ಬಕ್ರೀದ್ ಸ್ಪೆಷಲ್: ಈ ಬಕರಾ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿ ಬೀಳ್ತೀರಿ


Updated:August 21, 2018, 5:02 PM IST
ಬಕ್ರೀದ್ ಸ್ಪೆಷಲ್: ಈ ಬಕರಾ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿ ಬೀಳ್ತೀರಿ

Updated: August 21, 2018, 5:02 PM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ(ಆ. 21): ಪವಿತ್ರ ಬಕ್ರೀದ್ ಹಬ್ಬ ಸಮೀಸುತ್ತಿದೆ. ಈ ಸಂದರ್ಭದಲ್ಲಿ ಕುರಬಾನಿ ನೀಡುವ ಮೇಕೆ ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ. ಆದರಲ್ಲೂ ಐತಿಹಾಸಿಕ ಜಿಲ್ಲೆಯ ಈ ಗಂಡು ಮೇಕೆಯ ಬೆಲೆ ಕೇಳಿದರೆ ಎಂಥವರೂ ಹುಬ್ಬೇರಿಸುವಂತಿದೆ. ಅದರ ಬೆಲೆ ಕೇಳಿದರೆ ನೀವೂ ಕೂಡ ಅವಕ್ಕಾಗುವುದು ಗ್ಯಾರಂಟಿ. ಅದರ ಬೆಲೆ ಎಷ್ಟು ಗೊತ್ತಾ. ಬರೋಬ್ಬರಿ 2.50 ಲಕ್ಷ ರೂಪಾಯಿ. ಅರೇ ಇದೇನಿದು ಮತ್ತು ಯಾಕೆ ಇಷ್ಟೊಂದು ಬೆಲೆ ಎಂದು ತಾವು ಹುಬ್ಬೇರಿಸಬಹುದು. ಅದು ಯಾಕೆಂಬುದರ ಕುರಿತ ವಿವರ ಇಲ್ಲಿದೆ.

ಸಾಮಾನ್ಯವಾಗಿ ಒಂದು ವಾತ (ಗಂಡು ಮೇಕೆ)ದ ಬೆಲೆ ಎಂದರೆ 10 ಸಾವಿರ, 15 ಸಾವಿರ, 20 ಸಾವಿರ ಹೀಗೆ ಸಾಗುತ್ತದೆ ಧಾರಣಿ. ಆದರೆ, ಐತಿಹಾಸಿಕ ವಿಜಯಪುರ ಜಿಲ್ಲೆಯ ವಾತದ ಬೆಲೆ ಬರೋಬ್ಬರಿ 2.50 ಲಕ್ಷ ರೂಪಾಯಿ. ಇದನ್ನು 1.25 ಲಕ್ಷ ರೂಪಾಯಿವರೆಗೆ ಕೇಳಿದರೂ ಇದರ ಮಾಲಿಕ ಮಾರಾಟ ಮಾಡಿಲ್ಲ. ಇದಕ್ಕೆ ಕೇವಲ ಬಕ್ರೀದ್ ಕಾರಣ. ಬಕ್ರೀದ್ ಸಂದರ್ಭದಲ್ಲಿ ಆಡು ಕುರಿಗಳ ಮಾರಾಟ ಹೆಚ್ಚಿರುತ್ತದೆ ಎಂದರೆ ನಿಮ್ಮ ಊಹೆ ಖಂಡಿತ ತಪ್ಪು.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ. ಕೆ. ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ರಾವುಸಾಬ ದೇವಜಿ ಗೊಂದಳಿ ಇವರಿಗೆ ಆಡು 15 ತಿಂಗಳ ಹಿಂದೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಆಡುಗಳು ಜನಿಸಿದ್ದವು. ಈ ಆಡಿನ ಮೊದಲ ಮರಿ ಗಂಡಾಗಿದ್ದು, ಇದರ ಬೆಲೆ ಈಗ 2.50 ಲಕ್ಷ. ಇದರ ತಲೆ ಅಂದರೆ ಹಣೆಯ ಮೇಲೆ ಅರ್ಧ ಚಂದ್ರಾಕೃತಿಯ ಚಿತ್ರವಿರುದೇ ಈ ವಾತಕ್ಕೆ ಅಂದರೆ ಲಕ್ಷಾಂತರ ಬೆಲೆ ಬರಲು ಕಾರಣವಾಗಿದೆ.

ಮುಸ್ಲಿಮರಿಗೆ ಚಂದ್ರನ ಮೇಲೆ ಭಕ್ತಿಭಾವ ಹೆಚ್ಚಿದೆ. ಈ ಗಂಡು ಮೇಕೆಯ ಹಣೆಯ ಮೇಲೆ ಇಂಥದ್ದೆ ಬಿಳಿಯ ಚಿತ್ರವಿರುವ ಕಾರಣಕ್ಕೆ ಈ ಬೆಲೆ ಬಂದಿದೆ. ಆಸಕ್ತರು ಈ ಕುರಿಯನ್ನು 1.25 ಲಕ್ಷ ರೂಪಾಯಿಯವರೆಗೆ ಖರೀದಿ ಮಾಡಲು ಮುಂದೆ ಬಂದರೂ ಇದರ ಮಾಲಿಕ ಒಪ್ಪಿಲ್ಲ. ಬೇಕಿದ್ದರೆ 2.50 ಲಕ್ಷ ರೂಪಾಯಿ ನೀಡಿ ಖರೀದಿಸಿ. ಇಲ್ಲವಾದರೆ ಬಿಡಿ ಎಂದೇ ಹೇಳುತ್ತಿದ್ದಾರೆ ಅದರ ಮಾಲಿಕರಾದ ಗ್ರಾಮ ಪಂಚಾಯಿತಿ ಸದಸ್ಯ ರಾವುಸಾಬ ದೇವಜಿ ಗೊಂದಳಿ ಮತ್ತು ನಾಮದೇವ ಗೊಂದಳಿ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಬಿ, ಕೆ. ಗ್ರಾಮದ ಈ ಹೋಚ ಅರ್ಥಾತ್ ಗಂಡು ಮೇಕೆ ಈಗ ತನ್ನ ಹಣೆಯ ಮೇಲಿರುವ ಅರ್ಧ ಚಂದ್ರಾಕೃತಿಯಿಂದಾಗಿ ಗಮನ ಸೆಳೆದಿದ್ದು, ಯಾರು ಇದನ್ನು ಖರೀದಿಸಿ ಕುರ್ಬಾನಿ ಅಂದರೆ ಬಲಿದಾನ ಮಾಡುತ್ತಾರೋ ಕಾದು ನೋಡಬೇಕಿದೆ.
Loading...

 
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ