• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Basavaraj Bommai: ಹೈದ್ರಾಬಾದ್‌ನಲ್ಲಿ ಬಸವರಾಜ ಬೊಮ್ಮಾಯಿಗೆ ಅಪಮಾನ, 40% ಸಿಎಂಗೆ ಸ್ವಾಗತ ಅಂತ ಫ್ಲೆಕ್ಸ್ ಹಾಕಿದ ಟಿಆರ್‌ಎಸ್!

Basavaraj Bommai: ಹೈದ್ರಾಬಾದ್‌ನಲ್ಲಿ ಬಸವರಾಜ ಬೊಮ್ಮಾಯಿಗೆ ಅಪಮಾನ, 40% ಸಿಎಂಗೆ ಸ್ವಾಗತ ಅಂತ ಫ್ಲೆಕ್ಸ್ ಹಾಕಿದ ಟಿಆರ್‌ಎಸ್!

ಸಿಎಂ ಬೊಮ್ಮಾಯಿಗೆ ಅಪಮಾನ

ಸಿಎಂ ಬೊಮ್ಮಾಯಿಗೆ ಅಪಮಾನ

ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಸಾಮಾನ್ಯರಿಂದ 40 ಪ್ರತಿಶತ ಲಂಚವನ್ನು ಕೇಳುತ್ತದೆ ಎಂದು ಪ್ರತಿಪಕ್ಷಗಳು ಮಾಡಿದ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಟಿಆರ್‌ಎಸ್ ಈ ಬ್ಯಾನರ್ ಹಾಕಿದೆ. ಇದರಲ್ಲಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪರೋಕ್ಷವಾಗಿ ಟೀಕಿಸಲಾಗಿದೆ.

  • Share this:

ಹೈದ್ರಾಬಾದ್: ಕರ್ನಾಟಕದಲ್ಲಿ (Karnataka) ಆಳ್ವಿಕೆ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಬಿಜೆಪಿ ಸರ್ಕಾರವನ್ನು (BJP Government) 40% ಸರ್ಕಾರ (40% Government) ಅಂತ ಕಾಂಗ್ರೆಸ್ (Congress) ಸೇರಿದಂತೆ ವಿಪಕ್ಷಗಳು ಕರೆಯುತ್ತಿವೆ. ಗುತ್ತಿಗೆದಾರರ ಸಂಘ (Contractors Association) ಕೂಡ ರಾಜ್ಯ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡಿದ್ದವು. ಇದೀಗ 40% ಆರೋಪದ ಬಗ್ಗೆ ಮತ್ತೆ ಸುದ್ದಿಯಾಗಿದೆ. ತೆಲಂಗಾಣದ (Telangana) ಹೈದ್ರಾಬಾದ್‌ನಲ್ಲಿ (Hyderabad) ಇದೇ ವಿಚಾರಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಪಮಾನ ಮಾಡಲಾಗಿದೆ. ಹೈದ್ರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (BJP National Executive Meet) ನಡೆಯುತ್ತಿದ್ದು, ಅಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಅಪಮಾನಿಸುವ ಬೋರ್ಡ್‌ಗಳನ್ನು ಆಡಳಿತಾರೂಢ ಟಿಆರ್‌ಎಸ್‌ ಪಕ್ಷ (TRS Party) ಅಳವಡಿಸಿದೆ. 40 ಪರ್ಸೆಂಟ್‌ ಸಿಎಂಗೆ ಸ್ವಾಗತ ಅಂತ ಬ್ಯಾನರ್‌ಗಳನ್ನು ಹಾಕಲಾಗಿದೆ.


ತೆಲಂಗಾಣದಲ್ಲಿ ಕರ್ನಾಟಕ ಸಿಎಂಗೆ ಅಪಮಾನ


ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೆಲಂಗಾಣ ಆಡಳಿತಾರೂಢ ಪಕ್ಷ ಟಿಆರ್‌ಎಸ್ ಅಪಮಾನ ಮಾಡಿದೆ. ಬಸವರಾಜ ಬೊಮ್ಮಾಯಿ ಅವರನ್ನು 40 ಪರ್ಸೆಂಟ್ ಮುಖ್ಯಮಂತ್ರಿ ಅಂತ ಟಿಆರ್‌ಎಸ್‌ ಅಪಮಾನಿಸಿದೆ.ಬೊಮ್ಮಾಯಿಯನ್ನು 40 ಪರ್ಸೆಂಟ್ ಸಿಎಂ ಎಂದ ಟಿಆರ್‌ಎಸ್‌


ತೆಲಂಗಾಣ ವಿಮೋಚನಾ ದಿನಾಚರಣೆಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣಕ್ಕೆ ಆಗಮಿಸಿದ್ದಾರೆ. ಇದಕ್ಕೂ ಮುನ್ನ ತೆಲಂಗಾಣದ ಪೆರೇಡ್ ಮೈದಾನದಲ್ಲಿ ಟಿಆರ್‌ಎಸ್‌ ಈ ಬೃಹತ್ ಫಲಕವನ್ನು ಅಳವಡಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ಅವರನ್ನು 40 ಪರ್ಸೆಂಟ್ ಮುಖ್ಯಮಂತ್ರಿಗೆ ಸ್ವಾಗತ ಅಂತ ವ್ಯಂಗ್ಯವಾಗಿ ಕರೆದು, ಟಿಆರ್‌ಎಸ್ ಅಪಮಾನಿಸಿದೆ.


ಇದನ್ನೂ ಓದಿ: Kalyana Karnataka: ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಉತ್ಸವಕ್ಕೆ ಆಗಮಿಸಿದ್ದ ಸಿಎಂಗೆ ಕಪ್ಪುಪಟ್ಟಿ ಪ್ರದರ್ಶನ


ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿ ವ್ಯಂಗ್ಯ


ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಸಾಮಾನ್ಯರಿಂದ 40 ಪ್ರತಿಶತ ಲಂಚವನ್ನು ಕೇಳುತ್ತದೆ ಎಂದು ಪ್ರತಿಪಕ್ಷಗಳು ಮಾಡಿದ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಟಿಆರ್‌ಎಸ್ ಈ ಬ್ಯಾನರ್ ಹಾಕಿದೆ. ಇದರಲ್ಲಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಲಾಗಿದೆ.  


ಬಿಜೆಪಿ ವಿರುದ್ಧ ಟಿಆರ್‌ಎಸ್‌ ಕಿಡಿಕಿಡಿ


ಇನ್ನು ತೆಲಂಗಾಣ ವಿಮೋಚನ ದಿನಾಚರಣೆ ದಿನವೇ ಬಿಜೆಪಿ ವಿರುದ್ಧ ಟಿಆರ್‌ಎಸ್‌ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಟಿಆರ್‌ಎಸ್, ಪರೇಡ್ ಮೈದಾನದ ಹೊರಗೆ ಬ್ಯಾನರ್‌ಗಳನ್ನು ಹಾಕಿದ್ದು, ''ಮೋದಿ ಸರ್ಕಾರ್ 60 ವರ್ಷಗಳ ಗೋವಾ ವಿಮೋಚನಾ ದಿನಾಚರಣೆಗೆ 300 ಕೋಟಿ ರೂಪಾಯಿ ಕೊಡುಗೆ ಕೊಟ್ಟಿದ್ದೀರಿ. ಆದರೆ ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನ ಕೇಂದ್ರದ ಕೊಡುಗೆ ಶೂನ್ಯ. ಸೆ.17ರಂದು ತೆಲಂಗಾಣಕ್ಕೂ ಅಮಿತ್ ಶಾ ಘೋಷಣೆ ಮಾಡಬಹುದೇ? ಅಂತ ವ್ಯಂಗ್ಯವಾಡಿದೆ.


ಇದನ್ನೂ ಓದಿ: HDD-Ashok: ಮನೆಗೆ ತೆರಳಿ ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ R. ಅಶೋಕ್; ಕುತೂಹಲ ಕೆರಳಿಸಿದೆ ಸಚಿವರ ಭೇಟಿ


ಹೈದ್ರಾಬಾದ್ ವಿಮೋಚನಾ ದಿನ ಆಚರಣೆ


ಇದೇ ವೇಳೆ ಕೇಂದ್ರ ಸರ್ಕಾರದಿಂದ ತೆಲಂಗಾಣ ರಾಜ್ಯಾದ್ಯಂತ ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಿಕಂದರಾಬಾದ್ ಪರೇಡ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಇವರೊಂದಿಗೆ ಹಲವು ಕೇಂದ್ರ ಸಚಿವರು, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಉಪಸ್ಥಿತರಿದ್ದರು. ಪರೇಡ್ ಮೈದಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

Published by:Annappa Achari
First published: