ಇಂದು ಬೆಳಗ್ಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ (Kallambella, Tumakuru) ಸಮೀಪದ ಬಾಲೇನಹಳ್ಳಿ ಸಂಭವಿಸಿದ ಅಪಘಾತದಲ್ಲಿ (Tumakuru Accident) ಚಾಲಕ ಸೇರಿ 9 ಜನರು (People Death) ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ರಾಯಚೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ದಾರುಣ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಒಂದೇ ಕುಟುಂಬದ (Family) ನಾಲ್ವರು ಸಾವನ್ನಪ್ಪಿದ್ದಾರೆ. ಹಬ್ಬಕ್ಕೆಂದು (Festival) ಮನೆಗೆ ಬಂದು ವಾಪಸ್ ತೆರಳುತ್ತಿದ್ದಾಗ ಮಗಳು-ಅಳಿಯ, ಮೊಮ್ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಸಾವನ್ನಪ್ಪಿರುವ 9 ಮಂದಿಯಲ್ಲಿ 6 ಮಂದಿ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇನ್ನು ಗಾಯಾಳುಗಳನ್ನು ಭೇಟಿ ಮಾಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ (Tumakuru SP) ಸಾಂತ್ವನ ಹೇಳಿದ್ದಾರೆ. ಈ ವೇಳೆ ಎಸ್ಪಿ, ಗಾಯಾಳುಗಳನ್ನು ತಬ್ಬಿ ಸಂಸೈಸುತ್ತಿರೋ ವಿಡಿಯೋ, ಫೋಟೋ ವೈರಲ್ ಆಗಿದೆ.
ತುಮಕೂರಿನ ಶಿರಾದಲ್ಲಿ ಅಪಘಾತಕ್ಕೆ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಹೇಳತೀರದಾಗಿದೆ. ಈಗ ಅಪಘಾತದಲ್ಲಿ ಬದುಕುಳಿದ ಗಾಯಾಳುಗಳಿಗೆ ತುಮಕೂರು ಎಸ್ಪಿ ಮಾನವೀಯತೆಯ ಸ್ಪರ್ಶ ನೀಡಿದ್ದಾರೆ.
ಭಾವುಕರಾದ ತುಮಕೂರು ಎಸ್ಪಿ ರಾಹುಲ್
ಅಪಘಾತದಲ್ಲಿ ಗಾಯಗೊಂಡು 11 ಮಂದಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು. ಗಾಯಾಳುಗಳ ಜೊತೆ ಮಾತನಾಡಿದ್ರು. ಇದೇ ವೇಳೆ ಎಸ್ಪಿ ಗಾಯಾಳುಗಳನ್ನ ಮಾತನಾಡಿಸೋ ವೇಳೆ ಎಸ್ಪಿ ಭಾವುಕರಾದರು.
ಗಾಯಾಳುಗಳನ್ನು ಆಲಂಗಿಸಿ ಎಸ್ಪಿ ಸಾಂತ್ವನ
ತುಮಕೂರು ಜಿಲ್ಲಾಸ್ಪತ್ರೆಗೆ ಗಾಯಾಳುಗಳ ಆರೋಗ್ಯ ವಿಚಾರಿಸಲು ತೆರಳಿದ್ದ ವೇಳೆ ಎಸ್ಪಿ ರಾಹುಲ್, ಗಾಯಾಳು ಬಾಲಕನನ್ನ ತಬ್ಬಿ ಎತ್ತಿಕೊಂಡು ಸಂತೈಸಿದರು. ಇದು ಅಲ್ಲಿದ್ದವರ ಕಣ್ಣಾಲಿ ತುಂಬುವಂತೆ ಮಾಡಿತು. ಇನ್ನು ಬೆಳಗಿನ ಜಾವ 4 ಗಂಟೆಯಿಂದಲೂ ಎಸ್ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಸ್ಥಳದಲ್ಲೇ ಬೀಡುಬಿಟ್ಟಿದ್ದರು.
ಇದನ್ನೂ ಓದಿ: ಹಬ್ಬಕ್ಕೆಂದು ಊರಿಗೆ ಬಂದಿದ್ದ ಮಗಳು-ಅಳಿಯ, ಮೊಮ್ಮಗನೂ ಮಸಣಕ್ಕೆ!
ಜಿಲ್ಲಾಸ್ಪತ್ರೆಗೆ ಆರಗ ಜ್ಞಾನೇಂದ್ರ ಭೇಟಿ
ತುಮಕೂರು ಜಿಲ್ಲಾಸ್ಪತ್ರೆಗೆ ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಆರಗ ಜ್ಞಾನೇಂದ್ರ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವನ ಹೇಳಿದ್ರು. ಎಲ್ಲರ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವೆ. ಗಾಯಗೊಂಡವರಿಗೆ ಸರ್ಕಾರದಿಂದ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ ಅಂದ್ರು.
ಹಬ್ಬಕ್ಕೆ ಬಂದಿದ್ದ ಮಗಳು-ಅಳಿಯ, ಮೊಮ್ಮಗ ದುರ್ಮರಣ!
ಗುಳೇ ಹೋಗ್ತಿದ್ದ ಕಾರ್ಮಿಕರಿದ್ದ ಕ್ರೂಸರ್ ಅಪಘಾತ ಪ್ರಕರಣದಲ್ಲಿ ಕುರುಕುಂದಾ ಗ್ರಾಮದ ಒಂದೇ ಮನೆಯ ನಾಲ್ವರು ಸಾವನ್ನಪ್ಪಿದ್ದಾರೆ. ಕುರುಕುಂದಾ ಗ್ರಾಮದ ಸಿದ್ದಣ್ಣ, ಸಿದ್ದಣ್ಣ ಅಕ್ಕ ಸುಜಾತಾ, ಸುಜಾತರ ಗಂಡ ಪ್ರಭು ಹಾಗೂ ಪುತ್ರ ವಿನೋದ್ ಸಾವನ್ನಪ್ಪಿದ್ದಾರೆ. ಇವರೆಲ್ಲಾ ಹಬ್ಬಕ್ಕೆಂದು ಮನೆಗೆ ಬಂದಿದ್ದರು. ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದಾಗ ಮಗಳು ಸುಜಾತ, ಅಳಿಯ, ಮೊಮ್ಮಗನೂ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಹೆಂಡ್ತಿ ಜೊತೆ ಫೈಟ್ ಮಾಡೋ ಗಂಡ, ಠಾಣೆ ಮುಂದೆ ಥಂಡಾ! ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನ
9 ಮಂದಿಯಲ್ಲಿ 6 ಜನ ನೇತ್ರದಾನ, ಸಾವಿನಲ್ಲೂ ಸಾರ್ಥಕತೆ
ಅಪಘಾತಕ್ಕೆ 9 ಮಂದಿ ಸಾವನ್ನಪ್ಪಿದ್ದು ಇದರಲ್ಲಿ 6 ಮಂದಿ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಚಾಲಕ ಕೃಷ್ಣ, ಸಿದ್ದಯ್ಯಸ್ವಾಮಿ, ನಿಂಗಣ್ಣ, ಮೀನಾಕ್ಷಿ, ಸುಜಾತಾ, ಪ್ರಭುಸ್ವಾಮಿ ನೇತ್ರದಾನ ಮಾಡಿದ್ದಾರೆ. ಮೃತರ ನೇತ್ರದಾನ ಮಾಡಲು ಸ್ವತಃ ಕುಟುಂಬಸ್ಥರೇ ಒಪ್ಪಿಕೊಂಡಿದ್ದಾರೆ. ಆರಂಭದಲ್ಲಿ ನಮಗೆ ಕಣ್ಣುದಾನದ ಬಗ್ಗೆ ಗೊತ್ತಿರಲಿಲ್ಲ. ಸಾವಿನ ನೋವಿನಲ್ಲೂ ಕಣ್ಣುದಾನಕ್ಕೆ ಮುಂದಾಗಿರೋದು ಒಳ್ಳೆಯದು ಅಂತಾ ಮೃತ ಕೃಷ್ಣಪ್ಪನ ಚಿಕ್ಕಪ್ಪ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ