'ಕ್ಯಾಂಟರ್​ ಪಲ್ಟಿಯಾಗಿ, ಈರುಳ್ಳಿಯನ್ನು ಜನ ಹೊತ್ತೊಯ್ದರು' ಎಂದೇಳಿ 50 ಕ್ವಿಂಟಾಲ್​ ಈರುಳ್ಳಿ ಕದ್ದ ಚಾಲಕ

ಬಳಿಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊಲ್ಲಡಕು ಬಳಿ ಕ್ಯಾಂಟರ್​ ಚಾಲಕ ಚೇತನ್​​ 81 ಚೀಲ ಈರುಳ್ಳಿಯನ್ನು  ಮಾರಾಟ ಮಾಡಿದ್ದಾನೆ. ಸುಮಾರು 7 ಲಕ್ಷ ಮೌಲ್ಯದ ಈರುಳ್ಳಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು(ಡಿ.08): ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಈ ನಡುವೆ ಈರುಳ್ಳಿ ಕಳ್ಳರೂ ಸಹ ಹೆಚ್ಚಾಗುತ್ತಿದ್ದಾರೆ. ಈರುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆ, ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈರುಳ್ಳಿ ಕ್ಯಾಂಟರ್ ಚಾಲಕನೊಬ್ಬ ಈರುಳ್ಳಿ ಕದಿಯಲು ನಾಟಕವಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. 

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಕ್ಯಾಂಟರ್​​​ಗೆ 183 ಚೀಲ ಈರುಳ್ಳಿಯನ್ನು ಲೋಡ್​ ಮಾಡಿ ಕಳುಹಿಸಲಾಗಿತ್ತು. ಈರುಳ್ಳಿ ಆನಂದಕುಮಾರ್ ಎಂಬುವವರಿಗೆ ಸೇರಿದ್ದಾಗಿತ್ತು. ಚೆನ್ನೈನ ಮೋರ್ ವೆಲ್ ಕಂಪನಿಗೆ ಕೆ.ಜಿ 140ರೂ.ನಂತೆ 183 ಚೀಲ ಈರುಳ್ಳಿಯನ್ನು ಸಾಗಿಸಲಾಗುತ್ತಿತ್ತು.

ಬೆಂಗಳೂರಿಗೆ ಬಂತು ಈಜಿಪ್ಟ್‌ ಈರುಳ್ಳಿ; ಏನಿದರ ವಿಶೇಷತೆ? ಕೆ.ಜಿ. ಗೆ ಎಷ್ಟು ರೂ? ಇಲ್ಲಿದೆ ಮಾಹಿತಿ..!

ಈ ವೇಳೆ ಕ್ಯಾಂಟರ್​ ಚಾಲಕ ಚೇತನ್​ ಈರುಳ್ಳಿಯನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ್ದಾನೆ. ಹೀಗಾಗಿ ತುಮಕೂರು ಜಿಲ್ಲೆಯ ಶಿರಾ ತಾಲೂಕು ತಾವರಕೆರೆ ಬಳಿಯ ಯರಗುಂಟೇಶ್ವರ ನಗರದ ಬಳಿ ಕ್ಯಾಂಟರ್ ಪಲ್ಟಿ ಮಾಡಿದ್ದಾರೆ. ಕ್ಯಾಂಟರ್ ಪಲ್ಟಿ ಮಾಡಿ ಆಸ್ಪತ್ರೆಗೆ ದಾಖಲಾಗುವ ನಾಟಕ ಕೂಡ ಆಡಿದ್ದಾನೆ. ಬಳಿಕ ಕ್ಯಾಂಟರ್​ ಮಗುಚಿ ಬಿದ್ದಿದೆ. ಈರುಳ್ಳಿಯನ್ನು ಜನರು ಹೊತ್ತೊಯ್ದರು ಎಂದು ಮಾಲೀಕ ಆನಂದ್​​​​​​ಗೆ ಫೋನ್​ ಮಾಡಿ ಹೇಳಿದ್ದಾನೆ.

ಬಳಿಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಗೊಲ್ಲಡಕು ಬಳಿ ಕ್ಯಾಂಟರ್​ ಚಾಲಕ ಚೇತನ್​​ 81 ಚೀಲ ಈರುಳ್ಳಿಯನ್ನು  ಮಾರಾಟ ಮಾಡಿದ್ದಾನೆ. ಸುಮಾರು 7 ಲಕ್ಷ ಮೌಲ್ಯದ ಈರುಳ್ಳಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಟರ್​​ ಮಾಲೀಕ, ಚಾಲಕ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಶಿರಾದ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾವರೆಕೆರೆ ಪೊಲೀಸರು ಕದ್ದ ಈರುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿ ಬೆಂಕಿ ದುರಂತಕ್ಕೆ 43 ಬಲಿ; ಶೋಕ ಸಾಗರದಲ್ಲಿ ಭಾರತ, ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಕೇಜ್ರಿವಾಲ್
First published: