HOME » NEWS » State » TUMKUR GUBBI TO NITTUR DOUBLE TRACK RAILWAY ROUTE INAUGURATED BY RAILWAY MINISTER VKTMK LG

ತುಮಕೂರು: ಗುಬ್ಬಿ-ನಿಟ್ಟೂರು ನಡುವಿನ ಜೋಡಿ ರೈಲು ಮಾರ್ಗಕ್ಕೆ ಚಾಲನೆ

ಇನ್ನು ಕೇಂದ್ರ ಸಚಿವ ಪಿಯುಷ್ ಗೋಯಲ್ ಮಾತನಾಡಿ, ಗುಬ್ಬಿ- ನಿಟ್ಟೂರು ನಡುವಿನ 9 ಕಿಲೋಮೀಟರ್ ಜೋಡಿ ಹಳಿ ಕಾಮಗಾರಿಯನ್ನು 75.5 ಕೋಟಿ ರೂ ವೆಚ್ಚದಲ್ಲಿ ಕೈಗೊಂಡು ಪೂರ್ಣಗೊಳಿಸಲಾಗಿದೆ. ಈ ಮಾರ್ಗದಲ್ಲಿ ಎರಡು ಪ್ರಮುಖ ಸೇತುವೆ ಮತ್ತು 15 ಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದರು.

news18-kannada
Updated:February 22, 2021, 12:31 PM IST
ತುಮಕೂರು: ಗುಬ್ಬಿ-ನಿಟ್ಟೂರು ನಡುವಿನ ಜೋಡಿ ರೈಲು ಮಾರ್ಗಕ್ಕೆ ಚಾಲನೆ
ಉದ್ಘಾಟನಾ ಕಾರ್ಯಕ್ರಮ
  • Share this:
ತುಮಕೂರು(ಫೆ.22):  ತುಮಕೂರು ಜಿಲ್ಲೆ ಗುಬ್ಬಿ- ನಿಟ್ಟೂರು ನಡುವಿನ ಜೋಡಿ ರೈಲು ಮಾರ್ಗವನ್ನ ಭಾನುವಾರ ರಾಷ್ಟ್ರಕ್ಕೆ  ಸಮರ್ಪಣೆ ಮಾಡಲಾಯಿತು. ಕೇಂದ್ರದ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕರ ವ್ಯವಹಾರ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಪಿಯೂಷ್ ಗೋಯಲ್ ಅವರು ವಿಡಿಯೋ ಲಿಂಕ್ ಮೂಲಕ ಜೋಡಿ ಮಾರ್ಗವನ್ನು ಲೋಕಾರ್ಪಣೆ ಮಾಡಿದರು.

ಇದೇ ಸಮಯದಲ್ಲಿ ಗುಬ್ಬಿ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಧುಸ್ವಾಮಿ ಅವರು ಗುಬ್ಬಿ ನಿಟ್ಟೂರು ಜೋಡಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ ರೈಲ್ವೆ ಸಚಿವರನ್ನು ಅಭಿನಂದಿಸಿದರು. ಮೀರಜ್ ಮಾರ್ಗದ ಈ ಜೋಡಿ ಹಳಿಯು ಅರಸಿಕೆರೆವರೆಗೂ ಇನ್ನೂ 22 ಕಿಲೋಮೀಟರ್ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಬೆಂಗಳೂರು-ಬೆಳಗಾಂ ಮಾರ್ಗವು ರಾಜ್ಯದ ಜನತೆಗೆ ಸದ್ಬಳಕೆಯಾಗುತ್ತದೆ ಎಂದರಲ್ಲದೆ ಚಿತ್ರದುರ್ಗ-ತಿಪಟೂರು ರೈಲು ಸಂಪರ್ಕ ನಿರ್ಮಿಸಿದರೆ ತುಮಕೂರಿನವರು ಮಂಗಳೂರು, ಮೈಸೂರಿಗೆ ಹೋಗಲು ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವರಲ್ಲಿ ಬೇಡಿಕೆಯಿಟ್ಟರು.

ಬೆಂಗಳೂರಿನಿಂದ ತುಮಕೂರಿನವರೆಗೂ ಸಬರ್ಬನ್/ಮೆಟ್ರೊ ರೈಲು ಮಾರ್ಗವನ್ನು ವಿಸ್ತರಣೆ ಮಾಡಿದರೆ ತುಮಕೂರು-ಬೆಂಗಳೂರು ರಸ್ತೆಯ ವಾಹನ ಸಂಚಾರ ದಟ್ಟಣೆ ಕಡಿಮೆ ಆಗುವುದಲ್ಲದೆ ಪ್ರತಿದಿನ ಪ್ರಯಾಣಿಸುವವರಿಗೆ ಪ್ರಯೋಜನವಾಗುತ್ತದೆ ಎಂದು ಸಲಹೆ ನೀಡಿದರು. ರೈಲ್ವೆ ಅಂಡರ್ ಪಾಸ್ ಮತ್ತು ಲೆವೆಲ್ ಕ್ರಾಸಿಂಗ್ ನಲ್ಲಿ ಸಮಸ್ಯೆಗಳಿದ್ದು ನಿವಾರಿಸಲು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಇದೇ ವೇಳೆಯಲ್ಲಿ ಮಾತನಾಡಿದ ಸಂಸದ ಜಿ.ಎಸ್ ಬಸವರಾಜು ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳನ್ನು ಆದಷ್ಟು ಬೇಗ ಕೈಗೆತ್ತಿಕೊಂಡು ಪೂರ್ಣ ಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ತುಮಕೂರಿನವರೆಗೂ ಇರುವ ರೈಲು ಮಾರ್ಗದ ವಿದ್ಯುದೀಕರಣ ಸೌಲಭ್ಯವನ್ನು ಅರಸೀಕೆರೆವರೆಗೂ ವಿಸ್ತರಿಸಬೇಕೆಂದು ಬೇಡಿಕೆ ಇಟ್ಟರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಟಪ್ಪಾಂಗುಚ್ಚಿ ಡ್ಯಾನ್ಸ್; ವಿಡಿಯೋ ಸಖತ್ ವೈರಲ್

ದಾವಣಗೆರೆ-ತುಮಕೂರು, ರಾಯದುರ್ಗ-ತುಮಕೂರು ರೈಲು ಮಾರ್ಗವನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರಲ್ಲದೆ ಕೋವಿಡ್ -19 ಕಾರಣದಿಂದ ಪ್ಯಾಸೆಂಜರ್ ಟ್ರೈನ್ ಅನ್ನು ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಯಾಗಿರುವುದರಿಂದ ಪ್ರಯಾಣಿಕರ ಅನುಕೂಲ ಕ್ಕಾಗಿ ಆದಷ್ಟು ಬೇಗ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಇನ್ನು ಕೇಂದ್ರ ಸಚಿವ ಪಿಯುಷ್ ಗೋಯಲ್ ಮಾತನಾಡಿ, ಗುಬ್ಬಿ- ನಿಟ್ಟೂರು ನಡುವಿನ 9 ಕಿಲೋಮೀಟರ್ ಜೋಡಿ ಹಳಿ ಕಾಮಗಾರಿಯನ್ನು 75.5 ಕೋಟಿ ರೂ ವೆಚ್ಚದಲ್ಲಿ ಕೈಗೊಂಡು ಪೂರ್ಣಗೊಳಿಸಲಾಗಿದೆ. ಈ ಮಾರ್ಗದಲ್ಲಿ ಎರಡು ಪ್ರಮುಖ ಸೇತುವೆ ಮತ್ತು 15 ಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ.  ಪ್ರಯಾಣಿಕರ ಅನುಕೂಲಕ್ಕಾಗಿ ಗುಬ್ಬಿ ಮತ್ತು ನಿಟ್ಟೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಆಶ್ರಯ, ಉನ್ನತಮಟ್ಟದ ಪ್ಲಾಟ್ಫಾರ್ಮ್ ಗಳು, ಫುಟ್ ಓವರ್ ಬ್ರಿಡ್ಜ್, ಶೌಚಾಲಯ, ಬೆಂಚು, ವಾಟರ್ ಬೂತ್ ಗಳನ್ನು ನಿರ್ಮಿಸಲಾಗಿದೆ.ಗೋಯಲ್ ಮಾತನಾಡಿ ಗುಬ್ಬಿ ನಿಟ್ಟೂರು ನಡುವೆ ಅನುಷ್ಠಾನವಾಗಿರುವ ಈ ಜೋಡಿ ಹಳಿ ನಿರ್ಮಾಣ ಕಾಮಗಾರಿಯು ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ತುಮಕೂರು ಮತ್ತು ಅರಸೀಕೆರೆ (96 ಕಿಲೋಮೀಟರ್) ಹಳಿ ದ್ವಿಪಥೀಕರಣ ಯೋಜನೆಯ ಭಾಗವಾಗಿದೆ.  ಈ  ಯೋಜನೆಯನ್ನು 2015-16ರಲ್ಲಿ 783 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು.  ದ್ವಿಪಥೀಕರಣದಿಂದ ಬೆಂಗಳೂರಿನಿಂದ ಹುಬ್ಬಳ್ಳಿ ಬೆಳಗಾವಿ ಮುಂಬೈ ಮತ್ತಿತರ ಸ್ಥಳಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗದ ಸಾಲಿನ ಸಾಮರ್ಥ್ಯ ಹೆಚ್ಚಾಗುತ್ತದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಂತರಸಂಪರ್ಕ ಅಭಿವೃದ್ಧಿಯಾಗುತ್ತದೆ ರೈಲುಗಳು ವೇಗವಾಗಿ ಚಲಿಸಲು ಸಹಾಯಕವಾಗುತ್ತದೆ. 96 ಕಿಲೋಮೀಟರ್ ದೂರದ ಈ ದ್ವಿಪಥೀಕರಣ ಯೋಜನೆಯಲ್ಲಿ 74 ಕಿಲೋಮೀಟರ್ ನಷ್ಟು ಕಾಮಗಾರಿ ಈಗಾಗಲೇ ಅನುಷ್ಠಾನಗೊಂಡಿದೆ. ಉಳಿದ  ಕಾಮಗಾರಿಯು ಉತ್ತಮವಾಗಿ ಪ್ರಗತಿಯಲ್ಲಿದ್ದು ಬಾಣಸಂದ್ರ -ನಿಟ್ಟೂರು ನಡುವಿನ ಯೋಜನೆಯನ್ನು ಜೂನ್ ಮಾಹೆಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಕೆ.ಸಿ ಸ್ವಾಮಿ, ಗುಬ್ಬಿ ಪಟ್ಟಣ ಪಂಚಾಯತಿ ಅಣ್ಣಪ್ಪ ಸ್ವಾಮಿ ಉಪಸ್ಥಿತಿ ಇದ್ದರು.
Published by: Latha CG
First published: February 22, 2021, 12:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories