ಬೆಂಗಳೂರಿನಲ್ಲಿ ಟೈಡಾಲ್ ಮಾತ್ರೆ​ ಸೇವಿಸಿ ಇಬ್ಬರು ಸಾವು; ಅಕ್ರಮ ಔಷಧ ಮಾರಾಟ ಮಾಡಿದ್ದ ಮೆಡಿಕಲ್ ಶಾಪ್ ಮಾಲೀಕನ ಬಂಧನ

Bangalore Crime News: ಮೃತ ಗೋಪಿ ಮೆಡಿಕಲ್ ಶಾಪ್ ಗೆ ತೆರಳಿ ಮಾತ್ರೆ ಖರೀದಿಸಿ ತಂದಿದ್ದ. ಬಳಿಕ ವೈಯಾಲಿಕಾವಲ್​ನ ಅಭಿಷೇಕ್ ಮನೆಯಲ್ಲಿ ಮೂವರು ಡಿಸ್ಟಿಲ್ ವಾಟರ್ ನಲ್ಲಿ ಮಾತ್ರೆಯನ್ನು ಕ್ರಶ್ ಮಾಡಿ ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಿಕೊಂಡಿದ್ದರು.

news18-kannada
Updated:November 23, 2019, 9:04 AM IST
ಬೆಂಗಳೂರಿನಲ್ಲಿ ಟೈಡಾಲ್ ಮಾತ್ರೆ​ ಸೇವಿಸಿ ಇಬ್ಬರು ಸಾವು; ಅಕ್ರಮ ಔಷಧ ಮಾರಾಟ ಮಾಡಿದ್ದ ಮೆಡಿಕಲ್ ಶಾಪ್ ಮಾಲೀಕನ ಬಂಧನ
ಅಭಿಲಾಷ್​-ಗೋಪಿ
  • Share this:
ಬೆಂಗಳೂರು (ನ. 23): ನಗರದ ಮಲ್ಲೇಶ್ವರಂನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್​ ಮಾದರಿಯ ಟೈಡಾಲ್ ಮಾತ್ರೆಯನ್ನು ಸಿರಿಂಜ್ ಮೂಲಕ ಸೇವಿಸಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್​ನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

ನ. 20ರಂದು ನಡೆದ ಪಾರ್ಟಿಯಲ್ಲಿ ಇಬ್ಬರು ಯುವತಿಯರೂ ಸೇರಿದಂತೆ 11 ಜನ ಪಾಲ್ಗೊಂಡಿದ್ದರು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. 9 ಜನರ ಸ್ಥಿತಿ ಗಂಭೀರವಾಗಿತ್ತು. ಆ ಡ್ರಗ್ಸ್​ ಎಲ್ಲಿಂದ ಖರೀದಿಸಿದ್ದಾರೆಂಬುದರ ಪತ್ತೆ ಮಾಡಿದ ಪೊಲೀಸರಿಗೆ ರಾಜಾಜಿನಗರ ಮನ್ ದೀಪ್ ಫಾರ್ಮ್​ನಲ್ಲಿ ಟೈಡಾಲ್ ಟ್ಯಾಬ್ಲೆಟ್, ಸಿರಿಂಜ್, ಡಿಸ್ಟಿಲ್ ವಾಟರ್ ಖರೀದಿ ಮಾಡಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಔಷಧ ಮಾರಾಟ ಮಾಡಿದ್ದ ಆ ಮೆಡಿಕಲ್ ಶಾಪ್ ಮಾಲೀಕನನ್ನು ಬಂಧಿಸಿದ್ದಾರೆ.

ಮೃತ ಗೋಪಿ ಮೆಡಿಕಲ್ ಶಾಪ್ ಗೆ ತೆರಳಿ ಮಾತ್ರೆ ಖರೀದಿಸಿ ತಂದಿದ್ದ. ಬಳಿಕ ವೈಯಾಲಿಕಾವಲ್​ನ ಅಭಿಷೇಕ್ ಮನೆಯಲ್ಲಿ ಮೂವರು ಡಿಸ್ಟಿಲ್ ವಾಟರ್ ನಲ್ಲಿ ಮಾತ್ರೆಯನ್ನು ಕ್ರಶ್ ಮಾಡಿ ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಿಕೊಂಡಿದ್ದರು. ಹೆಚ್ಚಿನ ಡೋಸೇಜ್ ಇದ್ದ ಹಿನ್ನಲೆಯಲ್ಲಿ ಅಸ್ವಸ್ಥಗೊಂಡು, ಅಭಿಷೇಕ್ ಮತ್ತು ಗೋಪಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.ಇದೇ ಮಾದರಿಯಲ್ಲಿ ಸುಹಾಸ್ ಅಲಿಯಾಸ್ ಚಿಟ್ಟೆಗೂ ಡ್ರಗ್ಸ್​ ಇಂಜೆಕ್ಟ್ ಮಾಡಲಾಗಿತ್ತು. ಸದ್ಯ ಸುಹಾಸ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ವಿಧಾನಸಭಾ ಉಪಚುನಾವಣೆಗೆ ದಿನಗಣನೆ; ಹುಣಸೂರಿನಲ್ಲಿ ಇಂದು ಮೂರೂ ಪಕ್ಷಗಳಿಂದ ಭರ್ಜರಿ ಪ್ರಚಾರ

ಶನಿವಾರದಿಂದ ಸೋಮವಾರದವರೆಗೆ ಮಲ್ಲೇಶ್ವರದ ಕೋದಂಡರಾಮಪುರದ  ಲಕ್ಷ್ಮೀನರಸಿಂಹಸ್ವಾಮಿ  ಜಾತ್ರೆ ನಡೆದಿತ್ತು. ಜಾತ್ರೆಯ ಕಡೆಯ ದಿನವಾದ ಸೋಮವಾರ ರಾತ್ರಿ ಗೆಳೆಯರೆಲ್ಲ ಮಲ್ಲೇಶ್ವರದ ಫ್ಲವರ್ ಮಾರ್ಕೆಟ್​ನ ಬಿಬಿಎಂಪಿ ಗ್ರೌಂಡ್ ಬಳಿ ಸೇರಿ ಪಾರ್ಟಿ‌ ಮಾಡಿದ್ದರು. ಈ ಗುಂಪಿನಲ್ಲಿದ್ದ ಓರ್ವನ ಹುಟ್ಟುಹಬ್ಬ ಆಚರಣೆ ಮಾಡಲು ಇವರು ಇಲ್ಲಿ ಸೇರಿದ್ದರು.

ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಡ್ರಗ್​; ತಡರಾತ್ರಿ ಪಾರ್ಟಿ ಮಾಡಿದ್ದ ಇಬ್ಬರ ಸಾವು, 9 ಯುವಕರು ಗಂಭೀರ

ತಡರಾತ್ರಿವರೆಗೂ ಗೆಳೆಯರೊಂದಿಗೆ ಪಾರ್ಟಿ ಮಾಡಿ ನಂತರ ಇವರು ಮನೆಗೆ ತೆರಳಿದ್ದರು. ಬೆಳಗಿನ ಜಾವ ಎಲ್ಲರಿಗೂ ತೀವ್ರ ಜ್ವರ, ತಲೆಸುತ್ತು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಪೈಕಿ ತೀವ್ರ ಅಸ್ವಸ್ಥಗೊಂಡ ಅಭಿಷೇಕ್ ಹಾಗೂ ಗೋಪಿ ಮೃತಪಟ್ಟಿದ್ದರು.ಟೈಡಾಲ್ ಮಾದಕವಸ್ತು ರೀತಿಯಲ್ಲಿರೋ ಮಾತ್ರೆಯಾಗಿದ್ದು, ಇದನ್ನು ಡಿಸ್ಟಿವಾಟರ್​ನಲ್ಲಿ ಬೆರೆಸಿ ಇಂಜೆಕ್ಟ್ ಮಾಡಿಕೊಂಡಿದ್ದರು. ಪಾಲಕರು ಮರ್ಯಾದೆಗೆ ಅಂಜಿ ಮಕ್ಕಳು ಗಾಂಜಾ ಸೇವನೆ ಮಾಡಿದ್ದನ್ನು ಮುಚ್ಚಿಟ್ಟರು ಎನ್ನುವ ಮಾತು ಕೇಳಿಬಂದಿತ್ತು.
First published: November 23, 2019, 9:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading