TungaBhadra Dam: 40 ವರ್ಷಗಳ ನಂತರ ಡಿಸೆಂಬರ್ ನಲ್ಲಿ ಭರ್ತಿಯಾದ ಜಲಾಶಯ: ಯಾವ ರಾಜ್ಯಕ್ಕೆ ಎಷ್ಟು ನೀರು ಹಂಚಿಕೆ?

ಕಳೆದ 40 ವರ್ಷಗಳ ನಂತರ ಈ ಅವಧಿಯಲ್ಲಿ ತುಂಗಭದ್ರಾ ಜಲಾಶಯವು (TungaBhadra Dam) ಭರ್ತಿಯಾಗಿದೆ. ಇದರಿಂದಾಗಿ ಬೇಸಿಗೆ ಬೆಳೆಗೆ ಸಮರ್ಪಕ ನೀರು ಬಿಡಲು ಇಂದು ಮುನಿರಾಬಾದಿನಲ್ಲಿ ನಡೆದ ತುಂಗಭ.ದ್ರಾ ನೀರಾವರಿ ನಿರ್ವಹಣಾ ಸಲಹ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಟಿಬಿ ಡ್ಯಾಂ

ಟಿಬಿ ಡ್ಯಾಂ

  • Share this:
ಕೊಪ್ಪಳ: ಕಳೆದ 40 ವರ್ಷಗಳ ನಂತರ ಈ ಅವಧಿಯಲ್ಲಿ ತುಂಗಭದ್ರಾ ಜಲಾಶಯವು (TungaBhadra Dam) ಭರ್ತಿಯಾಗಿದೆ. ಇದರಿಂದಾಗಿ ಬೇಸಿಗೆ ಬೆಳೆಗೆ ಸಮರ್ಪಕ ನೀರು ಬಿಡಲು ಇಂದು ಮುನಿರಾಬಾದಿನಲ್ಲಿ ನಡೆದ ತುಂಗಭದ್ರಾ ನೀರಾವರಿ ನಿರ್ವಹಣಾ ಸಲಹ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಚಿವ ಆನಂದ್ ಸಿಂಗ್ (Minister Anand Singh) ಅಧ್ಯಕ್ಷತೆಯಲ್ಲಿ ಕೊಪ್ಪಳ, ವಿಜಯನಗರ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಜಲಾಶಯದಲ್ಲಿ ಈಗ ನೀರಾವರಿಗಾಗಿ 86 ಟಿಎಂಸಿ ನೀರು ಲಭ್ಯವಿದೆ. ಈ ಕಾರಣಕ್ಕಾಗಿ ತುಂಗಭದ್ರಾ ಎಡದಂಡೆ ನಾಲೆಗೆ ಎಪ್ರಿಲ್ 10 ರವರೆಗೂ 4000 ಕ್ಯೂಸೆಕ್, ತುಂಗಭದ್ರಾ ಬಲದಂಡೆ ನಾಲೆಯ ವ್ಯಾಪ್ತಿಯಲ್ಲಿ ಈ ಮೊದಲು ಎಪ್ರಿಲ್ ಅಂತ್ಯದವರೆಗೂ ಇತ್ತು. ಆದರೆ ಈ ಬಾರಿ ನೀರು ಲಭ್ಯವಿರುವ ಹಿನ್ನೆಲೆಯಲ್ಲಿ ಮಾರ್ಚ್  ಅಂತ್ಯದವರೆಗೂ ನೀಡಲು ರೈತರು ಆಗ್ರಹಿಸಿದ್ದಾರೆ.

ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ನಂತರ ತೀರ್ಮಾನಿಸಲಾಯಿತು. ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಕಾಲುವೆ ಎಪ್ರಿಲ್ 10 ರವರೆಗೂ. ರಾಯ ಮತ್ತು ಬಸವಣ್ಣ ಕಾಲುವೆಗೆ ಬಚಾವತ್ ಆಯೋಗದ ತೀರ್ಮಾನದಂತೆ ನೀರು ಬಿಡಲು ತೀರ್ಮಾನಿಸಲಾಗಿದೆ.ಈ ಮಧ್ಯೆ ತುಂಗಭದ್ರಾ ಐಸಿಸಿ ಸಭೆಗೆ ರೈತ ಪ್ರತಿನಿಧಿಗಳನ್ನು ಕರೆಯಬೇಕೆಂದು ಸಚಿವ ಆನಂದ್ ಸಿಂಗ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದನ್ನೂ ಓದಿ:  Goa- Karnataka: ಗೋವಾ-ಕರ್ನಾಟಕಗೂ ನಂಟು ಇರುವ ಕೋಟಿ ತೀರ್ಥ ಕಲ್ಯಾಣಿಯ ವಿಶೇಷತೆ ಬಗ್ಗೆ ಗೊತ್ತೇ?

ಕೊನೆಯ ಭಾಗದ ರೈತರ ಭೂಮಿಗೆ ನೀರು ನೀಡಲು ಆಗ್ರಹ

ಇದು ರೈತರಿಗಾಗಿ ಕರೆದಿರುವ ಸಭೆ, ಈ ಸಭೆಗೆ ರೈತರನ್ನೆ ಕರೆಯದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ರಾಯಚೂರು ಜಿಲ್ಲೆಯ ಮಾನವಿ ಹಾಗೂ ರಾಯಚೂರು ಗ್ರಾಮೀಣ ಶಾಸಕರು ಎಡದಂಡೆ ನಾಲೆಯ ಕೊನೆಯ ಭಾಗದ ರೈತರ ಭೂಮಿಗೆ ನೀರು ನೀಡಲು ಆಗ್ರಹಿಸಿದರು.

ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪಿಸುವ ಬಗ್ಗೆ ಈಗಾಗಲೇ ಸರಕಾರ ತೆಗೆದುಕೊಂಡು ಕ್ರಮದಿಂದ ಈ ಬಾರಿ ಕೊನೆಯ ಭಾಗಕ್ಕೆ ನೀರು ತಲುಪಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ನೀರಾವರಿ ಹಾಗೂ ಕೊನೆಯ ಭಾಗಕ್ಕೆ ನೀರು ತಲುಪಿಸಲು ವಿಭಾಗ ಮಟ್ಟದ ಅಧಿಕಾರಿಗಳಾದ ವಿಭಾಗಾಧಿಕಾರಿ ಮತ್ತು ಐಜಿಯವರಿಗೆ ವಹಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  Wife Murder: ವೋಟ್ ಮಾಡಲು ಬಂದಿದ್ದಾಕೆಯನ್ನು ಕೊಚ್ಚಿ ಕೊಲೆಗೈದ 2ನೇ ಗಂಡ.. ಕಾರಣವೇನು?

9 ಟಿಎಂಸಿ ನೀರಿನ ಬಳಕೆ ಬಗ್ಗೆ ಗೊಂದಲ

ಇದೇ ಸಭೆ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪಾವಗಡಕ್ಕೆ 2.83 ಟಿಎಂಸಿ ನೀರು ಕುಡಿಯುವ ನೀರು, ಬಹದ್ದೂರು ಬಂಡಿ ಅಳವಂಡಿ ಬೆಟಗೇರಿ ಏತ ನೀರಾವರಿ ಆರಂಭವಾಗಿಲ್ಲ. ಹೀಗೆ ಒಟ್ಟು 9 ಟಿಎಂಸಿ ನೀರು ಬಳಕೆಯಾಗದ ಹಿನ್ನೆಲೆಯಲ್ಲಿ ಈ ನೀರು ಯಾವ ರಾಜ್ಯದವರು ಬಳಕೆ ಮಾಡಬೇಕು ಎಂಬ ಕುರಿತು ಮುಖ್ಯಮಂತ್ರಿಗಳೊಂದಿಗೆ ,  ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಆನಂದ್ ಸಿಂಗ್ ಹೇಳಿದರು.

ಬಳಕೆಗೆ 86.118 ಟಿಎಂಸಿ ನೀರು

ಜಲಾಶಯದಲ್ಲಿ ಈಗ 96 ಟಿಎಂಸಿ ನೀರು ಇದೆ, ಇದರಲ್ಲಿ ಈಗ ಬಳಕೆ ಮಾಡಲು 86.118 ಟಿಎಂಸಿ ನೀರು ಮಾತ್ರ ಎಂದು ಅಂದಾಜಿಸಲಾಗಿದೆ, ಇದರಿಂದ 9 ಟಿಎಂಸಿ ನೀರು ಬಳಕೆಯಾಗದೆ ಇರುವುದರಿಂದ ನೀರಿನ ಲೆಕ್ಕಚಾರದಿಂದ ಹೊರಗಿಡಲಾಗಿದೆ.

ಯಾವ ರಾಜ್ಯಕ್ಕೆ ಎಷ್ಟು ನೀರು ಹಂಚಿಕೆ?

86.118 ಟಿಎಂಸಿಯಲ್ಲಿ 54.441 ಟಿಎಂಸಿ ಕರ್ನಾಟಕ, 25.535 ಟಿಎಂಸಿ ಆಂಧ್ರಪ್ರದೇಶ ಹಾಗೂ 6.142 ತೆಲಂಗಾಣಕ್ಕೆ ಹಂಚಿಕೆ ಮಾಡಲಾಗಿದೆ, ಇದರಿಂದಾಗಿ 9 ಟಿಎಂಸಿ ನೀರು ಹಂಚಿಕೆಯಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ, ಈ ಸಭೆಯಲ್ಲಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಸಚಿವ ಹಾಲಪ್ಪ ಆಚಾರ, ಸಂಸದರಾದ ಸಂಗಣ್ಣ ಕರಡಿ, ದೇವೆಂದ್ರಪ್ಪ. ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಸೇರಿ ನಾಲ್ಕು ಜಿಲ್ಲೆಯ ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.
Published by:Mahmadrafik K
First published: