ಬೆಂಗಳೂರಲ್ಲಿ ಇಂದು 2 ಬೃಹತ್ ಪ್ರತಿಭಟನಾ ಮೆರವಣಿಗೆ; ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಭೀತಿ

ಈ ಎರಡು ಮೆರವಣಿಗೆಗಳು ಒಂದೇ ಮಾರ್ಗದಲ್ಲಿ ಬರುತ್ತಿರುವುದರಿಂದ ಪೊಲೀಸರೂ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಹಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆಗಳನ್ನು ಮಾಡಿ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಲು ಪೊಲೀಸರು ಪ್ರಯತ್ನಿಸಿದ್ದಾರೆ.

Vijayasarthy SN | news18-kannada
Updated:October 10, 2019, 7:00 AM IST
ಬೆಂಗಳೂರಲ್ಲಿ ಇಂದು 2 ಬೃಹತ್ ಪ್ರತಿಭಟನಾ ಮೆರವಣಿಗೆ; ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಭೀತಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಅ. 10): ರಾಜ್ಯ ರಾಜಧಾನಿಯ ವಾಹನ ಸವಾರರು ಗಮನಿಸಬೇಕಾದ ಸುದ್ದಿ ಇದು. ಇಂದು ಬೆಂಗಳೂರಲ್ಲಿ ಎರಡು ಬೃಹತ್ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ. ಜೆಡಿಎಸ್ ಮತ್ತು ರೈತ ಸಂಘಟನೆಗಳು ಪ್ರತ್ಯೇಕವಾಗಿ ರ್ಯಾಲಿ ನಡೆಸುತ್ತಿವೆ. ಪ್ರತ್ಯೇಕ ಮೆರವಣಿಗೆಯಾದರೂ ಇವೆರಡೂ ಕೂಡ ಬಹುತೇಕ ಒಂದೇ ಮಾರ್ಗದಲ್ಲಿ ಸಾಗಲಿದೆ. ಎರಡೂ ಮೆರವಣಿಗೆಯಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಂಭವ ಇದೆ.

ರೈತರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜೆಡಿಎಸ್ ಮತ್ತು ರೈತ ಸಂಘ ಈ ಪ್ರತಿಭಟನೆಗಳನ್ನ ನಡೆಸುತ್ತಿವೆ. ಹೆಚ್.ಡಿ. ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಆನಂದ್ ರಾವ್ ಸರ್ಕಲ್ ಬಳಿಯ ಮೌರ್ಯ ಪ್ರತಿಮೆಯಿಂದ ಫ್ರೀಡಂ ಪಾರ್ಕ್​ವರೆಗೂ ಮೆರೆವಣಿಗೆ ನಡೆಸುತ್ತಿದೆ. ಇದು ಮೌರ್ಯ ಸರ್ಕಲ್​ನಿಂದ ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಆವರಣ ಪ್ರವೇಶಿಸಲಿದೆ.

ಇದನ್ನೂ ಓದಿ: ವಿಧಾನಸಭೆ, ಪರಿಷತ್ನಲ್ಲಿ ಸಿದ್ದರಾಮಯ್ಯ ಮತ್ತು ಎಸ್.ಆರ್. ಪಾಟೀಲ್ ವಿಪಕ್ಷ ನಾಯಕರು; ಮೂಲ ಕಾಂಗ್ರೆಸ್ಸಿಗರಿಗೆ ಹಿನ್ನಡೆ

ಅತ್ತ, ರೈತ ಸಂಘ ಆಯೋಜಿಸಿರುವ ಮೆರವಣಿಗೆಯಲ್ಲಿ ಸಿಟಿ ರೈಲು ನಿಲ್ದಾಣದಿಂದ ಆನಂದರಾವ್ ಮೇಲ್ಸೇತುವೆ, ಶೇಷಾದ್ರಿ ರಸ್ತೆ, ಕಾಳಿದಾಸ ರಸ್ತೆ ಮೂಲಕ ಫ್ರೀಡಂ ಪಾರ್ಕ್ ಪ್ರವೇಶಿಸುವ ಯೋಜನೆ ಇದೆ.

ಈ ಎರಡು ಮೆರವಣಿಗೆಗಳು ಒಂದೇ ಮಾರ್ಗದಲ್ಲಿ ಬರುತ್ತಿರುವುದರಿಂದ ಪೊಲೀಸರೂ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಹಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆಗಳನ್ನು ಮಾಡಿ ಟ್ರಾಫಿಕ್ ಜಾಮ್ ಆಗುವುದನ್ನು ತಪ್ಪಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಈ ಮಾರ್ಗದಲ್ಲಿ ಹೋಗಬೇಕೆನ್ನುವವರಿಗೆ ಆನಂದ್ ರಾವ್ ಫ್ಲೈಓವರ್ ಬಳಿ ಎಡ ತಿರುವು ಪಡೆದು ರೇಸ್ ಕೋರ್ಸ್ ರಸ್ತೆ ಕಡೆ ಸಂಚರಿಸುವುದು ಒಂದು ಪರ್ಯಾಯ ಮಾರ್ಗವಾಗಿದೆ. ಸಿಐಡಿ ಜಂಕ್ಷನ್, ಪ್ಯಾಲೇಸ್ ರಸ್ತೆ ಮೂಲಕ ಕೆಆರ್ ಸರ್ಕಲ್ ಪ್ರವೇಶಿಸುವುದು ಮತ್ತೊಂದು ಪರ್ಯಾಯ ಮಾರ್ಗವಾಗಿದೆ.

(ವರದಿ: ಮುನಿರಾಜು ಹೊಸಕೋಟೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 10, 2019, 7:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading