ತುಮಕೂರು (ಫೆ. 19): ತುಮಕೂರು ಜಿಲ್ಲೆಯ ಶಿರಾದ ಮಾಳಗಟ್ಟಿಯಲ್ಲಿ ನಿನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮದುವೆ ದಿಬ್ಬಣವನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಶಿರಾದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಕೊರಟಗೆರೆ ತಾಲೂಕಿನ ಬೆಟ್ಟಶಮ್ಮನಹಳ್ಳಿಯಲ್ಲಿ ಮದುವೆ ಮುಗಿಸಿದ ಸಂಬಂಧಿಕರು ಬಂಗಾರಹಟ್ಟಿಯಲ್ಲಿ ನಡೆಯುವ ರಿಸೆಪ್ಷನ್ಗೆ ಬಸ್ನಲ್ಲಿ ತೆರಳುತ್ತಿದ್ದರು. 40ರಿಂದ 50 ಜನರು ಇದ್ದ ಈ ಬಸ್ ಮೇಕೆರಹಳ್ಳಿ ಕ್ರಾಸ್ ಬಳಿ ಕಂದಕಕ್ಕೆ ಉರುಳಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದವರಿಗೆ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚು ಸಾಧ್ಯತೆ ಇದೆ.
ಮದುವೆ ದಿಬ್ಬಣದ ಬಸ್ ಅಪಘಾತವಾಗಿದ್ದರಿಂದ ಮದುವೆಗೆ ಹೊರಟವರು ಮಸಣ ಸೇರಿದ್ದಾರೆ. ಮೇಕೆರಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕೆಳಗುರುಳಿದೆ. 20 ಜನಕ್ಕೂ ಅಧಿಕ ಜನರಿಗೆ ಕೈ, ಕಾಲು ಮುರಿದಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿರಾ ಸರ್ಕಾರಿ ಆಸ್ಪತ್ರೆಗೆ ಮೃತ ದೇಹಗಳನ್ನು ರವಾನೆ ಮಾಡಲಾಗಿದೆ. ಗಾಯಾಳುಗಳನ್ನು ಕೂಡ ಅದೇ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ