• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Tumakuru: ನಾನು ಯಾರೆಂದು ಗೊತ್ತಿಲ್ಲ, ನಮ್ಮ ಹುಡುಗರನ್ನ ಬಿಟ್ ಬಿಡಿ; PSIಗೆ ಅವಾಜ್ ಹಾಕಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್

Tumakuru: ನಾನು ಯಾರೆಂದು ಗೊತ್ತಿಲ್ಲ, ನಮ್ಮ ಹುಡುಗರನ್ನ ಬಿಟ್ ಬಿಡಿ; PSIಗೆ ಅವಾಜ್ ಹಾಕಿದ್ದ ಕಾಂಗ್ರೆಸ್ ಮುಖಂಡ ಅರೆಸ್ಟ್

ಶಶಿ ಹುಲಿಕುಂಟೆ, ಕಾಂಗ್ರೆಸ್ ನಾಯಕ

ಶಶಿ ಹುಲಿಕುಂಟೆ, ಕಾಂಗ್ರೆಸ್ ನಾಯಕ

ಠಾಣೆಯಲ್ಲಿದ್ದ ಸಿಬ್ಬಂದಿ ಜೊತೆಯಲ್ಲಿಯೂ ಏರುಧ್ವನಿಯಲ್ಲಿ ಅವಾಚ್ಯ ಪದ ಬಳಸಿ ಗಲಾಟೆ ಮಾಡಲಾಗಿದೆ. ವಶಕ್ಕೆ ಪಡೆದವರ ವಿಚಾರಣೆಗೆ ಅಡ್ಡಿಪಡಿಸಿ ನಾಲ್ವರನ್ನು ಕರೆದುಕೊಂಡು ಹೋಗಲಾಗಿದೆ.

  • Share this:

ತುಮಕೂರು: ಫೆಬ್ರವರಿ 25ರಂದು ಬೆಳಗ್ಗೆ 5 ಗಂಟೆಗೆ ಪಿಎಸ್​ಐ ರತ್ನಮ್ಮ (PSI Ratnamma) ಅವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ (Shashi Hulikunte) ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ತುಮಕೂರು (Tumakuru) ನಗರದ ತಿಲಕ್ ಪಾರ್ಕ್ ಠಾಣೆಯ ಪೊಲೀಸರು ಶಶಿ ಹುಲಿಕುಂಟೆ ಅವರನ್ನ ಬಂಧಿಸಿದೆ. ಫೆಬ್ರವರಿ 25ರಂದು ತುಮಕೂರಿನ ಗಾಂಧಿನಗರದಲ್ಲಿ ನಾಲ್ಕು ಜನರು Pay MLA ಪೋಸ್ಟರ್​​ಗಳನ್ನು ಅಂಟಿಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಸ್ಟರ್​ ಅಂಟಿಸುತ್ತಿದ್ದವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ನಾಲ್ವರನ್ನು ವಶಕ್ಕೆ ಪಡೆದ ನಂತರ ಬೆಳಗಿನ ಜಾವ ಶಶಿ ಹುಲಿಕುಂಟೆ ಮತ್ತು ಅಜರ್ ಎಂಬವರು ಠಾಣೆಗೆ ಬಂದು ಗಲಾಟೆ ಮಾಡಿದ್ದಾರೆ. ರಾತ್ರಿ ಡ್ಯುಟಿಯಲ್ಲಿದ್ದ ಸಿಬ್ಬಂದಿ ಜೊತೆಯಲ್ಲಿಯೂ ಇಬ್ಬರು ಗಲಾಟೆ ಮಾಡಿದ್ದಾರೆ.


ಫೋನ್​​ನಲ್ಲಿ ಅವಾಜ್​ ಹಾಕಿದ್ದ ಶಶಿ ಹುಲಿಕುಂಟೆ!


ಈ ವೇಳೆ ಪಿಎಸ್​ಐ ರತ್ನಮ್ಮ ಕರೆ ಮಾಡಿ ಬೆಳಗ್ಗೆ ಬಂದು ವಿಚಾರಣೆ ಮಾಡೋದಾಗಿ ಹೇಳಿದ್ದಾರೆ. ಫೋನ್​ನಲ್ಲಿ ಪಿಎಸ್​ಐ ಅವರಿಗೆ ಅವಾಜ್ ಹಾಕಿದ ಶಶಿ ಹುಲಿಕುಂಟೆ, ನಮ್ಮ ಹುಡುಗರನ್ನು ಕೂಡಲೇ ಬಿಡಿ. ನಾನು ಯಾರೆಂದು ನಿಮಗೆ ಗೊತ್ತಿಲ್ಲ. ನಾನು ತುಮಕೂರಿನ ಕಾಂಗ್ರೆಸ್ ಯೂತ್ ಪ್ರೆಸಿಡೆಂಟ್ ಶಶಿ ಹುಲಿಕುಂಟೆ. ಮೂರು ತಿಂಗಳ ನಂತರ ನಮ್ಮ ಸರ್ಕಾರ ಬಂದ್ಮೇಲೆ ನೋಡಿಕೊಳ್ಳುತ್ತೇನೆ. ಠಾಣೆ ಮುಂದೆ ಜನರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡುತ್ತೇನೆ ಎಂದು ಏರುಧ್ವನಿಯಲ್ಲಿ ಶಶಿ ಹುಲಿಕುಂಟೆ ಮಾತಾಡಿದ್ದಾನೆ.


Tumakuru youth congress president shashi hulikunte arrested mrq
ಶಶಿ ಹುಲಿಕುಂಟೆ


ಪೊಲೀಸರ ಕರ್ತವ್ಯಕ್ಕೆ ಅಡ್ಡಿ


ಸ್ವಲ್ಪ ಸಮಯದ ಬಳಿಕ ಪಿಎಸ್​ಐ ರತ್ನಮ್ಮ ಠಾಣೆಗೆ ಆಗಮಿಸಿದಾಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದ ಶಿವ, ಉದಯಕುಮಾರ್, ಪಾರ್ಥ ಸಾರಥಿ ಮತ್ತು ವರುಣ್ ಎಂಬವರನ್ನು ಕರೆದುಕೊಂಡು ಹೋಗಲಾಗಿತ್ತು.


ಠಾಣೆಯಲ್ಲಿದ್ದ ಸಿಬ್ಬಂದಿ ಜೊತೆಯಲ್ಲಿಯೂ ಏರುಧ್ವನಿಯಲ್ಲಿ ಅವಾಚ್ಯ ಪದ ಬಳಸಿ ಗಲಾಟೆ ಮಾಡಲಾಗಿದೆ. ವಶಕ್ಕೆ ಪಡೆದವರ ವಿಚಾರಣೆಗೆ ಅಡ್ಡಿಪಡಿಸಿ ನಾಲ್ವರನ್ನು ಕರೆದುಕೊಂಡು ಹೋಗಲಾಗಿದೆ.


Tumakuru youth congress president shashi hulikunte arrested mrq
ಪೇ ಎಂಎಲ್​ಎ ಪೋಸ್ಟರ್


ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ


ಈ ಎಲ್ಲಾ ಬೆಳವಣಿಗೆ ಹಿನ್ನೆಲೆ ಪಿಎಸ್​ಐ ರತ್ನಮ್ಮ ಅವರೇ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಶಶಿ ಹುಲಿಕುಂಟೆ ಮತ್ತು ಅಜರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಇಬ್ಬರನ್ನು ತುಮಕೂರು 3 ನೇ ಹೆಚ್ಚುವರಿ ಜೆಎಂಎಫ್​​ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಶಶಿ ಹುಲಿಕುಂಟೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.


ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು


ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಗನ ಕಾರ್ಖಾನೆಯ ಯಂತ್ರದ ಬೆಲ್ಟ್​​ಗೆ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದಾನೆ. ಈ ಘಟನೆ ಶಿಗ್ಗಾವಿ ತಾಲೂಕಿನ ಕೋಣನಕೇರಿಯಲ್ಲಿ ನಡೆದಿದೆ.




ವಿವೇಕ್ ಹೆಬ್ಬಾರ್ ಒಡೆತನದ ವಿಐಪಿಎನ್ ಡಿಸ್ಟಲರಿಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಕಾರ್ಮಿಕನ ದೇಹ ಮಿಷನ್​ಗೆ ಸಿಲುಕಿ ಛಿದ್ರ ಛಿದ್ರವಾಗಿದೆ.


ಯಾವುದೇ ಸುರಕ್ಷತಾ ಕ್ರಮ ಅಳವಡಿಸದೆ ಇರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆ ವ್ಯವಸ್ಥಾಪಕರು ಸೇರಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:  PM Narendra Modi: ಇಂದು ಬೆಳಗಾವಿಯಲ್ಲಿ ದೇಶದ ರೈತರಿಗೆ ಗುಡ್ ನ್ಯೂಸ್ ಕೊಡಲಿದ್ದಾರೆ ಪ್ರಧಾನಿ ಮೋದಿ


‘ಕಾಂಗ್ರೆಸ್​​ನಲ್ಲಿ ರಾಷ್ಟ್ರನಾಯಕರಿಲ್ಲ’


ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ. ರಾಜ್ಯದಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಬಿಟ್ಟು ಬೇರೆಯವರಿಲ್ಲ. ಆದರೆ, ನಮ್ಮ ಬಳಿ ನರೇಂದ್ರ ಮೋದಿಯಂಥಾ ವಿಶ್ವ ನಾಯಕರಿದ್ದಾರೆ. ಹೀಗಾಗಿ ನಾವು ಅವರನ್ನು ಕರೆಸುತ್ತೇವೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

Published by:Mahmadrafik K
First published: