HOME » NEWS » State » TUMKUR DISTRICT ADMINISTRATION DECIDES TO CLEARANCE RELIGIOUS BUILDINGS LG

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಿನ್ನೆಲೆ; ಧಾರ್ಮಿಕ ಮಂದಿರಗಳ ತೆರವಿಗೆ ಮುಂದಾದ ತುಮಕೂರು ಜಿಲ್ಲಾಡಳಿತ

ಸುಪ್ರೀಂ ಕೋರ್ಟ ಆದೇಶದಂತೆ ಸಾರ್ವಜನಿಕ ರಸ್ತೆಗೆ ಅಡ್ಡಿಯಾಗಿದ್ದ ಈ ಧಾರ್ಮಿಕ ಮಂದಿರಗಳನ್ನು ಹತ್ತಾರು ವರ್ಷಗಳ ಹಿಂದೆಯೇ ತೆರವುಗೊಳಿಸಬೇಕಿತ್ತು. ಆದರೆ ಕೋಮು ಗಲಬೆಗೆ ಕಾರಣವಾಗಬಹುದು ಎಂಬ ಉದ್ದೇಶದಿಂದ ತೆರವು ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಈಗ ಸುಫ್ರಿಂ ಕೋರ್ಟ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ ತೆರವುಗೊಳಿಸುವ ಅನಿವಾರ್ಯತೆಗೆ ಜಿಲ್ಲಾಡಳಿತಕ್ಕೆ ಬಂದಿದೆ.

news18-kannada
Updated:February 2, 2020, 11:40 AM IST
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಿನ್ನೆಲೆ; ಧಾರ್ಮಿಕ ಮಂದಿರಗಳ ತೆರವಿಗೆ ಮುಂದಾದ ತುಮಕೂರು ಜಿಲ್ಲಾಡಳಿತ
ತುಮಕೂರು ಮಹಾನಗರ ಪಾಲಿಕೆ
  • Share this:
ತುಮಕೂರು(ಫೆ.02): ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿದ್ದ ದರ್ಗಾ ಹಾಗೂ ದೇವಸ್ಥಾನವನ್ನು ತೆರವುಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಕಳೆದ ಒಂದು ದಶಕದಿಂದ ಕೋಮು ಭಾವನೆ ಕೆರಳಬಹುದು ಎಂಬ ಕಾರಣದಿಂದ ಈ ಎರಡೂ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ಕೈ ಹಾಕಿರಲಿಲ್ಲ. ಇನ್ನೊಮ್ಮೆ ಸುಪ್ರೀಂ ಕೋರ್ಟ್​​​ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ ಜಿಲ್ಲಾಡಳಿತ ಎರಡೂ ಕೋಮಿನ ಧಾರ್ಮಿಕ ಸ್ಥಳವನ್ನು ತೆರವುಗೊಳಿಸಲು ತಯಾರಿ ನಡೆಸಿದೆ.

ತುಮಕೂರು ನಗರದ ಹೃದಯ ಭಾಗದಿಂದ ಹಾದು ಹೋಗುವ 206 ರಾಷ್ಟ್ರೀಯ ಹೆದ್ದಾರಿಗೆ ಟೌನ್ ಹಾಲ್‌ ವೃತ್ತದ ಬಳಿ ಅಡ್ಡವಾಗಿರುವ ದರ್ಗಾ ಹಾಗೂ ದೇವಸ್ಥಾನವನ್ನು ತೆರವುಗೊಳಿಸುವ ಕಾಲ ಸನ್ನಿಹಿತವಾಗಿದೆ. ಈ ದೇವಸ್ಥಾನ ಮತ್ತು ದರ್ಗಾದಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹೆದ್ದಾರಿಯ ಒಂದು ಬದಿಯಲ್ಲಿ ದರ್ಗಾ ಇನ್ನೊಂದು ಬದಿಯಲ್ಲಿ ಗಣಪತಿ ದೇವಸ್ಥಾನ ಇದೆ. ಪರಿಣಾಮ ಹೆದ್ದಾರಿ ಇಕ್ಕಟ್ಟಾಗಿದೆ. ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತಗಳು, ಟ್ರಾಫಿಕ್ ಜಾಮ್ ಆಗುತ್ತಿದೆ. ಸುಪ್ರೀಂ ಕೋರ್ಟ ಆದೇಶದಂತೆ ಸಾರ್ವಜನಿಕ ರಸ್ತೆಗೆ ಅಡ್ಡಿಯಾಗಿದ್ದ ಈ ಧಾರ್ಮಿಕ ಮಂದಿರಗಳನ್ನು ಹತ್ತಾರು ವರ್ಷಗಳ ಹಿಂದೆಯೇ ತೆರವುಗೊಳಿಸಬೇಕಿತ್ತು. ಆದರೆ ಕೋಮು ಗಲಬೆಗೆ ಕಾರಣವಾಗಬಹುದು ಎಂಬ ಉದ್ದೇಶದಿಂದ ತೆರವು ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಈಗ ಸುಫ್ರಿಂ ಕೋರ್ಟ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ ತೆರವುಗೊಳಿಸುವ ಅನಿವಾರ್ಯತೆಗೆ ಜಿಲ್ಲಾಡಳಿತಕ್ಕೆ ಬಂದಿದೆ.

ದೆಹಲಿ ವಿಧಾನಸಭೆ ಚುನಾವಣೆ: 133 ಅಭ್ಯರ್ಥಿಗಳ ಮೇಲಿವೆ ಅಪರಾಧ ಪ್ರಕರಣಗಳು

ಗಣಪತಿ ದೇವಸ್ಥಾನ ಮಾತ್ರ ತೆರವುಗೊಳಿಸಿ ದರ್ಗಾಗೆ ವಿನಾಯತಿ ಕೊಡಲು ಈ ಹಿಂದೆ ನಿರ್ಧರಿಸಲಾಗಿತ್ತು. ಕಾರಣ ದೇವಸ್ಥಾಕ್ಕೆ ಸೂಕ್ತವಾದ ದಾಖಲೆ ಇರಲಿಲ್ಲ . ಆದರೆ ವಕ್ಫ್​​ ಮಂಡಳಿ ದರ್ಗಾದ ಸೂಕ್ತ ದಾಖಲೆ ನೀಡಿತ್ತು. ತೆರವುಗೊಳಿಸಿದರೇ ಎರಡೂ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಿ, ಇಲ್ಲದಿದ್ದರೆ ಯಾವುದನ್ನೂ ಮುಟ್ಟಬೇಡಿ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಅಲ್ಲದೇ ದರ್ಗಾದ ದಾಖಲೆ ಸುಳ್ಳು ಎಂದು ವಾದ ಮಾಡಿತ್ತು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಿ.ಎಸ್.ಬಸವರಾಜು ವಕ್ಫ್ ಮಂಡಳಿ ನೀಡಿದ ದಾಖಲೆ ಸುಳ್ಳಾಗಿದ್ದು ಪ್ರಸ್ತುತ ದರ್ಗಾ ಇರುವ ಜಾಗ ವಕ್ಫ್ಗೆ ಸೇರಿಲ್ಲ ಎಂದು ಇನ್ನೊಂದು ದಾಖಲೆ ತಂದು ಜಿಲ್ಲಾಡಳಿತದ ಮುಂದೆ ಇಟ್ಟಿದ್ದಾರೆ. ಈ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ಎರಡೂ ಧಾರ್ಮಿಕ ಸ್ಥಳವನ್ನು ತೆರವುಗೊಳಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದಿದ್ದ ಹಲವು ಜಿಲ್ಲಾಧಿಕಾರಿಗಳು  ಸಂಚಾರಕ್ಕೆ ಅಡ್ಡಿಯಾಗಿದ್ದ ವಿವಾದಕ್ಕೆ ಎರಡೂ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ವಿಫಲ ಪ್ರಯತ್ನ ನಡೆಸಿದ್ರು. ಆದರೆ ಇಂದಿನ ಜಿಲ್ಲಾಧಿಕಾರಿ ರಾಕೇಶ್ ಕುಮಾರ ಎರಡೂ ಕೋಮಿನ ಮುಖಂಡರ ನಡುವೆ ಸೌಹಾರ್ದ ಮಾತುಕತೆ ನಡೆಸಿ ತೆರವು ಕಾರ್ಯಾಚರಣೆ ಯಶಸ್ವಿಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎನ್ನುವುದು ವರದಿ ಆಶಯ.

ವೈದ್ಯಲೋಕಕ್ಕೇ ಸವಾಲಾದ ಕೊರೊನಾ ವೈರಸ್​​ಗೆ ಔಷಧಿ ಕಂಡುಹಿಡಿದ ಹಿಂದೂ ಮಹಾಸಭಾ ಅಧ್ಯಕ್ಷ

 
Youtube Video

 
First published: February 2, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories