• Home
  • »
  • News
  • »
  • state
  • »
  • Janardhana Reddy: ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ; ಪತ್ನಿ ಜೊತೆ ವಿಶೇಷ ಪೂಜೆಯಲ್ಲಿ ಭಾಗಿ

Janardhana Reddy: ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ; ಪತ್ನಿ ಜೊತೆ ವಿಶೇಷ ಪೂಜೆಯಲ್ಲಿ ಭಾಗಿ

ಜನಾರ್ಧನ ರೆಡ್ಡಿಗೆ ತುಲಾಭಾರ

ಜನಾರ್ಧನ ರೆಡ್ಡಿಗೆ ತುಲಾಭಾರ

ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಅವರಿಗೆ ನಾಣ್ಯದ ತುಲಾಭಾರ ಮಾಡಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಬಳ್ಳಾರಿಯ ಕೃಷ್ಣಾನಗರ ಕ್ಯಾಂಪನ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Abhaya Anjaneya Swamy Temple)  ಮಾಜಿ ಸಚಿವ ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ ಮಾಡಿದ್ದಾರೆ. ಇಂದು (ಅ.22) ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರೆಡ್ಡಿ ಅಭಿಮಾನಿ ಆಲಪಾಟಿ ಶ್ರೀನಿವಾಸನಿಂದ ಲೋಕ ಕಲ್ಯಾಣಾರ್ಥ ಗಣಪತಿ ಹೋಮ ಮತ್ತು ತುಲಾಭಾರ ಆಯೋಜನೆ ಮಾಡಲಾಗಿತ್ತು. ರೆಡ್ಡಿ ದಂಪತಿ ಹೋಮ ಹಾಗೂ ಪೂಜೆಯಲ್ಲಿ ಎರಡು ತಾಸು ಪಾಲ್ಗೊಂಡರು. ಬಳಿಕ ಜನಾರ್ದನ ರೆಡ್ಡಿಗೆ (Janardhana Reddy) ನಾಣ್ಯದ ತುಲಾಭಾರ ಮಾಡಲಾಯ್ತು. 


tulabhara to former minister janardhan reddy in bellary pvn
ರೆಡ್ಡಿ ದಂಪತಿ


ಶನಿವಾರ ಲೋಕ ಕಲ್ಯಾಣಾರ್ಥ ದೇವಸ್ಥಾನದಲ್ಲಿ ಗಣಪತಿ ಹೋಮ ಮತ್ತು ತುಲಾಭಾರ ಆಯೋಜಿಸಲಾಗಿತ್ತು. ಜನಾರ್ದನ ರೆಡ್ಡಿ ಅವರ ಅಭಿಮಾನಿ, ರೈತ ಆಲಪಾಟಿ ಶ್ರೀನಿವಾಸ ಕಾರ್ಯಕ್ರಮ ಆಯೋಜಿಸಿದ್ದರು. ಎರಡು ತಾಸು ನೆರವೇರಿದ ಹೋಮದಲ್ಲಿ ಜನಾರ್ದನ ರೆಡ್ಡಿ ದಂಪತಿ ಭಾಗಿಯಾದರು.




ಸಗಣಿಯಿಂದ ಹಣತೆ!


ಕಲಬುರಗಿ:  ಮಣ್ಣಿನ ಹಣತೆ ಕೇಳಿದ್ದೀವಿ. ಆದ್ರೆ ಇಲ್ಲಿ ಹೀಗೆ ಚಂದವಾಗಿ ಬೆಳಗೋಕೆ ತಯಾರಾಗಿರೋದು ಮಣ್ಣಿನ ಹಣತೆಯಲ್ಲ, ಸಗಣಿಯ ಹಣತೆ. ಅರೇ! ಸಗಣಿಯಿಂದಲೂ ಹಣತೆ (Diya Frome Cow Dung) ತಯಾರಿಸಬಹುದಾ ಅಂತ ಆಶ್ಚರ್ಯಪಡೋ ಥರ ಮಾಡಿದವರು ಕಲಬುರಗಿಯ ಓರ್ವ ನಿವೃತ್ತ ಶಿಕ್ಷಕನ ಗೋ ಪ್ರೀತಿ! ಹಸುಗಳನ್ನೇ ಅವಲಂಬಿಸಿ ಕಲಬುರಗಿ ನಗರದ (Kalaburagi News) ಕೃಷ್ಣ ಕೆಂಭಾವಿಯವರು 60ರಷ್ಟು ವಿಧದ ಉತ್ಪನ್ನಗಳನ್ನ ತಯಾರಿಸ್ತಿದ್ದಾರೆ.


ಗೋವಿನ ಮೇಲಿನ ಪ್ರೀತಿಗೆ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಗೋಸೇವೆ (Goseva) ಆರಂಭಿಸಿದವರಿವರು! ಈಗಂತೂ ಕಲಬುರಗಿಯಲ್ಲಿ ಸಗಣಿಯಿಂದ ಹಣತೆ, ಧೂಪ, ವಿಭೂತಿ, ಗೋಮೂತ್ರದಿಂದ ಅರ್ಕ ತಯಾರಿಸಿ ಮಾರಾಟ ಮಾಡ್ತಿದ್ದಾರೆ.


ದೀಪಾವಳಿ ಹಬ್ಬ ಹತ್ತಿರ ಬಂದ್ರಂತೂ ಇವರು ತಯಾರಿಸೋ ಹಣತೆಗೆ ಎಲ್ಲಿಂದ ಡಿಮ್ಯಾಂಡ್. ಆಕಳಿನ ಸಗಣಿಯನ್ನ ಪುಡಿ ಮಾಡಿ ಅದರಲ್ಲಿ ತುಪ್ಪವನ್ನು ಕಲಸಿ ಹಣತೆಯನ್ನು ತಯಾರಿಸುತ್ತಾರೆ. ಹೀಗೆ ತಯಾರಿಸುವ ಹಣತೆ ದೀಪದ ಎಣ್ಣ ಜೊತೆ ತಾನೂ ಉರಿದುಹೋಗುತ್ತೆ.


ಜೀವನದಿಯ ಉಳಿವಿಗಾಗಿ ಕಾವೇರಿ ಆರತಿ

 ಕೊಡಗು: ತವರು ಜಿಲ್ಲೆಯಲ್ಲೇ ಕಾವೇರಿ ನದಿ (Cauvery River) ಮಲೀನಗೊಳ್ಳುತ್ತಿದ್ದು ಜೀವನಾಡಿಯ ಉಳಿವಿಗಾಗಿ ಇದೀಗ ಅಭಿಯಾನ ಶುರುವಾಗಿದೆ. ಸಾಕಷ್ಟು ವರ್ಷದಿಂದ ವಿವಿಧ ಸಂಘ ಸಂಸ್ಥೆಗಳಿಂದ ಕೇಳಿ ಬರುತ್ತಿದ್ದ ಕಾವೇರಿ ಆರತಿಯ (Cauvery Arati) ಕೂಗಿಗೆ ಕೊನೆಗೂ ಸರ್ಕಾರವೂ (Karnataka Government) ಧ್ವನಿಗೂಡಿಸಿದೆ. ಜಲಸಂಪನ್ಮೂಲ ಇಲಾಖೆ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ಅಖಿಲ ಭಾರತ ಸನ್ಯಾಸಿಗಳ ಸಂಘದಿಂದ ಶುಕ್ರವಾರ ತಲಕಾವೇರಿ (Talakaveri) ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಮಹಾ ಆರತಿ (Maha Arati) ಮಾಡಲಾಯಿತು.



ತಲಕಾವೇರಿಯಲ್ಲಿ ಬ್ರಹ್ಮ ಕುಂಡಿಕೆಯಲ್ಲಿ ಕೊಡಗಿನ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮತ್ತು ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಆರತಿ ಬೆಳಗುವ ಮೂಲಕ ಸ್ವಚ್ಛ ಕಾವೇರಿಗಾಗಿ ನಡೆಯುತ್ತಿರುವ ಅಭಿಯಾನಕ್ಕೆ ಚಾಲನೆ ನೀಡಿದರು.


ಕಾವೇರಿಯ ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯ


ಈ ವೇಳೆ ಮಾತನಾಡಿದ ಅಖಿಲ ಭಾರತ ಸನ್ಯಾಸಿಗಳ ಸಂಘದ ಅಧ್ಯಕ್ಷ ಭಾನು ಪ್ರಕಾಶ್ ಶರ್ಮಾಸ್ವಾಮೀಜಿ ಜೀವ ಕೋಟಿಗೆ ಜಲವಾಗಿರುವ ಕಾವೇರಿ ಕೋಟ್ಯಂತರ ರೈತರ ಬದುಕನ್ನು ಹಸನಾಗಿಸಿದೆ. ಕೋಟಿ ಕೋಟಿ ಜೀವಿಗಳಿಗೆ ಆಶ್ರಯವಾಗಿರುವ ಕಾವೇರಿಯ ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.


ಕೊಡಗಿನ ಶಾಸಕದ್ವಯರು ಮಾತನಾಡಿ, ನದಿ ತಟದಲ್ಲಿರುವವರಿಂದಲೇ ಕಾವೇರಿ ಕಲುಷಿತಗೊಳ್ಳುತ್ತಿದೆ. ಹೀಗಾಗಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಾವೇರಿ ನದಿ ಸ್ವಚ್ಛತೆ ಕಾಪಾಡಬೇಕಾಗಿದೆ ಎಂದರು.


Published by:ಪಾವನ ಎಚ್ ಎಸ್
First published: