ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ತುಮಕೂರಿನ ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿದ ಪೋಷಕರು

ಕೈದಾಳ ಗ್ರಾಮದ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಯತೀಶ್ ಕುಮಾರ್ ಅವರ ವಿರುದ್ಧ ಮಕ್ಕಳು ಆರೋಪ ಮಾಡಿದ್ದರಿಂದ ಪೋಷಕರು ಒಂದಾಗಿ ಶಾಲೆಗೆ ಧಾವಿಸಿ ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

news18-kannada
Updated:January 18, 2020, 8:42 AM IST
ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ತುಮಕೂರಿನ ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿದ ಪೋಷಕರು
ತುಮಕೂರು ಶಿಕ್ಷಕನಿಗೆ ಪೋಷಕರಿಂದ ಥಳಿತ
  • Share this:
ತುಮಕೂರು (ಜ. 18): ಶಾಲಾ ಮಕ್ಕಳೊಂದಿಗೆ ಅಸಭ್ಯ ವರ್ತನೆ ತೋರಿದ ಶಿಕ್ಷಕನ ವಿರುದ್ಧ ರೊಚ್ಚಿಗೆದ್ದ ಪೋಷಕರು ಆತನಿಗೆ ಶಾಲೆಯಲ್ಲೇ ಥಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಪಾಠ ಹೇಳಿಕೊಡಬೇಕಾದ ಶಿಕ್ಷಕನೇ ಮಕ್ಕಳೊಂದಿಗೆ ದುರ್ವರ್ತನೆ ತೋರಿದ್ದರಿಂದ ಕೋಪಗೊಂಡ ಪೋಷಕರು ಶಿಕ್ಷಕನಿಗೆ ತಕ್ಕ ಪಾಠ ಕಲಿಸಿದ್ದಾರೆ.

ತುಮಕೂರು ತಾಲೂಕಿನ ಕೈದಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಯತೀಶ್ ಕುಮಾರ್ ಎಂಬ ಶಿಕ್ಷಕ ಮಕ್ಕಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಕೈದಾಳ ಗ್ರಾಮದ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ಯತೀಶ್ ಕುಮಾರ್ ಅವರ ವಿರುದ್ಧ ಮಕ್ಕಳು ಆರೋಪ ಮಾಡಿದ್ದರಿಂದ ಪೋಷಕರು ಒಂದಾಗಿ ಶಾಲೆಗೆ ಧಾವಿಸಿ ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವಿಷಯ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ ಅವರ ಗಮನಕ್ಕೂ ಬಂದಿದ್ದು, ಶಾಲೆಗೆ ಭೇಟಿ ನೀಡಿದ ಅವರು ಶಿಕ್ಷಕ ಯತೀಶ್ ಕುಮಾರ್​ನನ್ನು ಅಮಾನತುಗೊಳಿಸಿದ್ದಾರೆ.

ಇದನ್ನೂ ಓದಿ: ಇಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ; ಸಚಿವ ಸಂಪುಟ ವಿಸ್ತರಣೆಗೆ ತೋರಲಿದ್ದಾರಾ ಹಸಿರು ನಿಶಾನೆ?

ಯತೀಶ್ ಕುಮಾರ್ ಶಾಲೆಯ ವಿದ್ಯಾರ್ಥಿನಿಯರನ್ನು ಕರೆಸಿ ದೇಹದಲ್ಲಿ ಕೂದಲುಗಳು ಎಲ್ಲಿ ಬೆಳೆಯುತ್ತದೆ ಎಂದು ವಿಚಿತ್ರವಾಗಿ ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ. ಈ ವಿಷಯವನ್ನು ವಿದ್ಯಾರ್ಥಿನಿಯರು ಮನೆಯಲ್ಲಿ ತಿಳಿಸಿದ್ದು, ವಿಷಯ ತಿಳಿದ ಪೋಷಕರು ಶಾಲೆಯಲ್ಲೇ ಶಿಕ್ಷನಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಮಹಿಳೆಯರು ಕೂಡ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಹೋದ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ತುಮಕೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ