Bangalore Accident: ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ; ಓರ್ವ ಸಾವು, ಆರೋಪಿ ಪರಾರಿ

ಇಂಡಿಕಾ ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಂದು ‌ಕಾರಿನಲ್ಲಿ ಏರ್ ಬ್ಯಾಗ್ ಓಪನ್ ಆದ ಕಾರಣ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಎರಡೂ ಕಾರಿಗಳು ಸಂಪೂರ್ಣ ಜಖಂ ಆಗಿವೆ.

ಅಪಘಾತಕ್ಕೊಳಗಾದ ಕಾರು

ಅಪಘಾತಕ್ಕೊಳಗಾದ ಕಾರು

  • Share this:
ಬೆಂಗಳೂರು (ಮಾ.16): ಇಂದು ಮುಂಜಾನೆ ನಡೆದ ಭೀಕರ ಸರಣಿ ರಸ್ತೆ ಅಪಘಾತಕ್ಕೆ ಬೆಂಗಳೂರು ಬೆಚ್ಚಿಬಿದ್ದಿದೆ. ಎರಡು ಕಾರು, ಎರಡು ಲಾರಿಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇಂದಿರಾನಗರದ ಬಿನ್ನಮಂಗಲ ಸಿಗ್ನಲ್​ನಲ್ಲಿ ಬೆಳಗ್ಗೆ 6:30ರ ಸುಮಾರಿಗೆ ಈ ಘಟನೆ ನಡೆದಿದೆ. ಸಿಗ್ನಲ್​ ಸಮೀಪ ಲಾರಿ, ಎರಡು ಕಾರುಗಳು ನಿಂತಿದ್ದವು. ಈ ವೇಳೆ ವೇಗವಾಗಿ ಬಂದ ಟ್ರಕ್​ ಸಿಗ್ನಲ್​ನಲ್ಲಿ ನಿಂತಿದ್ದ ಲಾರಿ ಹಾಗೂ ಕಾರಿಗೆ ಗುದ್ದಿದೆ.

ಇಂಡಿಕಾ ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಂದು ‌ಕಾರಿನಲ್ಲಿ ಏರ್ ಬ್ಯಾಗ್ ಓಪನ್ ಆದ ಕಾರಣ ಆ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಎರಡೂ ಕಾರಿಗಳು ಸಂಪೂರ್ಣ ಜಖಂ ಆಗಿವೆ.

ಸಿಗ್ನಲ್‌‌ ಬಿದ್ದ ಹಿನ್ನಲೆಯಲ್ಲಿ ಸಿಲಿಂಡರ್ ತುಂಬಿದ್ದ ಲಾರಿ ನಿಂತಿತ್ತು. ಲಾರಿ ಹಿಂಬಂದಿಯಲ್ಲಿ ಇಂಡಿಕಾ ಕಾರು ಮತ್ತು ಎರ್ಟಿಗಾ ಕಾರು ನಿಂತಿದ್ದವು. ವೇಗದಲ್ಲಿ ಬಂದ ಟ್ರಕ್​ ನಿಯಂತ್ರಣ ತಪ್ಪಿ ಕಾರುಗಳಿಗೆ ಡಿಕ್ಕಿ ಹೊಡೆದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಡಿಕ್ಕಿ ಹೊಡೆದಿದ್ದ ಪರಿಣಾಮ ಮುಂದೆ ನಿಲ್ಲಿಸಿದ್ದ ಲಾರಿ ಕೆಳಗೆ ಇಂಡಿಕಾ ಕಾರು ನುಗ್ಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ; ಚಿಕನ್​-ಮಟನ್​ ಬಿರಿಯಾನಿ ಬದಲು ಬೌಬೌ ಬಿರಿಯಾನಿ ತಿಂದೀರಿ!

ಸರಣಿ ಅಪಘಾತ ಮಾಡಿದ ನಂತರ ಲಾರಿ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಹಲಸೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನಿಗಾಗಿ ಹುಡುಕಾಟ ಆರಂಭವಾಗಿದೆ.
First published: