Kodagu: ಶಾಲಾ ಆವರಣದಲ್ಲಿ ತ್ರಿಶೂಲದೀಕ್ಷೆ, ಕೊಡಗಿನ ಇಬ್ಬರು ಶಾಸಕರ ವಿರುದ್ಧ ದೂರು

ತರಬೇತಿಯಲ್ಲಿ ತ್ರಿಶೂಲ ದೀಕ್ಷೆ ಜೊತೆಗೆ ಗನ್ ಗಳಿಂದ ಶೂಟ್ ಮಾಡಿಸಿ ತರಬೇತಿ ನೀಡಿದೆ ಎನ್ನುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ತ್ರಿಶೂಲ ಮತ್ತು ಗನ್ ಗಳ ಬಳಸಿ ತರಬೇತಿ ನೀಡಿರುವ ಫೋಟೋಗಳನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಮತ್ತು ಡಿಜಿಪಿ ಅವರಿಗೆ ಟ್ಯಾಗ್ ಮಾಡಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಟ್ವಿಟ್ ಮಾಡಿದ್ದಾರೆ.

ತ್ರಿಶೂಲ ದೀಕ್ಷೆ

ತ್ರಿಶೂಲ ದೀಕ್ಷೆ

  • Share this:
ಕೊಡಗು(ಮೇ.17): ಹಿಜಬ್ ಧರಿಸಿ ಶಾಲೆಗೆ ಬರಲು ಅವಕಾಶವಿಲ್ಲ ಎಂದಿದ್ದ ಸರ್ಕಾರ (Government) ಅದಕ್ಕೆ ನಿರ್ಭಂಧ ಹೇರಿತ್ತು. ಆದರೆ ಶಾಲಾ ಕಟ್ಟಡದೊಳಗೆ ಭಜರಂಗದ ದಕ್ಷಿಣ ಕರ್ನಾಟಕ (Karnataka) ಪ್ರಾಂತೀಯ ಶೌರ್ಯ ಪ್ರಶಿಕ್ಷಾ ವರ್ಗ ನಡೆಸಿರೋದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಮೇ ಐದರಿಂದ 11 ರವರೆಗೆ ಕೊಡಗಿನ ಪೊನ್ನಂಪೇಟೆಯ ಶ್ರೀ ಸಾಯಿ ಶಂಕರ ಶಾಲೆಯಲ್ಲಿ (School) ಪ್ರಶಿಕ್ಷಾ ವರ್ಗ ನಡೆಸಲಾಗಿದೆ. ಈ ಸಂದರ್ಭ ತರಬೇತಿಯಲ್ಲಿ ತ್ರಿಶೂಲ ದೀಕ್ಷೆ ಜೊತೆಗೆ ಗನ್ ಗಳಿಂದ ಶೂಟ್ ಮಾಡಿಸಿ ತರಬೇತಿ ನೀಡಿದೆ ಎನ್ನುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ತ್ರಿಶೂಲ ಮತ್ತು ಗನ್ ಗಳ ಬಳಸಿ ತರಬೇತಿ ನೀಡಿರುವ ಫೋಟೋಗಳನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಮತ್ತು ಡಿಜಿಪಿ ಅವರಿಗೆ ಟ್ಯಾಗ್ ಮಾಡಿ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಟ್ವಿಟ್ ಮಾಡಿದ್ದಾರೆ.

ಹಿಜಬ್ ಧರಿಸಿ ಶಾಲೆಗೆ ಹೋಗಲು ಬಿಡದ ನೀವು, ಅಕ್ರಮವಾಗಿ ಶಸ್ತ್ರಾಸ್ತ್ರ ಬಳಸಿ ತರಬೇತಿ ನೀಡಲು ಅವಕಾಶ ನೀಡಿರುವ ಶ್ರಿ ಸಾಯಿ ಶಂಕರ ಶಾಲೆ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿ ಟ್ಯಾಗ್ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅಫ್ಸರ್ ಕೊಡ್ಲಿಪೇಟೆ  ಜಿಲ್ಲೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಬಳಸಿ ತರಬೇತಿ ನೀಡಲಾಗಿದೆ.

ಇದು ಭಯೋತ್ಪಾದನೆ ಕೆಲಸವಾಗಿದ್ದು ಸಂಬಂಧಿಸಿದ ಶಾಲೆ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಎಂಎಲ್ಸಿ ಸುಜಾ ಕುಶಾಲಪ್ಪ ಅವರು ತರಬೇತಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ.

ತ್ರಿಶೂಲ ನೀಡುವುದೇಕೆ?

ಹಾಗಾದರೆ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಏನಾಗಿದೆ ಎಂದು ಪ್ರಶ್ನಿಸಿದರು. ಎಸ್ಡಿಪಿಐ ಅವರ ಆರೋಪಕ್ಕೆ ತಿರುಗೇಟು ನೀಡಿರುವ ವಿಎಚ್ ಪಿ ಕೊಡಗು ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಹಿಂದಿನಿಂದಲೂ ಪ್ರತೀ ವರ್ಷ ಪ್ರಶಿಕ್ಷಾ ವರ್ಗ ನಡೆಸಿ ತ್ರಿಶೂಲ ನೀಡಲಾಗುತ್ತದೆ. ದುರ್ಗಾದೇವಿಯನ್ನು ಪೂಜಿಸಿದ ಬಳಿಕ ತ್ರಿಶೂಲ ಹೊಂದುವುದಕ್ಕೆ ಅವಕಾಶವಿದೆ.

ಇನ್ನು ಶೂಟಿಂಗ್ ತರಬೇತಿಗೆ ಬಳಸಿರುವುದು ಏರ್ ಗನ್ ಗಳನ್ನು ಮಾತ್ರ. ಅವುಗಳನ್ನು ಬಳಸುವುದಕ್ಕೆ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅವಕಾಶವಿದೆ. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ಇಷ್ಟು ಪರಿಜ್ಞಾನ ಎಸ್‍ಡಿಪಿಐ ಅಥವಾ ಪಿಎಫ್‍ಐನವರಿಗೆ ಇಲ್ಲವೇ ಎಂದು ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಕೃಷ್ಣ ಮೂರ್ತಿ ತಿರುಗೇಟು ನೀಡಿದರು. ಅಷ್ಟಕ್ಕೂ ನಾವು ಪೊನ್ನಂಪೇಟೆ ಪೊಲೀಸರಿಂದ ಒಪ್ಪಿಗೆ ಪಡೆದು ಕಾರ್ಯಕ್ರಮ ಮಾಡಿದ್ದೇವೆ. ನಾವು ಯಾವುದೇ ದೇಶ ದ್ರೋಹಿ ಕೆಲಸ ಮಾಡಿಲ್ಲ.

ಇದನ್ನೂ ಓದಿ: School Reopening: ಟೆಂಟ್​ನಲ್ಲಿ ಶಾಲೆ, ಬೀದಿಯಲ್ಲಿ ಮಕ್ಕಳಿಗೆ ಪಾಠ! ಮೊದಲ ದಿನವೇ ಈ ಅವಸ್ಥೆ

ಅಬ್ದುಲ್ ಮದನಿ ರೀತಿ ಎಲ್ಲಿಯೋ ಅಡಗಿಕುಳಿತು ನಾವು ತರಬೇತಿ ಮಾಡಿಲ್ಲ ಎಂದರು. ಈ ಕುರಿತು ಪ್ರತಿಕ್ರಿಯಿಸಿದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರು ಭಜರಂಗದಳ ಮತ್ತು ಸಂಘಪರಿವಾರದಿಂದ ಶಿಬಿರ ಮಾಡಿದ್ದಾರೆ. ಆದರೆ ಯಾವುದೇ ತರಬೇತಿ ನೀಡಿಲ್ಲ. ಅವರು ಪ್ರತೀ ವರ್ಷ ಮಾಡುವಂತೆ ಈ ವರ್ಷವೂ ಮಾಡಿದ್ದಾರೆ. ಬಳಸಿರುವುದು ಏರ್ ಗನ್ ಆಗಿರುವುದರಿಂದ ಅದರಿಂದ ಯಾವುದೇ ಸಮಸ್ಯೆಯೂ ಇಲ್ಲ.

ನೊಟೀಸ್ ನೀಡಲು ಸೂಚನೆ

ಈ ಕುರಿತು ಯಾರು ದೂರನ್ನು ಸಲ್ಲಿಸಿಲ್ಲ ಎಂದಿದ್ದಾರೆ. ಇನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಅವರು ಮಾತನಾಡಿ ಶಾಲೆಗಳನ್ನು ಇಂತಹ ಕಾರ್ಯಕ್ರಮಗಳಿಗೆ ನೀಡುವಂತಿಲ್ಲ. ಯಾವುದೇ ಒಪ್ಪಿಗೆ ಇಲ್ಲದೆ ಅಥವಾ ನಮ್ಮ ಗಮನಕ್ಕೆ ತಾರದೆ ಯಾವ ರೀತಿ ಶಾಲೆಯನ್ನು ಭಜರಂಗದಳ ತರಬೇತಿಗೆ ನೀಡಿದ್ದಾರೆ ಗೊತ್ತಿಲ್ಲ. ಈ ಕುರಿತು ಪರಿಶೀಲನೆ ಮಾಡಿ ವರದಿ ನೀಡುವಂತೆ ಮತ್ತು ಶಾಲೆಗೆ ಕಾರಣ ಕೇಳಿ ನೊಟೀಸ್ ನೀಡುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Gadaga: ಕೃಷಿಹೊಂಡದಲ್ಲಿ ಬಿದ್ದು ಮೂವರು ಬಾಲಕಿಯರ ಸಾವು! ಮದುವೆ ಮನೆಯಲ್ಲಿ ಸೂತಕದ ಛಾಯೆ

ಆದರೆ ತರಬೇತಿ ವಿಷಯ ಹೆಚ್ಚುಗೆ ಬರುತ್ತಿದ್ದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ ಸಮಿತಿ ಸದಸ್ಯ ಇಬ್ರಾಹಿಂ ಎಂಬುವವರು ಪೊನ್ನಂಪೇಟೆ ವೃತ್ತ ನಿರೀಕ್ಷಕರ ಕಚೇರಿಗೆ ದೂರು ನೀಡಿದ್ದಾರೆ. ಜಿಲ್ಲೆ ಇಬ್ಬರು ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ಎಂಎಲ್‍ಸಿ ಸುಜಾಕುಶಾಲಪ್ಪ, ವಿಎಚ್‍ಪಿ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಮುಖಂಡ ರಘು ಸಕಲೇಶಪುರ ಮತ್ತು ಸಾಯಿ ಶಂಕರ ವಿದ್ಯಾ ಸಂಸ್ಥೆ ಅಧ್ಯಕ್ಷ ಜರುಗಣಪತಿ ವಿರುದ್ಧ ದೂರು ನೀಡಿದ್ದಾರೆ.
Published by:Divya D
First published: