ಮೂರು ವರ್ಷದಿಂದ Hijab ಧರಿಸಿ ಪಾಠ ಮಾಡಿದ್ದೇನೆ, ಈಗ ತೆಗೆಯಲು ಸಾಧ್ಯವಿಲ್ಲ: ರಾಜೀನಾಮೆ ನೀಡಿದ ಉಪನ್ಯಾಸಕಿ: ಕುಂಕುಮ ಹಚ್ಚಿದ ವಿದ್ಯಾರ್ಥಿಗೆ ತಡೆ

ಹಿಜಾಬ್ (Hijab) ಧರಿಸದೇ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಲು ಪ್ರಾಂಶುಪಾಲರು (Principal) ಸೂಚಿಸಿದ ಹಿನ್ನೆಲೆ ತುಮಕೂರಿ(Tumkuru)ನ ಜೈನ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕಿ (Guest Lecturer) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಸ್ಪಷ್ಟನೆ ನೀಡಿ ವಿಡಿಯೋ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಿಜಾಬ್ (Hijab) ಧರಿಸದೇ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಲು ಪ್ರಾಂಶುಪಾಲರು (Principal) ಸೂಚಿಸಿದ ಹಿನ್ನೆಲೆ ತುಮಕೂರಿ(Tumkuru)ನ ಜೈನ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕಿ (Guest Lecturer) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಸ್ಪಷ್ಟನೆ ನೀಡಿ ವಿಡಿಯೋ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಚಾಂದನಿ ನಾಜ್ ರಾಜೀನಾಮೆ ನೀಡಿದ ಅತಿಥಿ ಉಪನ್ಯಾಸಕಿ. ಚಾಂದನಿ ಅವರು ಜೈನ ಪಿಯು ಕಾಲೇಜ್ (Jain PU College) ಮತ್ತು ವಿದ್ಯಾ ವಾಹಿನಿ ಕಾಲೇಜು (Vidya Vahini College) ಸೇರಿದಂತೆ ನಗರದ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಮೂರು ವರ್ಷದಿಂದ ಹಿಜಾಬ್ ಧರಿಸಿಯೇ ವಿದ್ಯಾರ್ಥಿಗಳಿಗೆ (Students) ಪಾಠ ಮಾಡಿದ್ದೇನೆ. ಗುರುವಾರ ನನ್ನನ್ನು ಕರೆದ ಪ್ರಾಂಶುಪಾಲರು ಯಾವುದೇ ಧಾರ್ಮಿಕ ಉಡುಪು ಧರಿಸದಂತೆ ಹೇಳಿದ್ದಾರೆ. ಈ ಮೂರು ವರ್ಷಗಳಲ್ಲಿ ನನಗೆ ಯಾವುದೇ ತೊಂದರೆ ಆಗಿಲ್ಲ. ಇದೀಗ ನನ್ನ ಆತ್ಮಗೌರವಕ್ಕೆ ಧಕ್ಕೆ ಆಗಿದ್ದರಿಂದ ನನ್ನ ಅತಿಥಿ ಉಪನ್ಯಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಿರೋದಾಗಿ ಹೇಳಿದ್ದಾರೆ.  

ಪ್ರತಿ ನಿತ್ಯ ಹಿಜಾಬ್ ಧರಿಸಿ ಕಾಲೇಜಿಗೆ ಚಾಂದಿನಿ ಹಾಜರಾಗುತ್ತಿದ್ದರು. ತರಗತಿಯಲ್ಲೂ ಹಿಜಾಬ್ ಧರಿಸಿಯೇ ತಮ್ಮ ಉಪನ್ಯಾಸ ನೀಡುತ್ತಿದ್ದರು. ಇದೀಗ ದಿಢೀರ್ ಬದಲಾದ ಬೆಳವಣಿಗೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಚಾಂದಿನಿ ನಾಜ್ ವಿಡಿಯೋ ಹೇಳಿಕೆಯಲ್ಲಿ ಏನಿದೆ?

ಕಳೆದ ಮೂರು ವರ್ಷಗಳಿಂದ ನಾನು ಜೈನ್ ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದೆ. ಅಲ್ಲಿಂದ ಇಲ್ಲಿವರೆಗೂ ಏನೂ ತೊಂದರೆ ಆಗಿರಲಿಲ್ಲ. ಆದರೆ ನಿನ್ನೆ ಪ್ರಾಂಶುಪಾಲರು ಕರೆದು ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತದ ಬಟ್ಟೆ ಧರಿಸಿ ಪಾಠ ಮಾಡಬಾರದು ಎಂದು ಆದೇಶ ಬಂದಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Hijab Row: ಉಡುಪಿಯ MGM ಕಾಲೇಜಿನ PUC ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ; ನಿಲ್ಲದ ಹಿಜಾಬ್ ಗೊಂದಲ

ಆದರೆ ನಾನು ಮೂರು ವರ್ಷದಿಂದ ಹಿಜಾಬ್ ಧರಿಸಿಯೇ ಪಾಠ ಮಾಡ್ತಾ ಇದ್ದೆ. ಈ ಬೆಳವಣಿಗೆಯಿಂದಾಗಿ ನನ್ನ  ಆತ್ಮಗೌರಕ್ಕೆ ಧಕ್ಕೆ ಉಂಟಾಯಿತು. ಈ ಎಲ್ಲ ಬೆಳವಣಿಗೆಯಿಂದ ನಿನ್ನೆ ದಿನ ನನ್ನ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದೇನೆ ಎಂದು ಚಾಂದಿನಿ ನಾಜ್ ಹೇಳಿದ್ದಾರೆ.

ಶಿಕ್ಷಣ ಸಚಿವ, ಸಿಎಂಗೆ ಪತ್ರ ಬರೆದು ಸುರೇಶ್ ಕುಮಾರ್ ಮನವಿ

ರಾಜ್ಯದಲ್ಲಿ ಉಂಟಾಗಿರುವ ಹಿಜಾಬ್ ಸಂಘರ್ಷದ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ನನ್ನ ಶಾಲೆ-ಕಾಲೇಜು, ನನ್ನ ಹೆಮ್ಮೆ, ನನ್ನ  ಶಿಕ್ಷಣ, ನನ್ನ ಸಮವಸ್ತ್ರ, ನನ್ನದೇ ಭವಿಷ್ಯವೆನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಹಿಜಾಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕು. ಶಾಲೆ ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆಯನ್ನು ಕಾಪಾಡಬೇಕು.ಹಿಜಾಬ್ ಅಥವಾ ಸಮವಸ್ತ್ರ- ಅದರ ಸುತ್ತಲೂ ಭುಗಿಲೇಳುತ್ತಿರುವ ವಿವಾದ ಮೇಲ್ನೋಟದ್ದಲ್ಲ.  ಶಾಲಾ, ಕಾಲೇಜು ಸಲಹಾ‌ ಸಮಿತಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ‌ ಖಚಿತ ಜವಾಬ್ದಾರಿಯನ್ನು ನಿಗದಿ‌ ಪಡಿಸಬೇಕು. ನನ್ನ ಸಮವಸ್ತ್ರ‌ ಮತ್ತು‌ ನನ್ನದೇ ಭವಿಷ್ಯವೆನ್ನುವ ಭಾವನೆ‌ ಪ್ರತಿ ವಿದ್ಯಾರ್ಥಿಯಲ್ಲಿಯೂ ಮೂಡುವಂತೆ ಮಾಡಲು ವಿಶೇಷ ಯೋಜನೆ ರೂಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ಹುಬ್ಬಳ್ಳಿಯಲ್ಲೂ ಭುಗಿಲೆದ್ದ Hijab Controversy.. ಶಾಲಾ-ಕಾಲೇಜಿಗೆ ರಜೆ ಘೋಷಣೆ..!

ಕುಂಕುಮ ಹಚ್ಚಿಕೊಂಡ ಬಂದ ವಿದ್ಯಾರ್ಥಿಗೆ ತಡೆ

ವಿಜಯಪುರದಲ್ಲಿ ಕುಂಕುಮ ವಿಚಾರ ಪ್ರತಿಧ್ವನಿಸಿದೆ. ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ  ವಿದ್ಯಾರ್ಥಿಯೋರ್ವನಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ಈ ಸಂಬಂಧ ವಿದ್ಯಾರ್ಥಿ ಹಾಗೂ ಕಾಲೇಜಿನ ದೈಹಿಕ ಉಪನ್ಯಾಸಕ ನಡುವೆ ವಾಗ್ವಾದ ಉಂಟಾಗಿದೆ.

ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ್ ಗೌಡ ಹಾಗೂ ‌ಪದವಿ ವಿದ್ಯಾರ್ಥಿ ಗಂಗಾಧರ್ ಬಡಿಗೇರ ನಡುವೆ ಕೆಲ ಸಮಯ ಮಾತಿನ ಚಕಮಕಿ ಉಂಟಾಗಿತ್ತು. ಕೆಲ ಕಾಲ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
Published by:Mahmadrafik K
First published: