• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Tumakuru: 'ಎದುರಾಳಿಗೆ ಹೃದಯಾಘಾತ ಆಗಲಿ' -ಮಾಜಿ ಬಿಜೆಪಿ ಶಾಸಕರ ಸಾವು ಬಯಸಿದ್ರಾ ಜೆಡಿಎಸ್​​ ಮುಖಂಡ?

Tumakuru: 'ಎದುರಾಳಿಗೆ ಹೃದಯಾಘಾತ ಆಗಲಿ' -ಮಾಜಿ ಬಿಜೆಪಿ ಶಾಸಕರ ಸಾವು ಬಯಸಿದ್ರಾ ಜೆಡಿಎಸ್​​ ಮುಖಂಡ?

ತುಮಕೂರು ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್

ತುಮಕೂರು ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್

ನನ್ನ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಜನಸಂಖ್ಯೆಯನ್ನೇ ನೋಡಿರಲಿಲ್ಲ. ಸುರೇಶ್ ಗೌಡರೇ ನೀವು ಲೋಕಸಭಾ ಚುನಾವಣೆ ವೇಳೆ ಲಘುವಾಗಿ ಮಾತನಾಡಿದ್ದರು. ಇಡೀ ತುಮಕೂರು ಜಿಲ್ಲೆಯಲ್ಲಿ ಹನ್ನೊಂದಕ್ಕೆ ಹನ್ನೊಂದು ಕ್ಷೇತ್ರವನ್ನ ನಾವು ಗೆಲ್ಲುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Tumkur, India
 • Share this:

ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹತ್ತಿರವಾಗುತ್ತಿದ್ದಂತೆ ಕ್ಷೇತ್ರಗಳು ರಾಜಕೀಯ ರಣರಂಗಗಳಾಗಿ ಮಾರ್ಪಡಾಗುತ್ತಿವೆ. ಎದುರಾಳಿ ಅಭ್ಯರ್ಥಿಗಳ (Candidates) ವಿರುದ್ಧ ಎಲ್ಲಾ ಪಕ್ಷಗಳು ನಾಯಕರು (Leaders) ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಕ್ಷೇತ್ರಕ್ಕೆ ತಾವು ಜನಪ್ರತಿನಿಧಿಯಾದರೆ ಏನೆಲ್ಲಾ ಮಾಡುತ್ತೇವೆ ಎಂದು ಹೇಳುವ ಬದಲು ಎದುರಾಳಿಯ ತೇಜೋವಧೆ ಮಾಡುವ ಹೇಳಿಕೆಗಳು ಹೆಚ್ಚಾಗುತ್ತಿದೆ. ಕೆಲ ನಾಯಕರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಎದುರಾಳಿಯ ವಿರುದ್ಧ ಏಕವಚನದಲ್ಲೇ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇದರ ನಡುವೆಯೇ ಇಂತಹದ್ದೆ ಹೇಳಿಕೆಯೊಂದನ್ನು ತುಮಕೂರಿನ ಜೆಡಿಎಸ್ (JDS)​ ಮುಖಂಡ ಹಿರೇಹಳ್ಳಿ ಮಹೇಶ್​ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಬರದಲ್ಲಿ, ತಮ್ಮ ಎದುರಾಳಿ ಮಾಜಿ ಶಾಸಕ ಸುರೇಶ್​ ಗೌಡ (Suresh Gowda) ಅವರ ಸಾವನ್ನು ಬಯಸಿದರಾ ಎಂಬ ಪ್ರಶ್ನೆ ಎದುರಾಗಿದೆ.


ಜೆಡಿಎಸ್​ ಮುಖಂಡ ಹೇಳಿದ್ದೇನು?


ತುಮಕೂರಿನ ಬಳ್ಳಗೆರೆಯಲ್ಲಿ ಜೆಡಿಎಸ್ ಯಾತ್ರೆಯಲ್ಲಿ ಜೆಡಿಎಸ್​ ಮುಖಂಡ ಹಿರೇಹಳ್ಳಿ ಮಹೇಶ್ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ್ದರು. ಇಂದು ಸೇರಿದ ಜನಸ್ತೋಮ ನೋಡಿ ಎದುರಾಳಿಗೆ ಹೃದಯಾಘಾತ ಆಗಬೇಕು. ಜನರ ಜೈಕಾರ ಕೇಳಿ ವಿರೋಧ ಪಕ್ಷದವರಿಗೆ ಹೃದಯಾಘಾತ ಆಗಬೇಕು ಎಂದು ರೋಷಾವೇಶದಿಂದ ಭಾಷಣ ಮಾಡಿದ್ದರು. ಈ ವೇಳೆ ಶಾಸಕ ಗೌರಿಶಂಕರ, ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವೇದಿಕೆಯಲ್ಲಿ ಹಾಜರಿದ್ದರು.


ಇದನ್ನೂ ಓದಿ: Karnataka Elections 2023: ಸಿದ್ದರಾಮಯ್ಯ ಹಿಂದೆ ಸರಿದರೆ ಯಾರಾಗುತ್ತಾರೆ ಕೋಲಾರ 'ಕೈ' ಅಭ್ಯರ್ಥಿ? ಮತ್ತೆ ಶುರುವಾಯ್ತಾ ಬಣ ಬಡಿದಾಟ?


ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್​ಗೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಪ್ರಬಲ ಎದುರಾಳಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಮುಖಂಡ ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್ ಗೌಡರ ಸಾವು ಬಯಸಿದ್ರಾ ಎಂಬ ಮಾತು ಕೇಳಿ ಬಂದಿದೆ.
ಬಿಜೆಪಿಯವರು ಉರಿಗೌಡ, ನಂಜೇಗೌಡರ ಕಥೆ ಹೇಳುತ್ತಿದ್ದಾರೆ


ಇದಕ್ಕೂ ಮುನ್ನ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನನ್ನ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಜನಸಂಖ್ಯೆಯನ್ನೇ ನೋಡಿರಲಿಲ್ಲ. ಸುರೇಶ್ ಗೌಡರೇ ನೀವು ಲೋಕಸಭಾ ಚುನಾವಣೆ ವೇಳೆ ಲಘುವಾಗಿ ಮಾತನಾಡಿದ್ದರು. ಇಡೀ ತುಮಕೂರು ಜಿಲ್ಲೆಯಲ್ಲಿ ಹನ್ನೊಂದಕ್ಕೆ ಹನ್ನೊಂದು ಕ್ಷೇತ್ರವನ್ನ ನಾವು ಗೆಲ್ಲುತ್ತೇವೆ.


ಮಧುಗಿರಿಯಲ್ಲಿ ರಾಜಣ್ಣ ಅವರು ದೇವೇಗೌಡರ ಸಾವನ್ನು ಬಯಸಿ ಮಾತನಾಡಿದ್ದರು. ಬಿಜೆಪಿಯವರು ಉರಿಗೌಡ, ನಂಜೇಗೌಡರ ಕಥೆ ಹೇಳುತ್ತಿದ್ದಾರೆ. ಆದರೆ ಇಷ್ಟು ದಿನ ನಿಮಗೆ ಅವರ ನೆನಪು ಇರಲಿಲ್ವಾ? ಇದೊಂದು ಕಾಲ್ಪನಿಕ ಕಥೆ. ಅದನ್ನು ಯಾರೂ ಕೂಡ ನಂಬುವುದಿಲ್ಲ.


ನಿಖಿಲ್​ ಕುಮಾರಸ್ವಾಮಿ


ಮನೆ ಮನೆಗೂ ರೇಷನ್ ಕಿಟ್


ದೇವೇಗೌಡರು ಈ ವಯಸ್ಸಿನಲ್ಲಿಯೂ ಪಕ್ಷಕ್ಕಾಗಿ ಓಡಾಡುತ್ತಿದ್ದಾರೆ. ಕುಮಾರಸ್ವಾಮಿಯವರು 64ನೇ ವಯಸ್ಸಿನಲ್ಲಿ ಒಬ್ಬರೇ ಇಡೀ ರಾಜ್ಯವನ್ನ ಸುತ್ತುತ್ತಿದ್ದಾರೆ. ನಾನು ಕುಮಾರಣ್ಣನ ಜೊತೆ ಹೋದಲ್ಲೆಲ್ಲ ತಾಯಂದಿರು ಸುಡುವ ಬಿಸಿಲು ಇದ್ದರೂ, ಮಧ್ಯ ರಾತ್ರಿಯಾದರೂ ತಲೆ ಮೇಲೆ ಕುಂಭ ಹೊತ್ತು ನಡೆಯುತ್ತಾ ಕುಮಾರಣ್ಣನಿಗೆ ಸಾಥ್ ಕೊಡುತ್ತಿದ್ದಾರೆ.


ಇದನ್ನೂ ಓದಿ: Bengaluru: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ; ಮಗನ ಪರ ನಿಂತ ತಾಯಿ ಮೇಲೂ ಹಲ್ಲೆ


ಕೋವಿಡ್ ಸಂದರ್ಭದಲ್ಲಿ ಗೌರಿಶಂಕರ್ ಅಣ್ಣ ಮನೆ ಮನೆಗೂ ರೇಷನ್ ಕಿಟ್ ವಿತರಿಸಿದ್ದರು. ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಬಿಜೆಪಿ ಸರ್ಕಾರ ಬಂತು. ಆ ಬಳಿಕ ಸುರೇಶ್ ಗೌಡರ ಕುಮ್ಮಕ್ಕುನಿಂದ ಸರಿಯಾದ ಅನುದಾನ ಕ್ಷೇತ್ರಕ್ಕೆ ತರಲು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದ್ದರು.

Published by:Sumanth SN
First published: