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ನಡೆದಿದೆ. ಇಬ್ಬರು ಯುವಕರು ತಮ್ಮ ಎತ್ತರ ಹೆಚ್ಚು ತೋರಿಸಲು  ಥರ್ಮಾಕೋಲಾ ಹಾಗೂ ವಿಗ್ ಬಳಸಿದ್ದು,  ಕೊನೆಗೂ ಪೊಲೀಸರ ಕೈಗೆ ಸಿಕ್ಕು ಅಂದರ್ ಆಗಿದ್ದಾರೆ.

ಬೆಳಗಾವಿಯ ಮಚ್ಚೆ ಗ್ರಾಮದ ಬಳಿ ಇರುವ ಕೆ ಎಸ್ ಆರ್ ಪಿ 2ನೇ  ಪಡೆಯ ಮೈದಾನದಲ್ಲಿ ಸಬ್ ಇನ್ಸಪೆಕ್ಟರ್ ಹುದ್ದೆಯ ದೇಹ ಸಹಿಷ್ಣುತೆ ಮತ್ತು ದೇಹದಾರ್ಢ್ಯ ಪರೀಕ್ಷೆ ನಡೆಯುತ್ತಿದೆ. ನೂರಾರು ಜನ ಯುವಕರು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇಬ್ಬರು ಯುವಕರು ಅಕ್ರಮ ಎಸಗಲು ಹೋಗಿ ಸಿಕ್ಕಿ ಬಿದ್ದು, ಜೈಲು ಪಾಲಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದ ಬಾಳೇಶ ದುರದುಂಡಿ ಎನ್ನುವ ಯುವಕ ಎತ್ತರ ಕಡಿಮೆ ಇದೆ ಅಂತ ಗೊತ್ತಿದ್ದರು ಪರೀಕ್ಷೆಗೆ ಹಾಜರಾಗಿದ್ದನು.

ತನ್ನ ತಲೆಯ ಮೇಲೆ ಥರ್ಮಕೋಲದ ಮೂರು ತುಂಡುಗಳನ್ನು ಇಟ್ಟುಕೊಂಡು ಅದರ ಮೇಲೆ ವಿಗ್ ಧರಸಿಕೊಂಡಿದ್ದನು. ಈ  ಮೂಲಕ ನೇಮಕಾತಿ ಪ್ರಾಧಿಕಾರಕ್ಕೆ ಮೋಸ ಎಸಗಲು ಸಿದ್ದವಾಗಿದ್ದನು. ಆದರೇ ಇದನ್ನು ಗಮನಿಸಿದ ಪೊಲೀಸರು ಆತನ ಅಸಲಿಯತ್ತನ್ನು ಬಯಲು ಮಾಡಿದ್ದಾರೆ.  ಮೋಸ ಎಸಗಲು ಯತ್ನಿಸಿದ ಬಾಳೇಶ ದುರದಂಡಿ ಮೇಲೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಲಂ 420, 511 ಐಪಿಸಿ ಅನ್ವದ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ಆರಂಭಿಸಿದ್ದಾರೆ.

ಇದನ್ನು ಓದಿ: ಅಂಗಾಂಗ ದಾನಕ್ಕೆ ಮುಂದಾಗಿ ಮಾದರಿಯಾದ ಸಿಎಂ ಬಸವರಾಜ ಬೊಮ್ಮಾಯಿ

ಇದೇ ರೀತಿಯಲ್ಲಿ ಮತ್ತೊಂದು ಪ್ರಕರಣ ಸಹ ಬೆಳಗಾವಿಯಲ್ಲಿ ನಡೆದಿದೆ. ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಯುವಕ ಉಮೇಶ ಎನ್ ಸಹ ಪೊಲೀಸರಿಗೆ ಮೋಸ ಮಾಡಲು ಯತ್ನಿಸಿ ಸಿಕ್ಕಿ ಬಿದಿದ್ದಾನೆ. ಈತ ಸಹ ಎತ್ತರ ಹೆಚ್ಚು ಮಾಡಲು ವಾಮಮಾರ್ಗವನ್ನು ಅನುಸರಿಸಿದ್ದಾನೆ. ತನ್ನ ಎತ್ತರ ಹೆಚ್ಚು ಮಾಡಿಕೊಳ್ಳಲು, ಕೂದಲಿನ ಮೇಲೆ ಫೆವಿಕಲ್ ಹಾಕಿಕೊಂಡು ನಂತರ ವಿಗ್ ಧರಿಸಿಕೊಂಡು ಬಂದಿದ್ದನು. ಅನುಮಾನಗೊಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ. ಆರೋಪಿ ಉಮೇಶ ವಿರುದ್ದ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ 420ರ ಅನ್ವಯ ದೂರು ದಾಖಲಾಗಿದೆ.

ಎರಡು ಪ್ರಕರಣದಿಂದ ಬೆಳಗಾವಿ ಪೊಲೀಸರು ಮತ್ತಷ್ಟು ಅಲರ್ಟ್ ಆಗಿದ್ದಾರೆ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ನಗರ ಪೊಲೀಸರು ಪ್ರತ್ಯೇಕ ತಂಡವನ್ನು ರಚನೆ ಮಾಡಿದ್ದಾರೆ. ಮೋಸ ಮಾಡಲು ಹೋಗಿ ಈ ಇಬ್ಬರು ಯುವಕರು ಸದ್ಯ ಸಿಕ್ಕಿ ಬಿದ್ದು, ಪೊಲೀಸರ ಅತಿಥಿಯಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಲು ಹೋಗಿ ಬಂಧಿಯಾಗಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: