ಒಬ್ಬಂಟಿ ಗಂಡಸರೇ ಇವರ ಗುರಿ; ತುಮಕೂರು ಜನರ ಸುಲಿಗೆ ಮಾಡುತ್ತಿದ್ದ ಎರಡು ಗ್ಯಾಂಗ್ ಸದಸ್ಯರ​ ಬಂಧನ

ಒಬ್ಬಂಟಿ ಗಂಡಸರೇ ರಸ್ತೆಯಲ್ಲಿ ನಡೆದು ಹೋಗುವುದಕ್ಕೆ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಇದೀಗ ಆ ಭಯವನ್ನು ಪೊಲೀಸರು  ದೂರ ಮಾಡಿದ್ದಾರೆ. 

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ತುಮಕೂರು (ಸೆ. 5):  ಆ ಎರಡು ನಟೋರಿಯಸ್ ಗುಂಪುಗಳಿಂದ ನಗರದ ಜನ ಸಾಮಾನ್ಯರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು.  ಯಾವಾಗ ಯಾರ ಮೇಲೆ ಅಟ್ಯಾಕ್ ಮಾಡುತ್ವೋ, ಯಾರ ಮೈಮೇಲೆ ಲಾಂಗು ಮಚ್ಚು ಬೀಸತ್ತೊ, ಯಾರ ಮೈಮೇಲಿನ ಒಡವೆ, ಜೇಬಿನ ದುಡ್ಡಿಗೆ ಕಣ್ಣು ಹಾಕುತ್ತಾರೋ ಎಂದು ಸಾರ್ವಜನಿಕರು ನಿತ್ಯ ಆತಂಕದ ನಡುವೆಯೇ ಓಡಾಡುವಂತೆ ಆಗಿತ್ತು. ಹೇಗೆಂದರೆ, ಒಬ್ಬಂಟಿ ಗಂಡಸರೇ ರಸ್ತೆಯಲ್ಲಿ ನಡೆದು ಹೋಗುವುದಕ್ಕೆ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ, ಇದೀಗ ಆ ಭಯವನ್ನು ಪೊಲೀಸರು  ದೂರ ಮಾಡಿದ್ದಾರೆ. 

ನಗರದಲ್ಲಿ ಎರಡು ಗ್ಯಾಂಗ್ ಗಳು ಕೊಟ್ಟ ಹಾವಳಿ ಅಷ್ಟಿಷ್ಟಲ್ಲ. ಇದರಿಂದ ಪೊಲೀಸರು ಕೂಡ ಸಾಕಷ್ಟು ತಲೆ ನೋವು ಅನುಭವಿಸುವಂತೆ ಆಗಿತ್ತು. ಈ ತಂಡಗಳು ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುವ ಜನರ ಮೇಲೆ ಮುಗಿ ಬಿದ್ದು, ಅವರನ್ನು ದೋಚುತ್ತಿದ್ದರು. ಒಂದು ವೇಳೆ  ಕೇಳಿದ ತಕ್ಷಣ ದುಡ್ಡು, ಮೊಬೈಲ್, ಮೈಮೇಲಿನ ಬಂಗಾರ ಕೊಡ್ಲಿಲ್ಲ ಎಂದರೆ, ಹಿಗ್ಗಾಮುಗ್ಗಾ ಹಲ್ಲೆ ನಡೆಸುತ್ತಿದ್ದರು.  ಈ ತಂಡದ ಬೆನ್ನು ಬಿದ್ದ ಪೊಲೀಸರು ಈಗ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶರಣ್ ಕುಮಾರ್ ಅಲಿಯಾಸ್ ಕರಿಯಾ, ರವಿಕುಮಾರ, ಮಂಜುನಾಥ, ಶಶಿಕುಮಾರ  ಎಂದು ಗುರುತಿಸಲಾಗಿದೆ.

ನಗರದ ವಿಶ್ವವಿದ್ಯಾನಿಲಯ, ಶಿವಕುಮಾರ್ ಸ್ವಾಮಿಜಿ ಸರ್ಕಲ್, ಕುವೆಂಪು ನಗರದಲ್ಲಿ ಇ ಗ್ಯಾಂಗ್​ ತೊಂದರೆಯಿಂದ ಜನರು ರೋಸಿ ಹೋಗಿದ್ದರು.  ಭಾರತಿ ನಗರದಲ್ಲಿ ಕಳೆದ ಮೇ 30ರಂದು ಭರತ್ ಮತ್ತು ಆತನ ಸಹೋದರ ಎಂಬುವವರು ಮಧ್ಯಾಹ್ನ 1.30ರ ಸಮಯದಲ್ಲಿಈ ಗ್ಯಾಂಗ್​ ದಾಳಿ ನಡೆಸಿತ್ತು. ಮಟ ಮಟ ಮಧ್ಯಾಹ್ನವೇ ದಾಳಿ ಮಾಡಿದ ಈ ದುಷ್ಕರ್ಮಿಗಳು  ಲಾಂಗು ಮಚ್ಚುಗಳನ್ನ ತೋರಿಸಿ ಅವರ ಬಳಿಯಿದ್ದ 3 ಸಾವಿರ ದುಡ್ಡು, ಜೇಬಲ್ಲಿದ್ದ ಮೊಬೈಲ್ ಕಸಿದಿದ್ದರು. ಅಷ್ಟೇ ಅಲ್ಲದೇ, ಎಲ್ಲಿಯಾದರೂ ಈ ವಿಚಾರ ಬಾಯಿ ಬಿಟ್ಟರೆ ಪ್ರಾಣವನ್ನೇ ತೆಗೆಯುತ್ತೇವೆ ಅಂತ ಬೆದರಿಕೆ ಹಾಕಿ ಪರಾರಿ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಹೊಸ ಬಡಾವಣೆ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ ಇವರೆಗಿಲ್ಲಾ ಈಗಾಗಲೇ ಕ್ರೈಂ ನಂಟು ಇದ್ದು ಇಂಥಾದ್ದೇ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ

ಮತ್ತೊಂದು ತಂಡವನ್ನು ಬಂಧಿಸುವಲ್ಲಿ ಯಶಸ್ವಿ

ಇವರಂತೆ ಮತ್ತೊಂದು ತಂಡ ಕೂಡ ನಗರದಲ್ಲಿ ಒಂಟಿ ಗಂಡಸರ ಮೇಲೆ ದಾಳಿ ನಡೆಸುತ್ತಿತ್ತು ಅವರನ್ನು ಬಂಧಿಸುವಲ್ಲಿ ಕೂಡ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರ್ಶನ್ ಅಲಿಯಾಸ್ ದರ್ಶಿ, ಅಂಡ್ರೂಸ್ ಅಲಿಯಾಸ್ ಆಂಡಿ, ಶಿವಣ್ಣ ಅಲಿಯಾಸ್ ಡಿಯೋ ಶಿವ  ಎನ್ನಲಾಗಿದೆ.

ಇದನ್ನು ಓದಿ: ಮತ್ತೆ ರಾಹುಲ್​ ಗಾಂಧಿ ಜಮ್ಮು ಪ್ರವಾಸ; ಮಾತಾ ವೈಷ್ಣೋದೇವಿ ದರ್ಶನ ಸಾಧ್ಯತೆ

ಕಳೆದ ಜುಲೈ 4ರಂದು ಮಂಜನಾಥ್ ಎಂಬ ವ್ಯಕ್ತಿ ತುಮಕೂರು ನಗರದ ಹೊರವಲಯದಲ್ಲಿರುವ ಟೂಡಾ ಲೇಔಟ್ ನಲ್ಲಿ ಒಬ್ಬರೆ ಕುಳಿತಿದ್ದರು.  ಈ ವೇಳೆ ಸ್ಥಳಕ್ಕೆ ಆಗಮಿಸಿದ ಈ ಮೂವರ ತಂಡ ತಮ್ಮ ಬೈಕ್ ಮೇಲೆ ಮಂಜುನಾಥ್​ನನ್ನು ಕೂರಿಸಿಕೊಂಡು ತಾಲೂಕಿನ ದೊಡ್ಡಸಾರಂಗಿ ಫಾರೆಸ್ಟ್ ಏರಿಯಾದೊಳಗೆ ಕರೆದೊಯ್ದಿದ್ದಾರೆ.. ಬಳಿಕ ಮಂಜುನಾಥ್ ಮೈಮೇಲಿದ್ದ ಬಟ್ಟೆಗಳನ್ನೆಲ್ಲಾ ಬಿಚ್ಚಿಸಿ ವಿವಸ್ತ್ರಗೊಳಿಸಿ ಅವನ ಬಳಿಯಿದ್ದ 11, 500 ಹಣವನ್ನ ಫೋನ್ ಪೇ ಮಾಡಿಸಿಕೊಂಡು, ಅದೇ ಮೊಬೈಲ್ ನಲ್ಲಿ ಮಂಜುನಾಥನ ವಿಡಿಯೋ ಮಾಡಿಕೊಂಡು ಎಲ್ಲಾದರೂ ಬಾಯಿ ಬಿಟ್ಟರೆ ನಿನ್ನ ವಿಡಿಯೋವನ್ನು ಎಲ್ಲಾ ಕಡೆ ಶೇರ್ ಮಾಡುತ್ತೇವೆ ಎಂದು ಬೆದರಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಣಮಿಸಿದ ಪೊಲೀಸರು ಅವರನ್ನು ಬಂಧಿಸಿ, ನಗರದ ಜನರು ನೆಮ್ಮದಿಯಾಗಿ ಓಡಾಡುವಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ.
Published by:Seema R
First published: