• Home
  • »
  • News
  • »
  • state
  • »
  • Girl Death Case: ಬೆಳಗಾವಿಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್; ಪೊಲೀಸರಿಂದ ತನಿಖೆ ಚುರುಕು

Girl Death Case: ಬೆಳಗಾವಿಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್; ಪೊಲೀಸರಿಂದ ತನಿಖೆ ಚುರುಕು

ಮೃತ ಯುವತಿ

ಮೃತ ಯುವತಿ

ಅಕ್ಟೋಬರ್ 11ರ ರಾತ್ರಿ ಬೆಂಗಳೂರಿಂದ ಬೆಳಗಾವಿಗೆ ತಬಸ್ಸುಮ್‌ಳನ್ನು ಕರೆದುಕೊಂಡು ಬಂದಿದ್ದ ಸ್ನೇಹಿತ. ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೊಲೀಸ್ ಕೇಸ್ ಆಗುತ್ತೆ ಅಂತ ತಿಳಿದು ಎಸ್ಕೇಪ್ ಆಗಿದ್ದಾನೆ.

  • News18 Kannada
  • Last Updated :
  • Karnataka, India
  • Share this:

ಬೆಳಗಾವಿ (ಅ.14): ಬೆಳಗಾವಿಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವು (Girl Death) ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ತಬ್ಬಸುಮ‌್‌ (Tabbasum) ಎಂಬಾಕೆಯನ್ನು ಜಿಲ್ಲಾಸ್ಪತ್ರೆಗೆ (District Hospital) ದಾಖಲಿಸಿದ್ದು ಅಪರಿಚಿತ ಅಲ್ಲ ಬದಲಿಗೆ ಆಕೆಯ ಸ್ನೇಹಿತ ಎಂಬ ಅಂಶ ಬೆಳಕಿಗೆ ಬಂದಿದೆ. ತಲೆಗೆ ಬಿದ್ದ ಗಾಯಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟ ಯುವತಿಯನ್ನು ಸ್ನೇಹಿತ (Friend) ದಾಖಲು ಮಾಡಿದ್ದಾನೆ. ಗಗನಸಖಿ ಆಗುವ ಕನಸು ಹೊತ್ತಿದ್ದ 19 ವರ್ಷದ ಯುವತಿ ಕಥೆ ದಾರುಣ ಅಂತ್ಯವಾಗಿದ್ದು, ಪೊಲೀಸ್ ತನಿಖೆ (Police Investigation) ಚುರುಕುಗೊಂಡಿದೆ. ಬೆಂಗಳೂರಿನ ಕಾಲ್‌ಸೆಂಟರ್‌‌ನಲ್ಲಿ ಕಳೆದ ತಿಂಗಳು ಕೆಲಸಕ್ಕೆ ಸೇರಿದ್ದ ತಬಸ್ಸುಮ್ ಅಕ್ಟೋಬರ್ 6ರಂದು ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. ಆದ್ರೆ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ.


ತಬಸ್ಸುಮ್ ತಲೆಗೆ ಬಲವಾದ ಪೆಟ್ಟು


ಅಕ್ಟೋಬರ್ 7ರಂದು ಗೋವಾದಲ್ಲಿ ಕೆಲಸ ಮಾಡ್ತಿದ್ದ ಸ್ನೇಹಿತ‌ನ ಭೇಟಿಗೆ ತೆರಳಿದ್ದ ತಬಸ್ಸುಮ ತೆರಳಿದ್ದಳು. ಅಲ್ಲಿಯೇ ತಬಸ್ಸುಮ್‌ಗೆ ಅನಾರೋಗ್ಯ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ಚೆಕ್ ಅಪ್ ಮಾಡಿಸಿದ್ದಳು. ಬಳಿಕ ತಬಸ್ಸುಮ್‌ಳನ್ನು ಬೆಂಗಳೂರಿಗೆ ಕಳಿಸಲು ನಿರ್ಧರಿಸಿದ್ದ ಆಕೆಯ ಸ್ನೇಹಿತ, ಅಕ್ಟೋಬರ್ 9ರಂದು ಪಣಜಿ ಬಸ್ ನಿಲ್ದಾಣದಲ್ಲಿ ಹೇಗೋ ಬಿದ್ದು ತಬಸ್ಸುಮ್ ತಲೆಗೆ ಬಲವಾದ ಗಾಯ ಆಗಿದೆ ಎನ್ನಲಾಗಿದೆ. ಬಳಿಕ ಪಣಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದ ತಬಸ್ಸುಮ್, ಅಲ್ಲಿ ಚಿಕಿತ್ಸೆ ಪಡೆದು ಅಕ್ಟೋಬರ್ 11 ರಂದು ಬೆಂಗಳೂರಿಗೆ ಬಂದಿದ್ದ ತಬಸ್ಸುಮ್, ಆಕೆಯ ಸ್ನೇಹಿತ. ಬಳಿಕ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದಳು.


ಇದನ್ನೂ ಓದಿ: Heavy Rain: ಮುಂದಿನ 3 ಗಂಟೆಗಳ ಕಾಲ ಭಾರೀ ಮಳೆ; ಇನ್ನೂ 5 ದಿನ ನಿಲ್ಲೋದಿಲ್ಲ ವರುಣ ಆರ್ಭಟ!


ಆಸ್ಪತ್ರೆಗೆ ದಾಖಲಿಸಿ ಸ್ನೇಹಿತ ಎಸ್ಕೇಪ್​


ಅಕ್ಟೋಬರ್ 11 ರಂದು ಬೆಂಗಳೂರಿಗೆ ಬಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ, ಅಕ್ಟೋಬರ್ 11ರ ರಾತ್ರಿ ಬೆಂಗಳೂರಿಂದ ಬೆಳಗಾವಿಗೆ ತಬಸ್ಸುಮ್‌ಳನ್ನು ಕರೆದುಕೊಂಡು ಬಂದಿದ್ದ ಸ್ನೇಹಿತ. ಬೆಳಗಾವಿಗೆ ಬಂದು ತಬಸ್ಸುಮ್ ಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಆಕೆಯ ಸ್ನೇಹಿತ. ಆದ್ರೆ ಯಾವಾಗ ಪೊಲೀಸ್ ಕೇಸ್ ಆಗುತ್ತೆ ಅಂತಾ ಗೊತ್ತಾಗುತ್ತೋ ಈ ವೇಳೆ ಎಸ್ಕೇಪ್ ಆಗಿದ್ದಾನೆ.


ತಬಸ್ಸುಮ್ ಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಆಕೆಯ ಮೊಬೈಲ್ ಸಿಮ್ ಜೊತೆ ಗೋವಾಗೆ ಮರಳಿದ್ದ ಸ್ನೇಹಿತ. ವಿಷಯ ತಿಳಿದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದ ತಬಸ್ಸುಮ್ ಕುಟುಂಬಸ್ಥರು. ತಲೆಗೆ ಬಲವಾದ ಪೆಟ್ಟು ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನೆ. ಅದೇ ದಿನ ರಾತ್ರಿ ತಬಸ್ಸುಮ್ ನಂಬರ್‌ನಿಂದ ಅವಳ ತಾಯಿಗೆ ವಾಟ್ಸಪ್ ಮೆಸೇಜ್ ಕಳಿಸಿದ್ದ ಸ್ನೇಹಿತ, ತಬಸ್ಸುಮ್ ಮೊಬೈಲ್‌ ನಂಬರ್‌ನಿಂದಲೇ ತಬಸ್ಸುಮ್ ತಾಯಿಗೆ ವಾಟ್ಸಪ್ ಮೆಸೇಜ್ ಮಾಡಿದ್ದ ಸ್ನೇಹಿತ.


ಇದನ್ನೂ ಓದಿ: Brahmanda Guruji: ಕರ್ನಾಟಕ ಮೂರು ಭಾಗವಾಗುತ್ತೆ, ದೇಶ ಇಬ್ಭಾಗವಾಗುತ್ತೆ! ಭಯಾನಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ


ಸ್ನೇಹಿತನ ವಶಕ್ಕೆ ಪಡೆದು ಪೊಲೀಸರ ತನಿಖೆ


ತಬಸ್ಸುಮ್ ಳನ್ನು ಬಸ್‌ನಿಂದ ಇಳಿಸುವ ವೇಳೆ ಅವಳ ಮೊಬೈಲ್ ಒಡೆದು ಹೋಗಿದೆ. ನಿಮ್ಮ ನಂಬರ್ ನನ್ನ ಬಳಿ ಇರಲಿಲ್ಲ ಹಾಗಾಗಿ ತಬಸ್ಸುಮ್ ಸಿಮ್ ನನ್ನ ಮೊಬೈಲ್‌ನಲ್ಲಿ ಹಾಕಿದ್ದೇನೆ. ತಬಸ್ಸುಮ್ ಫೋನ್ ಅವಳ ಚಿಕ್ಕ ಬ್ಯಾಗ್‌ನಲ್ಲಿದೆ. ಪೊಲೀಸ್ ಕಂಪ್ಲೆಂಟ್ ಆಗುತ್ತೆ ಎಂದು ಮರಳಿ ಬಂದೆ. ನಾನು ಅವರ ಸಿಮ್ ಮುರಿದು ಹಾಕ್ತೀದಿನಿ ಬೇರೆದು ತಗೆದುಕೊಂಡು ಬಿಡಿ ನನಗೆ ತೊಂದರೆ ಕೊಡಬೇಡಿ ಎಂದು ವಾಟ್ಸಪ್ ಮೆಸೇಜ್, ಇತ್ತ ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ತಬಸ್ಸುಮ್, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲು ಮಾಡಿದ್ದ ಕುಟುಂಬಸ್ಥರು. ಗೋವಾಗೆ ತೆರಳಿ ತಬಸ್ಸುಮ್ ಸ್ನೇಹಿತನ ವಶಕ್ಕೆ ಪಡೆದು ಬೆಳಗಾವಿಗೆ ಕರೆತಂದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು. ಶೀಘ್ರದಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟತೆ ಹೊರ ಬರೋ ಸಾಧ್ಯತೆ ಇದೆ

Published by:ಪಾವನ ಎಚ್ ಎಸ್
First published: