ತುಮಕೂರು: ಪ್ರೀತಿಯಲ್ಲಿ ಬಿರುಕು (Love Breakup) ಮೂಡಿದ ಕಾರಣ ಪ್ರೇಯಸಿಯ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ (Chikkanayakanahalli, Tumakuru) ಹುಳಿಯಾರು ಪ್ರದೇಶ ಯಳನಾಡು ಗ್ರಾಮದಲ್ಲಿ ನಡೆದಿದೆ. 26 ವರ್ಷದ ಬಿಎಸ್ ವಿನಯಕುಮಾರ್ ಆತ್ಮಹತ್ಯೆಗೆ ಶರಣಾದ ಯುವಕ. ಮೃತ ವಿನಯಕುಮಾರ್ ಅದೇ ಗ್ರಾಮದ ಕಲ್ಲೇಗೌಡರ ಪುತ್ರಿ 17 ವರ್ಷದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಅಪ್ರಾಪ್ತೆ ದೊಡ್ಡಬಿದರೆ ಗ್ರಾಮದ ನಿವಾಸಿಯಾಗಿದ್ದು, ತಾಯಿ ಜೊತೆ ಭಟ್ಟರಹಳ್ಳಿಯ ಅಜ್ಜಿ ಮನೆಯಲ್ಲಿ ವಾಸವಾಗಿದ್ದಳು. ದ್ವಿತೀಯ ಪಿಯುಸಿ ಉತ್ತೀರ್ಣಳಾಗಿದ್ದ ಅಪ್ರಾಪ್ತೆಗೆ ವಿನಯಕುಮಾರ್ ಮೇಲೆ ಪ್ರೇಮಾಂಕುರವಾಗಿತ್ತು.
ವಿನಯಕುಮಾರ್ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದನು. ದೇವಸ್ಥಾನಕ್ಕೆ ಬಂದ ವೇಳೆ ವಿನಯಕುಮಾರ್ ಮತ್ತು ಅಪ್ರಾಪ್ತೆಗೂ ಲವ್ ಆಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಅಂತರ ಕಾಯ್ದುಕೊಂಡಿದ್ದ ಪ್ರೇಯಸಿ
ಪ್ರೇಯಸಿ ತನ್ನಿಂದ ಅಂತರ ಕಾಯ್ದುಕೊಂಡಿದ್ದ ಕೋಪಗೊಂಡಿದ್ದ ವಿನಯಕುಮಾರ್ ಗುರುವಾರ ಬೆಳಗಿನ ಜಾವ ಆಕೆಯ ಮನೆಗೆ ನುಗ್ಗಿದ್ದಾನೆ. ಮಚ್ಚಿನಿಂದ ಪ್ರೇಯಸಿ ಮೇಲೆ ಮಾರಣಾಂತಿಕ ದಾಳಿ ನಡೆಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಗಾಯಗೊಂಡಿರುವ ಅಪ್ರಾಪ್ತೆ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನೂ ಓದಿ: Matrimonialನಲ್ಲಿ ಪರಿಚಯವಾದವನ ಭೇಟಿಗೆ ಬೆಂಗಳೂರಿನಿಂದ ದೆಹಲಿಗೆ ಹೋದ ಮಹಿಳೆ; ಮುಂದೇನಾಯ್ತು?
ಗ್ರಾಮದ ಕಲ್ಯಾಣಿಯಲ್ಲಿ ಯುವಕನ ಶವ ಪತ್ತೆ
ಹಲ್ಲೆಯ ಬಳಿಕ ಗ್ರಾಮಸ್ಥರು ವಿನಯಕುಮಾರ್ಗಾಗಿ ಹುಡುಕಾಟ ನಡೆಸಿದಾಗ ಆತನ ಟೀ ಶರ್ಟ್ ಕಲ್ಯಾಣಿ ಬಳಿ ಪತ್ತೆಯಾಗಿದೆ. ಕಲ್ಯಾಣಿ ಪರಿಶೀಲನೆ ನಡೆಸಿದಾಗ ವಿನಯಕುಮಾರ್ ಶವ ಪತ್ತೆಯಾಗಿದೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ