• Home
  • »
  • News
  • »
  • state
  • »
  • Hubballi Crime News: ದೀಪಕ್ ಪಟದಾರಿ ಕೊಲೆ ಪ್ರಕರಣ; ಮತ್ತಿಬ್ಬರ ಬಂಧನ, ಓರ್ವ ನಾಪತ್ತೆ

Hubballi Crime News: ದೀಪಕ್ ಪಟದಾರಿ ಕೊಲೆ ಪ್ರಕರಣ; ಮತ್ತಿಬ್ಬರ ಬಂಧನ, ಓರ್ವ ನಾಪತ್ತೆ

ದೀಪಕ್ ಪಟದಾರಿ

ದೀಪಕ್ ಪಟದಾರಿ

ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ನಾಗರಾಜ್ ಹೆಗ್ಗಣ್ಣವರ ನಾಪತ್ತೆಯಾಗಿದ್ದು, ಆತನ ಬಂಧನಕ್ಕೂ ಸಿಐಡಿ ಪೊಲೀಸರು ಜಾಲ ಬೀಸಿದ್ದಾರೆ.

  • Share this:

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮ ಪಂಚಾಯ್ತಿ ಸದಸ್ಯ ದೀಪಕ್ ಪಟದಾರಿ ಕೊಲೆ (Deepak Patadari Murder Case) ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಈಗಾಗಲೇ ಬಂಧಿತ ಆರು ಜನರ ವಿಚಾರಣೆ ನಡೆಸಿರುವ ಸಿಐಡಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಯಲ್ಲಪ್ಪ ಮೇಟಿ ಹಾಗೂ ರುದ್ರಪ್ಪ ಮೇಟಿ ಎಂದು ಗುರುತಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ (Mudhol, Bagalkot) ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸಿಐಡಿ ಪೊಲೀಸರು (CID Police) ಬಂಧಿಸಿ ಹುಬ್ಬಳ್ಳಿಗೆ (Hubballi) ಕರೆತಂದಿದ್ದಾರೆ. ಜುಲೈ 4 ರಂದು ಗ್ರಾಮ ಪಂಚಾಯ್ತಿ ಸದಸ್ಯ ದೀಪಕ್ ಕೊಲೆ ಪ್ರಕರಣ ನಡೆದಿತ್ತು.


ಪುಷ್ಪಾ ಎನ್ನುವ ಯುವತಿಯನ್ನು ಲವ್ ಮಾಡಿ ಮದುವೆಯಾಗಿದ್ದ ದೀಪಕ್ ಬಗ್ಗೆ ಯುವತಿಯ ಕುಟುಂಬದ ಸದಸ್ಯರು ಕಿಡಿ ಕಾರುತ್ತಿದ್ದರು. ಅದೇ ಕಾರಣಕ್ಕೆ ಮತ್ತು ರಾಜಕೀಯವಾಗಿ ಮೇಲೇರುತ್ತಿದ್ದುದನ್ನು ಸಹಿಸದೇ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಜನರ ವಿರುದ್ಧ ದೀಪಕ್ ಕುಟುಂಬದವರು ದೂರು ನೀಡಿದರೂ, ಆರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಸುಮ್ಮನಾಗಿದ್ದರು.


ಪ್ರಮುಖ ಮೂರು ಆರೋಪಿಗಳನ್ನು ಬಂಧಿಸಿಲ್ಲ ಅನ್ನೋ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸಿಐಡಿ ತನಿಖೆ ನಡೆಸುವಂತೆ ದೀಪಕ್ ಕುಟುಂಬದ ಸದಸ್ಯರು ಆಗ್ರಹಿಸಿದ್ದರು. ರಾಜ್ಯ ಸರ್ಕಾರ ಕೊನೆಗೂ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಆದರೆ ಸಿಐಡಿ ತನಿಖೆ ಆರಂಭಗೊಂಡ ನಂತರ ದೀಪಕ್ ಪತ್ನಿ ಪುಷ್ಪಾ ಆತ್ಮಹತ್ಯೆಗೆ ಶರಣಾಗಿದ್ದಳು. ನಂತರದಲ್ಲಿ ಸಿಕ್ಕ ಪುಷ್ಪಾ ಡೆತ್ ನೋಟ್ ನಲ್ಲಿಯೂ ಇತರೆ ಮೂವರು ಆರೋಪಿಗಳ ಹೆಸರು ಉಲ್ಲೇಖವಾಗಿತ್ತು.


ಮತ್ತೋರ್ವ ಆರೋಪಿ ನಾಪತ್ತೆ


ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ನಾಗರಾಜ್ ಹೆಗ್ಗಣ್ಣವರ ನಾಪತ್ತೆಯಾಗಿದ್ದು, ಆತನ ಬಂಧನಕ್ಕೂ ಸಿಐಡಿ ಪೊಲೀಸರು ಜಾಲ ಬೀಸಿದ್ದಾರೆ. ಇದರೊಂದಿಗೆ ದೀಪಕ್ ಕೊಲೆಗೆ ಸಂಬಂಧಿಸಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.


ದೀಪಕ್ ಪಟದಾರಿ


ಬಂಧನಕ್ಕೊಳಗಾಗಿರೋ ಯಲ್ಲಪ್ಪ ಹಾಗೂ ರುದ್ರಪ್ಪ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಪ್ರಕರಣ ಇದಾಗಿದೆ.


ಇದನ್ನೂ ಓದಿ:  Hubballi: ಗಂಡನ ಕೊಲೆ, ಹೆಂಡತಿಯ ಆತ್ಮಹತ್ಯೆ, ತಬ್ಬಲಿಯಾದ ಮಕ್ಕಳು; ಪ್ರೇಮಿಗಳ ದುರಂತ ಅಂತ್ಯ


ದಾಯಾದಿಗಳಿಂದ ಮಾರಾಣಾಂತಿಕ ಹಲ್ಲೆ


ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಹಳೆ ಹುಬ್ಬಳ್ಳಿಯ ಕಟಗರ ಓಣಿಯಲ್ಲಿ ನಡೆದಿದೆ. ದಾಯಾದಿಗಳಿಂದಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಉಮೇಜವುಲ್ಲಾ ಬೇಪಾರಿ ಹಾಗೂ ಆವೇಜ್ ಬೇಪಾರಿ ಎಂಬುವರಿಗೆ ಗಾಯಗಳಾಗಿವೆ. ಗಾಯಾಳು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಜವುಲ್ಲಾ ಮತ್ತು ಆವೇಜ್ ಏಳಿಗೆ ಸಹಿಸದೆ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.


ಹಳೆಯ ದ್ವೇಷ ಇಟ್ಟುಕೊಂಡು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಚಿಕ್ಕಪ್ಪನ ಮಗನಾದ ಬಾಬಾ ಸಾಧಿಕ್ ಎಂಬಾತನಿಂದ ಗುಂಪು ಕಟ್ಟಿಕೊಂಡು ಬಂದು ಕೃತ್ಯ ನಡೆದಿದೆ ಎನ್ನಲಾಗಿದೆ.


ಗಾಯಾಳು ಉಮೇಜವುಲ್ಲಾ ಗೂಡ್ಸ್ ವಾಹನ ಹಾಗೂ ಕಾರನ್ನು ಬಾಡಿಗೆಯಂತೆ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಇವರ ಬೆಳವಣಿಗೆ ಸಹಿಸದೇ ಚಿಕ್ಕಪನ ಮಗ ಬಾಬಾ ಸಾದಿಕ್ ಸಹಚರರೊಂದಿಗೆ ಸೇರಿ ಉರ್ದು ಸ್ಕೂಲ್ ಹತ್ತಿರ ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ:  Hubballi: ಗ್ರಾ.ಪಂ​ ಸದಸ್ಯನ ಪತ್ನಿ ಆತ್ಮಹತ್ಯೆಗೆ ಟ್ವಿಸ್ಟ್; ಪುಷ್ಪಾ ಡೆತ್ ನೋಟ್​ನಲ್ಲಿ ಏನಿದೆ?


ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


ಈ ವೇಳೆ ಕೈ, ಕಾಲುಗಳಿಗೆ ತಲ್ವಾರ್ ಏಟು ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಗರದ ಬಾಬಾ ಸಾಧಿಕ ಬೇಪಾರಿ, ಜುನೇದ್ ಮುಲ್ಲಾ, ದಾದಾಪೀರ, ಛೋಟಾ ಸಾದಿಕ್, ಕಟಗ ಇಮ್ರಾನ್, ಅಫ್ತಾಬ್ ಮುಲ್ಲಾ, ಇಜಾಜ್, ರಾಜೇಸಾಬ್, ದತ್ತಾ ಸೋಳಂಕಿ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಕುರಿತು ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:Mahmadrafik K
First published: