ರೆಬೆಲ್​ ಶಾಸಕರ ಮನವೊಲಿಕೆಗೆ ಡಿಕೆಶಿ ಮಾಸ್ಟರ್ ಪ್ಲ್ಯಾನ್​; ಮೈತ್ರಿ ಬೆಂಬಲಿಸಲು ಅತೃಪ್ತರ ಒಪ್ಪಿಗೆ?

ಅತೃಪ್ತರ ರಾಜೀನಾಮೆ ಪರ್ವ ಆರಂಭವಾದಾಗಿನಿಂದಲೂ ಡಿಕೆಶಿ ಆ್ಯಕ್ಟಿವ್​ ಆಗಿದ್ದಾರೆ. ಮುಂಬೈನಲ್ಲಿ ರೆಬೆಲ್​ಗಳು ಉಳಿದುಕೊಂಡಿದ್ದ ಹೋಟೆಲ್​ಗೆ ಮುಂಜಾನೆಯೇ ಭೇಟಿ ನೀಡುವ ವಿಫಲ ಪ್ರಯತ್ನ ಮಾಡಿದ್ದರು. ಈ ವೇಳೆ ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಹೀಗಿದ್ದರೂ ಡಿಕೆಶಿ ಛಲ ಬಿಟ್ಟಿಲ್ಲ.

Rajesh Duggumane | news18
Updated:July 13, 2019, 8:03 AM IST
ರೆಬೆಲ್​ ಶಾಸಕರ ಮನವೊಲಿಕೆಗೆ ಡಿಕೆಶಿ ಮಾಸ್ಟರ್ ಪ್ಲ್ಯಾನ್​; ಮೈತ್ರಿ ಬೆಂಬಲಿಸಲು ಅತೃಪ್ತರ ಒಪ್ಪಿಗೆ?
ಡಿಕೆ ಶಿವಕುಮಾರ್​
  • News18
  • Last Updated: July 13, 2019, 8:03 AM IST
  • Share this:
ಬೆಂಗಳೂರು (ಜು.13):  ಮೈತ್ರಿ ಸರ್ಕಾರಕ್ಕೆ ತಲೆನೋವಾಗಿರುವ ಅತೃಪ್ತ ಶಾಸಕರ ಮನವೊಲಿಕೆಗೆ ಸಚಿ ಡಿಕೆ ಶಿವಕುಮಾರ್​ ಮುಂದಾಗಿದ್ದಾರೆ. ಒನ್​ ಮ್ಯಾನ್​ ಆರ್ಮಿಯಾಗಿ ಅವರು ರೆಬೆಲ್​ ಶಾಸಕರನ್ನು ಭೇಟಿ ಮಾಡಿ, ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ರೆಬೆಲ್​ ಶಾಸಕ ಸೋಮಶೇಖರ್ ಬುಧವಾರ ರಾತ್ರಿ ಮುಂಬೈನಿಂದ ಆಗಮಿಸಿದ್ದರು. ಸೋಮಶೇಖರ್​ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಅವರ ಮನೆಯಲ್ಲಿ ಡಿಕೆಶಿ ಕಾದು ಕುಳಿತಿದ್ದರು. ಆದರೆ, ಸೋಮಶೇಖರ್​ ಮನೆಗೆ ಆಗಮಿಸಲ ಇಲ್ಲ. ಬದಲಿಗೆ ಹೋಟೆಲ್​​ ಒಂದರಲ್ಲಿ ರೂಮ್​ ಮಾಡಿ ಉಳಿದಿದ್ದರು. ಈಗ ಮತ್ತೋರ್ವ ಅತೃಪ್ತ ಶಾಸಕನ ಮನೆಗೆ ಡಿಕೆಶಿ ತೆರಳಿದ್ದಾರೆ.

ಎಂಟಿಬಿ ನಾಗರಾಜ್ ಕೂಡ ರೆಬೆಲ್​ ಆಗಿದ್ದಾರೆ. ಹಾಗಾಗಿ ಅವರ ಮನೆಗೆ ನಿನ್ನೆ ತೆರಳಿ ಟ್ರಬಲ್​ ಶೂಟರ್​ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ನಾಗರಾಜ್​ ಮನವೊಲಿಕೆಗೆ ಡಿಕೆಶಿ ಪ್ರಯತ್ನ ಮಾಡಿದ್ದಾರೆ. ವಿಶ್ವಾಸ ಮತ ಯಾಚನೆ ವೇಳೆ ಮೈತ್ರಿ ಸರ್ಕಾರವನ್ನು ಬೆಂಬಲಿಸುವಂತೆ ಕೋರಿದ್ದಾರೆ. ಇದಕ್ಕೆ ನಾಗರಾಜ್​ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎನ್ನುವ ವಿಚಾರ ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಈಶ್ವರಪ್ಪ ಸಿಎಂ ಆಗೋಕೆ ಸ್ಕೆಚ್ ಹಾಕಿದ್ರಾ? ಸಾ.ರಾ. ಮಹೇಶ್ ವಿವರಣೆ ಕೇಳಿ ಸಿದ್ದರಾಮಯ್ಯ ಗರಂ

ರಾಜೀನಾಮೆ ಕೊಟ್ಟ ಅತೃಪ್ತ ಶಾಸಕರ ಮನವೊಲಿಸಲು ಡಿಕೆಶಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಒಂಟಿಯಾಗಿ ಡಿಕೆಶಿ ಎಲ್ಲರ ಮನೆಗೂ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರ ಉಳಿಸಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಅತೃಪ್ತರ ರಾಜೀನಾಮೆ ಪರ್ವ ಆರಂಭವಾದಾಗಿನಿಂದಲೂ ಡಿಕೆಶಿ ಆ್ಯಕ್ಟಿವ್​ ಆಗಿದ್ದಾರೆ. ಮುಂಬೈನಲ್ಲಿ ರೆಬೆಲ್​ಗಳು ಉಳಿದುಕೊಂಡಿದ್ದ ಹೋಟೆಲ್​ಗೆ ಮುಂಜಾನೆಯೇ ಭೇಟಿ ನೀಡುವ ವಿಫಲ ಪ್ರಯತ್ನ ಮಾಡಿದ್ದರು. ಈ ವೇಳೆ ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಹೀಗಿದ್ದರೂ ಡಿಕೆಶಿ ಛಲ ಬಿಟ್ಟಿಲ್ಲ.

ಇದನ್ನೂ ಓದಿ: ಸೋಮವಾರದವರೆಗೂ ತ್ರಿಪಕ್ಷಗಳ ಶಾಸಕರಿಗೆ ರೆಸಾರ್ಟ್​ವಾಸವೇ ಗತಿ; ವಿಶ್ವಾಸ ಗಳಿಸಲು ಹೆಚ್​ಡಿಕೆ ಕಸರತ್ತು
Loading...

First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...