• Home
 • »
 • News
 • »
 • state
 • »
 • Crime News: ತಂಗಿಯ ನಗ್ನ ಫೋಟೋ ಇಟ್ಕೊಂಡಿದ್ದವನಿಗೆ 50 ಬಾರಿದು ಇರಿದು ಕೊಂದ್ರು

Crime News: ತಂಗಿಯ ನಗ್ನ ಫೋಟೋ ಇಟ್ಕೊಂಡಿದ್ದವನಿಗೆ 50 ಬಾರಿದು ಇರಿದು ಕೊಂದ್ರು

ಚಿಕ್ಕಬಳ್ಳಾಪುರ ಕೊಲೆ ಕೇಸ್

ಚಿಕ್ಕಬಳ್ಳಾಪುರ ಕೊಲೆ ಕೇಸ್

ದೊಡ್ಡಬಳ್ಳಾಫುರದ ನಂದಾ ಹಾರೋಬಂಡೆ ಗ್ರಾಮದ ದರ್ಶನ್ ಎಂಬ ಯುವಕನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡಿದ್ದ. ಅದೇ ವಿಚಾರಕ್ಕೆ ಕೊಲೆ ನಡೆದಿದೆ.

 • Share this:

  ಸಹೋದರಿಯ ಬೆತ್ತಲೆ ಫೋಟೋ (Private Photo) ಇಟ್ಟುಕೊಂಡಿದ್ದ ಅಂತ ಬರ್ಬರವಾಗಿ ಕೊಂದ ಘಟನೆ ಚಿಕ್ಕಬಳ್ಳಾಪುರ (Chikkaballapura) ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋವನ್ನು ಹೊಂದಿದ್ದಕ್ಕೆ ಆಕ್ರೋಶಗೊಂಡಿದ್ದ ದರ್ಶನ್, ತನ್ನ ಸಹಚರ ಆಶ್ರಯ್ ಜೊತೆ ಸೇರಿ ದೊಡ್ಡಬಳ್ಳಾಪುರ (Doddaballapura) ಮೂಲದ ನಂದಾ ಎಂಬಾತನಿಗೆ 50 ಬಾರಿ ಇರಿದು ಬರ್ಬರವಾಗಿ ಕೊಂದಿದ್ದಾನೆ. ದೊಡ್ಡಬಳ್ಳಾಫುರದ ನಂದಾ ಹಾರೋಬಂಡೆ ಗ್ರಾಮದ ದರ್ಶನ್ ಎಂಬ ಯುವಕನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡಿದ್ದ. ಅದೇ ವಿಚಾರಕ್ಕೆ ಕೊಲೆ ನಡೆದಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸದ್ಯ ಪೊಲೀಸರು (police) ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


  ಬಟ್ಟೆ ತಗೊಂಡ್ಲು, ಹಣ ಕೊಡ್ಲಿಲ್ಲ


  ಯುವತಿಯೊಬ್ಬಳು ಬಟ್ಟೆ ಖರೀದಿಸಿ ಹಣ ಕೊಡದೇ ಪರಾರಿಯಾದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. 2,600 ರೂಪಾಯಿಯ ಮೂರು ಟೀ ಶರ್ಟ್, ಮೂರು ಬರ್ಮೋಡಾ ಖರೀದಿಸಿದ್ದ ಯುವತಿ‌, ಫೋನ್ ಪೇ (Phone Pay) ವರ್ಕ್ ಆಗುತ್ತಿಲ್ಲ. ಸ್ಕೂಟಿಯಲ್ಲಿ ಹಣ ಇದೆ ಎಂದು ಹೇಳಿ ಪರಾರಿಯಾಗಿದ್ದಾಳೆ.


  ಹವಾ ಸೃಷ್ಟಿಸಲು ಹಲ್ಲೆ


  ಬೆಂಗಳೂರಲ್ಲಿ (Bengaluru Crime News) ಪುಡಿ ರೌಡಿಗಳ ಹಾವಳಿ ಹೆಚ್ಚುತ್ತಿದೆ. ಏರಿಯಾದಲ್ಲಿ ಹೆಸರು ಮಾಡಬೇಕು ಅಂತ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಘಟನೆ ಆರ್​​.ಟಿ.ನಗರದ ಗಂಗಾನಗರದಲ್ಲಿ (Ganga Nagara, Bengaluru) ನಡೆದಿದೆ. ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ವೆಂಕಟೇಶ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.


  ಬೇಕಿತ್ತಾ ವ್ಹೀಲಿಂಗ್ ಹುಚ್ಚು!


  ಇತ್ತೀಚೆಗೆ ರಸ್ತೆಗಳಲ್ಲಿ ಬೈಕ್ ವ್ಹೀಲಿಂಗ್ (Bike Wheeling) ಮಾಡೋದು ಸಿಕ್ಕಾಪಟ್ಟೆ ಹೆಚ್ಚಾಗಿದೆ. ವ್ಹೀಲಿಂಗ್ ಮಾಡೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಆದ್ರೆ ವ್ಹೀಲಿಂಗ್ ಹುಚ್ಚಿಗೆ ಬಿದ್ದವರು ಅಪಘಾತಕ್ಕೀಡಾಗುತ್ತಾರೆ. ಅಂಥದ್ದೇ ಒಂದು ಘಟನೆ ತಮಿಳುನಾಡಿನ ಕರೈಕುಡಿಯಲ್ಲಿ ನಡೆದಿದೆ. ವ್ಹೀಲಿಂಗ್ ಮಾಡುವಾಗ ಯುವಕನೋರ್ವ ಬೈಕ್​ನಿಂದ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.


  ಪಿಎಫ್​ಐ ಸ್ಫೋಟಕ ವಿಡಿಯೋ


  ಕೆ.ಜಿ ಹಳ್ಳಿ PFI ಆರೋಪಿಗಳ (PFI Accused) ಕುರಿತ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಬರೋಬ್ಬರಿ 1000 ಜಿಬಿ ಡೇಟಾ ರಿಟ್ರೀವ್ ಮಾಡಲಾಗಿದ್ದು, ಮೊಬೈಲ್‌ಗಳಲ್ಲಿ 11 ಹಿಂದೂ ಮುಖಂಡರ ಪ್ರಚೋದನಾಕಾರಿ ಭಾಷಣದ ವಿಡಿಯೋ ಪತ್ತೆಯಾಗಿವೆ.


  ಕೆಲ ಕಟ್ಟರ್ RSS ಹಾಗೂ ಬಿಜೆಪಿ ನಾಯಕರು (BJP Leaders) ಇಸ್ಲಾಂ ವಿರೋಧಿ ಭಾಷಣ ಮಾಡಿದ್ರು. ಆ ವಿಡಿಯೋಗಳನ್ನು ಹೆಚ್ಚೆಚ್ಚು ಶೇರ್‌ ಮಾಡಲಾಗಿದೆ. ಮಾರ್ಕ್ ಆಗಿರೋ ವಿಡಿಯೋಗಳನ್ನ 8 ಮಂದಿ ಮಾತ್ರ ಶೇರ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


  ಇದನ್ನೂ ಓದಿ:  Mangaluru Dasara: ಮಂಗಳೂರು ದಸರಾದಲ್ಲಿ ನವದುರ್ಗೆಯರ ಅವತಾರ ನೋಡಿ


  ಬಾಲಕಿ ಮೇಲೆ 8 ಜನರಿಂದ ರೇಪ್


  ರಾಜಸ್ಥಾನದ ಅಲ್ವಾರ್​ನಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. 17 ವರ್ಷದ ಬಾಲಕಿ ಮೇಲೆ 8 ಜನರು ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ವಿಡಿಯೋ ತೋರಿಸಿ ಪದೇ ಪದೇ ಅತ್ಯಾಚಾರ ನಡೆಸಲಾಗಿದೆ. ಅಲ್ಲದೇ ಬಾಲಕಿಯಿಂದ 50 ಸಾವಿರ ಹಣ ಪಡೆದಿದ್ದ ರಕ್ಕಸರು ಮತ್ತೇ ಎರಡೂವರೆ ಲಕ್ಷ ಹಣ ನೀಡುವಂತೆ ಕೇಳಿದ್ರಂತೆ.


  ಸದ್ಯ ಆರೋಪಿಗಳಾದ ಸಾಹಿಲ್, ಅರ್ಬಾಜ್, ಜಾವೇದ್, ತಲೀಮ್, ಅಕ್ರಂ, ಸಲ್ಮಾನ್, ಮುಸ್ತಕೀಮ್​ ಸೇರಿದಂತೆ 8 ಮಂದಿಯನ್ನು ಬಂಧಿಸಿ, ಪೋಕ್ಸೋ ಕೇಸ್​ನಲ್ಲಿ ಜೈಲಿಗಟ್ಟಲಾಗಿದೆ.


  ದಸರಾ ಬಳಿಕ ಬುಲ್ಡೋಜರ್-2


  ಬೆಂಗಳೂರಿನಲ್ಲಿ ಆಪರೇಷನ್ ಬುಲ್ಡೋಜರ್ ಪಾರ್ಟ್ 2 ದಸರಾ ಬಳಿಕ ಶುರುವಾಗಲಿದೆ. ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್ ಆಗಿದ್ದು, ಅಕ್ಟೋಬರ್ 25ರೊಳಗೆ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ.


  ಇದನ್ನೂ ಓದಿ:  DK Shivakumar: ಭಾರತ್ ಜೋಡೋ ಯಾತ್ರೆಯಲ್ಲಿರೋ ಡಿಕೆಶಿಗೆ ED ಶಾಕ್


  ತಡೆಯಾಜ್ಞೆ ತಂದವರ ಸಮ್ಮುಖದಲ್ಲೇ ಮರು ಸರ್ವೆ ಮಾಡಲು ಸೂಚಿಸಲಾಗಿದೆ ಎಂದು ಮಹದೇವಪುರ ಮುಖ್ಯ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

  Published by:Mahmadrafik K
  First published: