ತುಮಕೂರು: ಸರ್ಕಾರಿ (Government) ಕೆಲಸ (Work) ಅಂದ್ರೆ ದೇವರ (God) ಕೆಲಸ ಎಂಬ ಮಾತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸ ಅಂದ್ರೆ ಹಾಯಾದ ಕೆಲಸ ಅನ್ನೋ ರೀತಿ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ಸರ್ಕಾರಿ ಕಚೇರಿಗಳಲ್ಲಿ ನೌಕರರು (Employees) ಸರಿಯಾದ ಸಮಯಕ್ಕೆ ಬರಲ್ಲ. ಬೇಗ ಮನೆಗೆ ಹೋಗ್ತಾರೆ. ಸಾರ್ವಜನಿಕರಿಗೆ ಸರಿಯಾಗಿ ಕೆಲಸ ಮಾಡಿಕೊಡಲ್ಲ. ಸುಮ್ಮನೆ ಜನ ಸಾಮಾನ್ಯರನ್ನು ಅಲೆದಾಡಿಸುತ್ತಾರೆ ಎನ್ನೋ ಆರೋಪಗಳನ್ನು ಜನರೇ ಮಾಡುತ್ತಾರೆ. ಅದಕ್ಕೆ ತುಮಕೂರಿನಲ್ಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರ್ಕಾರಿ ರಜೆ ದಿನ ಆಸ್ಪತ್ರೆ(Hospital)ಗೆ ರಜೆ (Holiday) ಮಾಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಆರೋಗ್ಯಧಿಕಾರಿ ಆಸ್ಪತ್ರೆಗಳಿಗೆ ನೋಟಿಸ್ (Notice) ನೀಡಿದ್ದಾರೆ. ಆದೇಶದಂತೆ ಕಾರ್ಯ ನಿರ್ವಹಿಸಲು ಸುತ್ತೋಲೆ ಹೊರಡಿಸಿದ್ದಾರೆ.
27/4 ಕೆಲಸ ಮಾಡುವಂತೆ ಸೂಚನೆ
ಆಸ್ಪತ್ರೆ, ವೈದ್ಯರು ಅಂದ್ರೆನೇ ಹಾಗೆ, ದಿನದ 24 ಗಂಟೆಯೂ ಕೆಲಸ ಮಾಡಲು ರೆಡಿ ಇರಬೇಕು. ರೋಗಿಗಳಿಗೆ ಯಾವಾಗ ಬಂದ್ರೂ ಚಿಕಿತ್ಷೆ ನೀಡಲು ರೆಡಿಯಾಗಿರಬೇಕು. ಆದ್ರೆ ತುಮಕೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ ಬಾಗಿಲು ಹಾಕ್ತಿದ್ರಂತೆ. ರಜೆ ದಿನಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ಕೊಡಲು ಆಗದಿದ್ರೆ ಹೇಗೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಸುತ್ತೋಲೆ ಹೊರಡಿಸಿದ್ದಾರೆ. ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ 24/7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆಗೆದು ಸೇವೆ ನೀಡಬೇಕೆಂದು ಆದೇಶಿಸಿದ್ದಾರೆ.
ಸಾರ್ವಜನಿಕ ವಲಯದಿಂದ ದೂರು
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ ರಜೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಜಿಲ್ಲಾ ಆರೋಗ್ಯಧಿಕಾರಿಗೆ ಹಲವು ಬಾರಿ ದೂರು ನೀಡಿದ್ರು. ಅಲ್ಲದೇ ರಜೆ ದಿನಗಳಲ್ಲಿ ಸಾರ್ವಜನಿಕರಿಗೆ ಕನಿಷ್ಠ ಪ್ರಥಮ ಚಿಕಿತ್ಸೆ ಕೂಡ ದೊರೆಯದೇ ನೋವು ಅನುಭವಿಸುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಗೊತ್ತಾಗಿತ್ತು. ಅದಕ್ಕೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗಳಿಗೆ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!
ಜಿಲ್ಲಾ ಆರೋಗ್ಯಧಿಕಾರಿ ನಡೆಗೆ ಮೆಚ್ಚುಗೆ
ಆಸ್ಪತ್ರೆಗಳು ರಜೆ ಮಾಡುತ್ತಿವೆ ಎಂದು ಗೊತ್ತಾದ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಆಕ್ಷನ್ ತೆಗೆದುಕೊಂಡಿದ್ದಾರೆ. . ಭಾನುವಾರ, ಸರ್ಕಾರಿ ರಜೆ ದಿನಗಳಲ್ಲಿ 24/7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆಗೆದು ಸೇವೆಗೆ ಲಭ್ಯವಿರುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಅದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ಕಷ್ಟ ಅರ್ಥ ಮಾಡಿಕೊಂಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಮತ್ತೆ ದೂರು ಬಂದ್ರೆ ಸೂಕ್ತ ಕ್ರಮ
ಆಸ್ಪತ್ರೆಗಳು ರಜೆ ದಿನಗಳಲ್ಲಿ ಬಾಗಿಲು ಹಾಕ್ತಾರೆ ಎಂದು ಸಾರ್ವಜನಿಕರು ದೂರುಗಳನ್ನು ನೀಡಿದ್ದರು. ಮತ್ತೆ ದೂರುಗಳು ಮರುಕಳಿಸಿದಲ್ಲಿ ಸಂಬಂಧಪಟ್ಟ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಹಾಗೂ ಸಿಬ್ಬಂದಿ ವರ್ಗದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ವೈದ್ಯೋ ನಾರಾಯಣ ಹರಿ
ವೈದ್ಯೋ ನಾರಾಯಣ ಹರಿ ಅನ್ನೋದನ್ನು ಎಲ್ಲರು ಕೇಳಿಯೇ ಇರ್ತಿರಿ. ಅಂದ್ರೆ ಜನ ಆರೋಗ್ಯ ಸಮಸ್ಯೆ ಬಂದ್ರೆ ಮೊದಲು ಓಡಿ ಬರೋದು ಆಸ್ಪತ್ರೆಗೆ, ವೈದ್ಯರ ಬಳಿ. ವೈದ್ಯರು ದೇವರ ಸಮ ಎಂದು. ಒಂದು ವೇಳೆ ದೇವರು ನಮ್ಮನ್ನು ಕೈ ಬಿಟ್ಟು ವೈದ್ಯರು ಬಿಡಲ್ಲ ಎನ್ನೋ ನಂಬಿಕೆಯಿಂದ. ಹೇಗಾದ್ರೂ ಚಿಕಿತ್ಸೆ ನೀಡಿ ತಮ್ಮ ನೋವು ಕಡಿಮೆ ಮಾಡುತ್ತಾರೆ. ಸಾಯೋ ಸ್ಥಿತಿಯಲ್ಲಿರುವವರನ್ನು ಬದುಕಿಸುತ್ತಾರೆ ಅನ್ನೂ ವಿಶ್ವಾಸದಿಂದ ಬರುತ್ತಾರೆ.
ಇದನ್ನೂ ಓದಿ: Belagavi: ಆಸ್ಪತ್ರೆ ಎಂದರೆ ಮಕ್ಕಳು ಖುಷ್! ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏನಿದು ಜಾದೂ?
ಅದಕ್ಕೆ ಅಲ್ವಾ ಆಸ್ಪತ್ರೆಗಳ ಕೆಲಸವನ್ನು 24/7 ಮಾಡಿರುವುದು. ಯಾವುದೇ ಸಮಯದಲ್ಲಾದ್ರೂ ಸರಿ, ಯಾರಿಗೆ ತೊಂದರೆಯಾದ್ರೂ ಆಸ್ಪತ್ರೆಗೆ ಬರಲಿ ಅಂತ. ಅದು ಬಿಟ್ಟು ಸರ್ಕಾರಿ ರಜೆ, ಭಾನುವಾರ ರಜೆ ಮಾಡಿ ಬಿಟ್ರೆ ಜನ ಸಾಮಾನ್ಯರ ಗತಿಯೇನು. ಅವರಿಗೆ ಪ್ರಾಥಮಿಕ ಚಿಕಿತ್ಸೆ ಸಿಗದಿದ್ದರೆ ತುಂಬಾ ಕಷ್ಟ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ