ಸಚಿವ ಶ್ರೀರಾಮುಲು ಅವರೇ ಸೂಪರ್​ ಸಿಎಂ ವಿಜಯೇಂದ್ರ ಸೇವೆ ಮಾಡಿಕೊಂಡಿರಿ; ಟ್ವಿಟರ್​ನಲ್ಲಿ ಕಾಲೆಳೆದ ಕಾಂಗ್ರೆಸ್​!

ಅವಕಾಶ ಸಿಕ್ಕರೆ ಸೂಪರ್ ಸಿಎಂ ವಿಜಯೇಂದ್ರ ಅವರನ್ನು ಡೆಪ್ಯುಟಿ ಸಿಎಂ ಮಾಡಬಲ್ಲರೇ ಹೊರತು ನಿಮ್ಮನ್ನು ಮಾಡುವುದಿಲ್ಲ!. ಇದೆಲ್ಲ ಬಿಟ್ಟು ಹಿಂದುಳಿದ ವರ್ಗಗಳ ನಿಗಮಗಳಿಗೆ ಬಜೆಟ್‌ನಲ್ಲಿ ತೀವ್ರ ಅನ್ಯಾಯವಾಗಿದೆ, ಅದರ ಬಗ್ಗೆ ಧ್ವನಿ ಎತ್ತಿ ಎಂದು ಕಾಂಗ್ರೆಸ್​ ಸಚಿವ ರಾಮುಲುಗೆ ಕಿವಿಮಾತು ಹೇಳಿದೆ.

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ 
 ಸಿದ್ದರಾಮಯ್ಯ.

ಸಚಿವ ಶ್ರೀರಾಮುಲು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ.

 • Share this:
  ಬೆಂಗಳೂರು (ಏಪ್ರಿಲ್ 05); ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವಲ್ಲಿ ಸಿಎಂ ಬಿ.ಎಸ್​. ಯಡಿಯೂರಪ್ಪನವರಷ್ಟೇ ಸಚಿವ ಬಿ. ಶ್ರೀರಾಮುಲು ಅವರ ಪಾತ್ರವೂ ಇತ್ತು. ಅಲ್ಲದೆ, ಕಳೆದ ಒಂದು ದಶಕದಿಂದ ರಾಜ್ಯದ ರಾಜಕೀಯ ಮತ್ತು ಬಿಜೆಪಿಯಲ್ಲಿ ಶ್ರೀರಾಮುಲು ಹಾಗೂ ರೆಡ್ಡಿ ಬ್ರದರ್ಸ್​ ಪ್ರಭಾವ ಎಂತಾದ್ದು ಎಂಬುದು ಸಾಮಾನ್ಯವಾಗಿ ರಾಜ್ಯದ ಜನತೆಗೆ ತಿಳಿದಿರುವಂತಾದ್ದೆ. ಇದೇ ಕಾರಣಕ್ಕೆ ಈ ಬಾರಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದರೆ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಆದರೆ, ರಾಮುಲುಗೆ ಈವರೆಗೆ ಡಿಸಿಎಂ ಸ್ಥಾನ ಒಲಿದುಬಂದಿಲ್ಲ. ಈ ಸಂಬಂಧ ಸಿಎಂಗೆ ರಾಮುಲು ಪತ್ರ ಬರೆದಿದ್ದರೂ ಯಾವುದೇ ಲಾಭವಾಗಿಲ್ಲ. ಈ ವಿಚಾರವನ್ನು ಕಾಂಗ್ರೆಸ್​ ಇಂದು ಮತ್ತೆ ಟ್ವಿಟರ್​ನಲ್ಲಿ ಕೆದಕುವ ಮೂಲಕ ಕುಹಕವಾಡಿದೆ.  ಈ ಸಂಬಂಧ ಎರಡು ಟ್ವೀಟ್ ಮಾಡಿರುವ ಕಾಂಗ್ರೆಸ್​, ಸಚಿವ ಶ್ರೀರಾಮುಲು ಅವರೇ, ನನ್ನನ್ನು ಡಿಸಿಎಂ ಮಾಡು ಎಂದು ದೇವರಿಗೆ ಲೆಟರ್ ಬರೆದಿದ್ದು ನೀವೇ ಅಲ್ಲವೇ? ಹಿಂದುಳಿದ ವರ್ಗದವನು ಎಂದು ನನ್ನನ್ನು ಬಿಜೆಪಿಯವರೇ ಸೋಲಿಸಿದರು ಎಂದು ಹೇಳಿದ್ದು ನೀವೇ ಅಲ್ಲವೇ? ದೇವರಿಗೆ ಅಷ್ಟೇ ಅಲ್ಲ ಮೋದಿಯವರಿಗೆ ಲೆಟರ್ ಬರೆದರೂ ನಿಮ್ಮನ್ನು ಡಿಸಿಎಂ ಮಾಡುವುದಿಲ್ಲ ಕರ್ನಾಟಕದ ಬಿಜೆಪಿ ಪಕ್ಷ" ಎಂದು ಕುಹಕವಾಡಿದೆ.  ಮತ್ತೊಂದು ಟ್ವೀಟ್​ನಲ್ಲಿ ಬಿ.ವೈ ವಿಜಯೇಂದ್ರ ಅವರನ್ನೂ ಕೆಣಕಿರುವ ಕಾಂಗ್ರೆಸ್​, "ಅವಕಾಶ ಸಿಕ್ಕರೆ ಸೂಪರ್ ಸಿಎಂ ವಿಜಯೇಂದ್ರ ಅವರನ್ನು ಡೆಪ್ಯುಟಿ ಸಿಎಂ ಮಾಡಬಲ್ಲರೇ ಹೊರತು ನಿಮ್ಮನ್ನು ಮಾಡುವುದಿಲ್ಲ!. ಇದೆಲ್ಲ ಬಿಟ್ಟು ಹಿಂದುಳಿದ ವರ್ಗಗಳ ನಿಗಮಗಳಿಗೆ ಬಜೆಟ್‌ನಲ್ಲಿ ತೀವ್ರ ಅನ್ಯಾಯವಾಗಿದೆ, ಅದರ ಬಗ್ಗೆ ಧ್ವನಿ ಎತ್ತಿ. ಇಲ್ಲವಾದಲ್ಲಿ ಸಿಎಂ ಪುತ್ರನ ಸೇವೆ ಮಾಡಿಕೊಂಡಿರಿ, ಅವರು ಬೆಳೆಯುತ್ತಾರೆ, ನೀವು ಅಳಿಯುತ್ತೀರಿ!" ಎಂದು ವ್ಯಂಗ್ಯವಾಡಿದ್ದಾರೆ.  ಇದಕ್ಕೆ ಟ್ವಿಟರ್​ನಲ್ಲೇ ತಕ್ಕ ಉತ್ತರ ನೀಡಿರುವ ಶ್ರೀರಾಮುಲು, "ಅಧಿಕಾರ ಸಿಕ್ಕಾಗ ಸಮರ್ಥ ಆಡಳಿತ ಕೊಟ್ಟಿದ್ದಿದ್ದರೆ, ಇವತ್ತು ಡಿಸಿಎಂ ನಾನೋ ಮತ್ತೊಬ್ಬರೋ ಎಂದು ಅವರಿವರ ವಿರುದ್ಧ ಎತ್ತಿಕಟ್ಟುವ ಇಂಥ ದುರ್ಗತಿ ಕಾಂಗ್ರೆಸ್​ಗೆ ಬರುತ್ತಿರಲಿಲ್ಲ. ಇದರಿಂದ ನಮ್ಮ ಒಗ್ಗಟ್ಟು ಒಡೆಯಬಹುದು ಎಂದುಕೊಂಡಿದ್ದರೆ, ನಿಮ್ಮ ರಾಹುಲ್ ಗಾಂಧಿಯಷ್ಟೇ ಪಕ್ಷದ ಬುದ್ಧಿಮತ್ತೆಯೂ ಇದೆ ಎಂದು ತಿಳಿಯುತ್ತದೆ. Better luck next time!" ಎಂದು ಕಿಡಿಕಾರಿದ್ದಾರೆ.  ಮತ್ತೊಂದು ಟ್ವೀಟ್​ನಲ್ಲಿ ಕಾಂಗ್ರೆಸ್​ದ್ದು ಧೃತರಾಷ್ಟ್ರ ಪ್ರೇಮ.‌ ವಿಪಕ್ಷದಲ್ಲಿ ಕುಂತಾಗ ಹಿಂದುಳಿದ ವರ್ಗದ ಬಗ್ಗೆ ಅದೇನು ಪ್ರೀತಿ-ಕಾಳಜಿ? ಅಧಿಕಾರ ಇದ್ದಾಗ ಮಾಡುವ ಕೆಲಸ ಮಾಡಿದ್ದಿದ್ದರೆ ಇವತ್ತು ಜನರು ಮೂಲೆಗೆ ಕೂರಿಸುತ್ತಿದ್ದರೆ?
  ಸರ್ವಾಧಿಕಾರ ಕಳೆದುಕೊಂಡ ಮೇಲೆ‌ ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ನಿಮ್ಮ ಪಕ್ಷಕ್ಕೆ ಜನರಿಗಿಂತ ವೈದ್ಯರ ಅವಶ್ಯಕತೆ ತುಂಬ ಇದೆ." ಎಂದು ಕಿವಿಮಾತು ಹೇಳಿದ್ದಾರೆ.
  Published by:MAshok Kumar
  First published: