• Home
  • »
  • News
  • »
  • state
  • »
  • Karnataka Textbook Row: ಪಠ್ಯ ಪುಸ್ತಕ ವಿವಾದದ ಬಗ್ಗೆ ಸಿದ್ದಗಂಗಾ ಶ್ರೀಗಳು ಹೇಳಿದ್ದಿಷ್ಟು

Karnataka Textbook Row: ಪಠ್ಯ ಪುಸ್ತಕ ವಿವಾದದ ಬಗ್ಗೆ ಸಿದ್ದಗಂಗಾ ಶ್ರೀಗಳು ಹೇಳಿದ್ದಿಷ್ಟು

ಶ್ರೀ ಸಿದ್ದಲಿಂಗಾ ಸ್ವಾಮೀಜಿಗಳು

ಶ್ರೀ ಸಿದ್ದಲಿಂಗಾ ಸ್ವಾಮೀಜಿಗಳು

ವಾಸ್ತವ ವಿಚಾರಗಳನ್ನ ಪ್ರಕಟ ಮಾಡುವುದು ಒಳ್ಳೆಯದು. ಮಾನವ ಬದುಕಿಗೆ ಬೇಕಾದ ತತ್ಚವನ್ನು ಕೊಟ್ಟಿರುವುದು ಮುಖ್ಯ. ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ಕೊಟ್ಟು ಗೌರವ ಎಂದು ಹೇಳಿದರು.

  • Share this:

ರಾಜ್ಯದಲ್ಲಿ ಉಂಟಾಗಿರುವ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ (Text Book Row) ಕುರಿತು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು (Sir Siddalinga Swamiji) ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪಠ್ಯ ಪುಸ್ತಕದ ವಿಷಯ ಈಗಾಗಲೇ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಸೃಷ್ಟಿ ಆಗಬಾರದು. ಮಕ್ಕಳಿಗೆ (Children) ಏನೇ ವಿಷಯ ಭೋದನೆ ಮಾಡಿದರೆ ನೈತಿಕ ಶಿಕ್ಷಣದ (Moral Education) ಅತ್ಯಂತ ಅಗತ್ಯ ಬೇಕಾಗಿದೆ. ಪಠ್ಯ ಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚು ಕಾಣ್ತಾ ಇದೆ. ಮೂಲ ವಿಚಾರವನ್ನು ತಿದ್ದದೆ ವಾಸ್ತವವಾಗಿ ಕೊಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ವಾದ ವಿವಾದಗಳು ಪೂರ್ಣಗೊಂಡು ಶಾಂತಿ ವಾತವರಣ ನಿರ್ಮಾಣ ಆಗಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟಾಗಬೇಕು. ಬಸವಣ್ಣನವರು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಬಸವಣ್ಣನವರ ತತ್ವಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿದೆ. ಅವರ ವಚನಗಳೇ ನಮಗೆ ಆಧಾರ ಆಗಿದ್ದು. ಆದ್ದರಿಂದ ಅದನ್ನು ತಿರುಚುವ ಪ್ರಯತ್ನ ಆಗಬಾರದು ಎಂದು ಹೇಳಿದರು.


ವಾಸ್ತವ  ವಿಚಾರ ಪ್ರಕಟಿಸೋದು ಉತ್ತಮ


ವಾಸ್ತವ ವಿಚಾರಗಳನ್ನ ಪ್ರಕಟ ಮಾಡುವುದು ಒಳ್ಳೆಯದು. ಮಾನವ ಬದುಕಿಗೆ ಬೇಕಾದ ತತ್ಚವನ್ನು ಕೊಟ್ಟಿರುವುದು ಮುಖ್ಯ. ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ಕೊಟ್ಟು ಗೌರವ ಎಂದು ಹೇಳಿದರು.


ಇದನ್ನೂ ಓದಿ: B.C Nagesh ಮನೆ ಮೇಲೆ ಮುತ್ತಿಗೆ ಕೇಸ್; ಕೆಲ NSUI ಕಾರ್ಯಕರ್ತರ ಬಂಧನ


ಇಂದು ಸಂಜೆ ಸಬೆ


ಇನ್ನೂ ಪಠ್ಯ ಪುಸ್ತಕ ವಿವಾದದ ಕುರಿತು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದರು. ಇಂದು ಮುಖ್ಯಮಂತ್ರಿಗಳ ಇದಕ್ಕೆ ಸಂಭಂಧಿಸಿದ ಎಲ್ಲರ ಸಭೆ ಕರೆದಿದ್ದಾರೆ. ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ರವರು ಗುಜರಾತ್ ಪ್ರವಾಸ ಮುಗಿಸಿ ಬಂದಿದ್ದಾರೆ. ಇಂದು ಎಲ್ಲರ ಅಭಿಪ್ರಾಯ ಪಡೆದು ವಿವಾದಕ್ಕೆ ಇತಿಶ್ರೀ ಹಾಡಲಿದ್ದಾರೆ ಎಂದು ಭರವಸೆ ನೀಡಿದರು.


ವಿವಾದ ಸಂಬಂಧ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೂರಕ್ಕೆ ನೂರರಷ್ಟು ಸಮಸ್ಯೆ ಬಗೆಹರಿಸುತ್ತಾರೆ ಎಂದು ತಿಳಿಸಿದರು.


ಶಿವಮೊಗ್ಗದಲ್ಲಿ ಬೀದಿಗಿಳಿದ ಪ್ರಗತಿಪರರು


ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಪ್ರಗತಿಪರರು ಶಿವಮೊಗ್ಗ ನಗರದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ತಿರುಚಿ ಅವಮಾನ ಮಾಡಿದವರನ್ನು ಸಮಿತಿಯಿಂದ ಕೈಬಿಡಲು ಆಗ್ರಹಿಸಿದರು.


ನಾಡಗೀತೆ ತಿರುಚುವ ಮೂಲಕ ಕುವೆಂಪು ಅವರಿಗೆ, ಕನ್ನಡನಾಡಿಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.  ಕುವೆಂಪು ಅವರಿಗೆ ರೋಹಿತ್ ಚಕ್ರವರ್ತಿ ಅಗೌರವ ತೋರಿದ್ದಾರೆ. ರೋಹಿತ್ ಚಕ್ರವರ್ತಿ ವಿರುದ್ಧ ಕೂಡಲೇ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದರು.


ಕುವೆಂಪು ಅವರಿಗೆ ಗೌರವ  ನಮನ


ನೂತನ ಶಿಕ್ಷಣ ನೀತಿ ನೆಪವೊಡ್ಡಿ ಪಠ್ಯಗಳನ್ನು ತಿದ್ದ ಮಕ್ಕಳನ್ನು ಭಾವನಾತ್ಮಕ ಸ್ಥಿತಿಗೆ ದೂಡಲಾಗುತ್ತಿದೆ. ಬಿಜೆಪಿ ಸರ್ಕಾರ ಯಾವುದೋ ಒಂದು ಸಿದ್ಧಾಂತ ಹೇರಲು ಹೊರಟಿದೆ ಎಂದು ಆರೋಪಿಸಿದರು. ನಗರದ ಗೋಪಿ ವೃತ್ತದಲ್ಲಿ ಜೈ ಭಾರತ ಜನನೀಯ ತನುಜಾತೆ ಗೀತೆ ಹಾಡುವ ಮೂಲಕ ಕುವೆಂಪು ಅವರಿಗೆ ಗೌರವ ನಮನ ಸಲ್ಲಿಸಲಾಯ್ತು.


ದಾವಣಗೆರೆಯಲ್ಲಿ ಪ್ರತಿಭಟನೆ


ಬಸವ ಪರ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಲಾಯ್ತು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಸರ್ಕಲ್ ನಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯ್ತು.


ಇದನ್ನೂ ಓದಿ:  Jamia Masjid: ಹಿಂದೂ ಸಂಘಟನೆಗಳಿಂದ ಜೂನ್ 4ರಂದು ಶ್ರೀರಂಗಪಟ್ಟಣ ಚಲೋಗೆ ಕರೆ, ತಾಲೂಕಿನಾದ್ಯಂತ 144 ಸೆಕ್ಷನ್ ಜಾರಿ


ಪ್ರತಿಭಟನೆಯುದ್ದಕ್ಕೂ ಪಠ್ಯ ಪುಸ್ತಕ ಸಮಿತಿ ವಿರುದ್ಧ ಘೋಷಣೆ ಕೂಗಲಾಯ್ತು. ಬಸವಣ್ಣನವರ ಚರಿತ್ರೆ- ಚರಿತ್ಯ್ರಗಳಿಗೆ ಧಕ್ಕೆ ತರುವ ಹಾಗೂ ಅಪ ಪ್ರಚಾರ ಮಾಡಲಾಗುತ್ತಿದೆ. ನಾಡಗೀತೆ , ಕುವೆಂಪು, ಬಸವಣ್ಣ ಅವರಿಗೆ ಅಪಮಾನ ಮಾಡಲಾಗಿದೆ. ದೋಷಪೂರಿತ ಪಠ್ಯವನ್ನು ಸ್ಥಗಿತಗೂಳಿಸಲು ಒತ್ತಾಯಿಸಲಾಯ್ತು.

Published by:Mahmadrafik K
First published: