• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • MLA Satish Reddy: ಶಾಸಕ ಸತೀಶ್​ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಿದ್ಯಾರು? ಎಷ್ಟು ಕೋಟಿಗೆ  ಡೀಲ್ ಕೊಟ್ಟಿದ್ರು?

MLA Satish Reddy: ಶಾಸಕ ಸತೀಶ್​ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಿದ್ಯಾರು? ಎಷ್ಟು ಕೋಟಿಗೆ  ಡೀಲ್ ಕೊಟ್ಟಿದ್ರು?

ಶಾಸಕ ಸತೀಶ್ ರೆಡ್ಡಿ

ಶಾಸಕ ಸತೀಶ್ ರೆಡ್ಡಿ

ಮೊದಲು ಎನ್​ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

  • Share this:

ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ (BJP MLA Satish Reddy) ಕೊಲೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಅಪ್ರಾಪ್ತ ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರಿಬ್ಬರು ಕಳೆದ 15 ದಿನಗಳಿಂದ ಸತೀಶ್ ರೆಡ್ಡಿ ನಿವಾಸ ಮತ್ತು ಕಚೇರಿಯ ವ್ಯಾಪ್ತಿಯಲ್ಲಿ ತಿರುಗಾಡಿಕೊಂಡಿದ್ದರು. ಇದನ್ನು ಗಮನಿಸಿದ ಸತೀಶ್ ರೆಡ್ಡಿ ಆಪ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಧನಕ್ಕೊಳಗಾಗಿರುವ ಗಿರೀಶ್ ಎಂಬಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ (Willson Garden Naga) ಸಹಚರ ಎಂಬ ಮಾಹಿತಿ ಲಭ್ಯವಾಗಿದೆ. ವಿಲ್ಸನ್ ಗಾರ್ಡನ್ ನಾಗ ತಮಿಳುನಾಡಿನಲ್ಲಿ (Tamilnadu) ತಲೆ ಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.


ಸದ್ಯ ಬಂಧಿತ ಆರು ತಿಂಗಳ ಕಾಲ್​ ರೆಕಾರ್ಡ್ ಪಡೆದುಕೊಂಡು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸುಪಾರಿ ಪಡೆದು ಕೊಲೆಯ ಬಗ್ಗೆ ಮಾತನಾಡಿರುವ ಆಡಿಯೋ ಸಹ ಲಭ್ಯವಾಗಿದೆ.


ಸುಪಾರಿ ಕೊಟ್ಟವರು ಯಾರು? ಎಷ್ಟಕ್ಕೆ ಸುಪಾರಿ ನೀಡಿದ್ದಾರೆ? ಬಂಧಿತರು ಎಲ್ಲಿಯವರು? ಹೀಗೆ ಹಲವು ಪ್ರಶ್ನೆಗಳಿಗೆ ಪೊಲೀಸರು ಉತ್ತರವನ್ನು ಹುಡುಕುತ್ತಿದ್ದಾರೆ. ಇನ್ನು ಲೀಕ್ ಆಗಿರುವ ಆಡಿಯೋದಲ್ಲಿ ಸುಪಾರಿ ಡೀಲ್ 2 ಕೋಟಿ ರೂಪಾಯಿಗೆ ನಡೆದಿತ್ತು ಎಂದು ವರದಿಯಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?


ಫೆಬ್ರವರಿ 11ರಂದು ಶಾಸಕ ಸತೀಶ್ ರೆಡ್ಡಿ ಪಿಎ ಹರೀಶ್ ಬಾಬು ಅವರಿಗೆ ಬೊಮ್ಮನಹಳ್ಳಿ ನಿವಾಸಿ ಚಂದ್ರು ಎಂಬವರು ಕರೆ ಮಾಡಿ ಶಾಸಕರ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಈ ವಿಷಯವನ್ನು ಬೈರೇಶ್ ಎಂಬಾತ ತನಗೆ ತಿಳಿಸಿದ್ದು, ಆತನಿಗೆ ಹೊಳಲ್ಕರೆಯ ಆಕಾಶ್ ತಿಳಿಸಿದ್ದ ಎಂದು ವರದಿಯಾಗಿದೆ.


ಇನ್ನು ವಿಷಯ ತಿಳಿಯುತ್ತಿದ್ದಂತೆ ಶಾಸಕರ ಪಿಎ ಹರೀಶ್ ಬಾಬು, ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಮೊದಲು ಎನ್​ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.


ಶಾಸಕ ಸತೀಶ್ ರೆಡ್ಡಿ ಹೇಳಿಕೆ


ಇನ್ನು ಈ ಬಗ್ಗೆ ಪ್ರತಿಕ್ರಿಸಿರುವ ಸತೀಶ್ ರೆಡ್ಡಿ, ರಾಜಕೀಯ ಕಾರಣಕ್ಕಾಗಿ ನನ್ನ ಕೊಲೆಗೆ ಸುಪಾರಿ ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದಿದ್ದಾರೆ.


ಕೊಲೆಯ ಸಂಚಿನ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸತೀಶ್ ರೆಡ್ಡಿ, ಮಂಗಳವಾರ ಸಂಜೆ ಪೊಲೀಸರು ನನಗೆ ಮಾಹಿತಿ ನೀಡಿದರು. ಸದ್ಯ ಚುನಾವಣೆ ಇದ್ದು, ರಾಜಕೀಯ ಕಾರಣಗಳಿಗಾಗಿ ಕೊಲೆಗೆ ಸಂಚು ರೂಪಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ:  Gali Janardhana Reddy: ಬಡ ಕುಟುಂಬದಿಂದ ಬಂದ ನಾನು ಏನು ಅನ್ನೋದನ್ನು ಈಗಾಗಲೇ ತೋರಿಸಿ ಕೊಟ್ಟಿದ್ದೇನೆ: ಜನಾರ್ದನ ರೆಡ್ಡಿ


ಮುಖ್ಯಮಂತ್ರಿಗಳು ಭದ್ರತೆ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಹೆದರಲ್ಲ ಮತ್ತು ಭದ್ರತೆಯನ್ನು ಸಹ ಪಡೆಯಲ್ಲ. ಸುಪಾರಿ ನೀಡಿರುವ ಹಣದ ಹಿಂದೆ ಅಕ್ರಮ ಸಂದಾನೆ ಇರಬಹುದು. ಆರೋಪಿಗಳು ನನ್ನ ಚಲವಲನದ ಮೇಲೆ ಗಮನ ಇರಿಸದ್ದರಂತೆ ಎಂದು ಹೇಳಿದರು.


ಇದನ್ನೂ ಓದಿ:  ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ್ದ ಪ್ರಕರಣ; ಸಿಸಿಬಿ ತನಿಖೆಗೆ ಆದೇಶಿಸಿದ ಆಯುಕ್ತ ಕಮಲ್ ಪಂಥ್


ಅಸ್ಸಾಂ ಕಾರ್ಮಿಕರ ಗೂಂಡಾಗಿರಿ!


ಮಲೆನಾಡಲ್ಲಿ ಅಸ್ಸಾಂ ಮೂಲದ ಕಾರ್ಮಿಕರ (Assam Workers) ಗೂಂಡಾಗಿರಿ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು (Mallandurm, Chikmagaluru) ಬಳಿಯ ಮಲಗಾರು ಗ್ರಾಮದಲ್ಲಿ 10ಕ್ಕೂ ಅಧಿಕ ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.


ಕೆಲಸದ ವಿಚಾರವಾಗಿ ತೋಟದ ರೈಟರ್ ಜೊತೆ ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ಬಿಡಿಸಲು ಹೋದ ಗ್ರಾಮಸ್ಥರನ್ನ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರಿಂದ ಹಲ್ಲೆ ಎಂದು ಭಜರಂಗದಳ ಅಕ್ರೋಶ ವ್ಯಕ್ತಪಡಿಸಿದ್ದು, ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Mahmadrafik K
First published: